Monday, December 23, 2024

ಶಿವಣ್ಣನಿಗೆ ಸ್ವೀಟ್ 60; ಕೈಯಲ್ಲಿವೆ ಲೆಕ್ಕವಿಲ್ಲದಷ್ಟು ಪ್ರಾಜೆಕ್ಟ್ಸ್

ಅಣ್ಣಾವ್ರ ತನಯ.. ಮಾಜಿ ಸಿಎಂ ಅಳಿಯ.. 123 ಸಿನಿಮಾಗಳ ಒಡೆಯನಿಗೆ ಇಂದು ಹ್ಯಾಪಿ ಹುಟ್ದಬ್ಬ. ಯೆಸ್.. ಸ್ಯಾಂಡಲ್​ವುಡ್ ಕಿಂಗ್, ಇಂಡಸ್ಟ್ರಿ ಲೀಡರ್, ಸನ್ ಆಫ್ ಬಂಗಾರದ ಮನುಷ್ಯನಿಗೆ ಸ್ವೀಟ್ 60. ಎನರ್ಜಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಕರುನಾಡ ಚಕ್ರವರ್ತಿ ಶಿವಣ್ಣ ಇಂದು ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿಲ್ಲ.

ಶಿವಣ್ಣನಿಗೆ ಸ್ವೀಟ್ 60.. ಕೈಯಲ್ಲಿವೆ ಲೆಕ್ಕವಿಲ್ಲದಷ್ಟು ಪ್ರಾಜೆಕ್ಟ್ಸ್

ಅಪ್ಪುಗಾಗಿ ನೋ ಸೆಲೆಬ್ರೇಷನ್.. ಡಾ. ಶಿವಣ್ಣ ಮತ್ತಷ್ಟು ಬ್ಯುಸಿ

ರಜಿನಿ ಜೊತೆ ಕನ್ಫರ್ಮ್​.. ನಾಗಾರ್ಜುನ್ ಪೋಸ್ಟರ್ ಲಾಂಚ್

ವೇದ ಬೆನ್ನಲ್ಲಿ ನೀ ಸಿಗೋವರೆಗೂ, 45, ಘೋಸ್ಟ್, ಸತ್ಯಮಂಗಳ

ಅಪ್ಪನಿಲ್ಲ ಅನ್ನೋ ನೋವನ್ನಾದ್ರೂ ಕನ್ನಡಿಗರು ಭರಿಸುತ್ತಿದ್ದಾರೆ. ಆದ್ರೆ ಅಪ್ಪು ಇಲ್ಲ ಅನ್ನೋದನ್ನ ಮರೆಯಲಾಗದೆ ಪ್ರತೀ ದಿನ ಪ್ರತೀ ಕ್ಷಣ ಒದ್ದಾಡ್ತಿದ್ದಾರೆ. ಅದು ಪುನೀತ್ ರಾಜ್​ಕುಮಾರ್ ಅವ್ರ ಡೈ ಹಾರ್ಡ್​ ಫ್ಯಾನ್ಸ್ ಹಾಗೂ ಕನ್ನಡ ಕಲಾಭಿಮಾನಿಗಳಿಗೇ ಹಾಗನಿಸಿರಬೇಕಾದ್ರೆ, ಒಡಹುಟ್ಟಿದ ಸಹೋದರನಿಗೆ ಆ ನೋವು ಇನ್ನೆಷ್ಟು ಕಾಡಿರಬೇಡ ನೀವೇ ಹೇಳಿ.

ಅಪ್ಪು ಅಗಲಿಕೆ ದೊಡ್ಮನೆಯನ್ನ ಇನ್ನಿಲ್ಲದೆ ಕಾಡಿದೆ. ಅದ್ರಲ್ಲೂ ಕರುನಾಡ ಚಕ್ರವರ್ತಿ, ಸನ್ ಆಫ್ ಬಂಗಾರದ ಮನುಷ್ಯ ಶಿವರಾಜ್​ಕುಮಾರ್​ ಇಂದಿಗೂ ಅಪ್ಪು ಧ್ಯಾನದಲ್ಲೇ ಇದ್ದಾರೆ. ಇಂದು ಅವ್ರಿಗೆ 60ನೇ ಜನುಮ ದಿನ. ಅಭಿಮಾನಿ ದೇವರುಗಳು ಶಿವಣ್ಣನ ಬರ್ತ್ ಡೇನ ಉತ್ಸವದಂತೆ ಆಚರಿಸ್ತಾರೆ. ಆದ್ರೆ ಶಿವಣ್ಣ ಮಾತ್ರ ಎಲ್ಲಕ್ಕೂ ಬ್ರೇಕ್ ಹಾಕಿ, ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಪ್ಪು ಇಲ್ಲದೆ ಸೆಲೆಬ್ರೇಷನ್ ಮಾಡೋದು ಅಸಮಂಜಸ ಎಂದಿದ್ದಾರೆ.

ಅಣ್ಣಾವ್ರ ತನಯ, ಮಾಜಿ ಸಿಎಂ ಅಳಿಯ, 123 ಸಿನಿಮಾಗಳ ಒಡೆಯನಾಗಿರೋ ಶಿವಣ್ಣನಿಗೆ ನೂರಾರು ಅಭಿಮಾನಿ ಸಂಘಗಳಿವೆ. ಕೋಟ್ಯಂತರ ಮಂದಿ ಅಭಿಮಾನಿ ದೇವರುಗಳಿದ್ದಾರೆ. ಆದ್ರೆ ಅದ್ಯಾವುದರ ಹಂಗಿಲ್ಲದೆ, ಸರಳತೆಯ ಸಾರ್ವಭೌಮನಾಗಿ, ಸದಾ ಪ್ರೀತಿ ಹಂಚೋ ರಾಜಕುಮಾರನಾಗಿ ಎಲ್ಲರ ಮನೆ, ಮನಗಳನ್ನು ಗೆದ್ದಿದ್ದಾರೆ, ಬೆಳಗುತ್ತಿದ್ದಾರೆ. ಅವ್ರ ಎನರ್ಜಿ ಲೆವೆಲ್​ನ ಮತ್ಯಾರೂ ಮ್ಯಾಚ್ ಮಾಡಲಾರರು. ಅಷ್ಟರ ಮಟ್ಟಿಗೆ ಬೆಂಕಿ ಚೆಂಡು ಈ ಶಿವಣ್ಣ.

ಶಿವಣ್ಣನಿಗೆ ಪ್ರತೀ ವರ್ಷದಂತೆ ಈ ವರ್ಷವೂ ಒಂದು ದಿನವಷ್ಟೇ ಆಗದೆ, ಇದೊಂದು ವಿಶೇಷ ದಿನ ಅನಿಸಿದೆ. ಕಾರಣ ಇದು ಅವ್ರ 60ನೇ ಜನುಮ ದಿನ. ಎಲ್ರೂ ಸ್ವೀಟ್ 60 ಶಿವಣ್ಣ ಅಂತ್ಲೇ ಶುಭ ಹಾರೈಸ್ತಿದ್ದಾರೆ. ನಾಗವಾರದ ನಿವಾಸಿಗಳೆಲ್ಲಾ ಸೇರಿ, ಅವ್ರ ಶ್ರೀಮುತ್ತು ನಿವಾಸದ ಬಳಿ ಇರೋ ಸರ್ಕಲ್​ವೊಂದಕ್ಕೆ ಡಾ. ಶಿವರಾಜ್​ಕುಮಾರ್ ಸರ್ಕಲ್ ಅಂತ ನಾಮಕರಣ ಮಾಡೋ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದ್ದಾರೆ. ಇದಕ್ಕಿಂತ ಸಾರ್ಥಕತೆ ಇನ್ನೇನಿದೆ ಅಲ್ಲವೇ..?

ಬೈರಾಗಿ ಚಿತ್ರದಿಂದ 123 ಸಿನಿಮಾಗಳನ್ನ ಪೂರೈಸಿರೋ ಶಿವಣ್ಣ, ನೀ ಸಿಗೋವರೆಗೂ ಅನ್ನೋ 124ನೇ ಚಿತ್ರದಲ್ಲಿ ನಟಿಸ್ತಿದ್ದಾರೆ. ಜೊತೆಗೆ ತಮ್ಮದೇ ಹೋಮ್ ಬ್ಯಾನರ್ ಆಗಿರೋ ಗೀತಾ ಪಿಕ್ಚರ್ಸ್​ನಡಿ 125ನೇ ಸಿನಿಮಾ ವೇದದಲ್ಲಿ ನಟಿಸೋದ್ರ ಜೊತೆ ಬಂಡವಾಳ ಹಾಕಿ ನಿರ್ಮಾಪಕರೂ ಆಗ್ತಿದ್ದಾರೆ. ಇವಲ್ಲದೆ, ಶಿವಣ್ಣನ ವಯಸ್ಸಿನಂತೆ ಅವ್ರ ಸಿನಿಮಾಗಳ ಸಂಖ್ಯೆ ಕೂಡ ಆಂಜನೇಯನ ಬಾಲದಂತೆ ಬೆಳೆಯುತ್ತಾ ಹೋಗ್ತಿದೆ.

ಸನ್ ಪಿಕ್ಚರ್ಸ್​ ಬ್ಯಾನರ್​ನಡಿ ತಯಾರಾಗಲಿರೋ ಸೂಪರ್ ಸ್ಟಾರ್ ರಜಿನೀಕಾಂತ್ ಜೊತೆಗಿನ ಚಿತ್ರದಲ್ಲಿ ನಟಿಸ್ತಿರೋದನ್ನ ನಮ್ಮ ಪವರ್ ಟಿವಿಯ ಸಂದರ್ಶನದಲ್ಲಿ ಅಧಿಕೃತವಾಗಿ ಶಿವಣ್ಣ ಅವ್ರೇ ರಿವೀಲ್ ಮಾಡಿದ್ರು. ಇನ್ನು ಮತ್ತೊಂದು ಬಹುಭಾಷಾ ಚಿತ್ರ 45 ಪೋಸ್ಟರ್​ನ ಅಕ್ಕಿನೇನಿ ನಾಗಾರ್ಜುನ್ ರಿವೀಲ್ ಮಾಡಿ, ಶಿವಣ್ಣನಿಗೆ ಶುಭಾಶಯ ಕೋರಿದ್ದಾರೆ. 45 ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಿಸ್ತಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸ್ತಿದ್ದಾರೆ.

ಓಲ್ಡ್​ಮಾಂಕ್ ಫೇಮ್ ಶ್ರೀನಿ ಘೋಸ್ಟ್ ಸಿನಿಮಾನ ಶಿವಣ್ಣನಿಗೆ ಅನೌನ್ಸ್ ಮಾಡಿದ್ರು. ಇಂದು ಅಫಿಶಿಯಲ್ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಮಾಡಿ ಕಿಚ್ಚು ಹತ್ತಿಸಿದ್ದಾರೆ. ಕಿಚ್ಚ ಸುದೀಪ್ ಅವ್ರು ಘೋಸ್ಟ್​ ಲುಕ್ ರಿಲೀಸ್ ಮಾಡಿದ್ದು ಮತ್ತೊಂದು ವಿಶೇಷ. ‘ಕಿಂಗ್ ಆಫ್ ಆಲ್ ಮಾಸಸ್’ ಅನ್ನೋ ಟ್ಯಾಗ್​ಲೈನ್​ನಿಂದ ಘೋಸ್ಟ್ ಕ್ರೇಜ್ ದುಪ್ಪಟ್ಟಾಗಿದೆ.

ಇನ್ನು ಬೈರಾಗಿ ನಿರ್ಮಾಪಕ ಕೃಷ್ಣ ಸಾರ್ಥಕ್ ನಿರ್ಮಾಣದಲ್ಲಿ ಸತ್ಯ ಮಂಗಳ ಅನ್ನೋ ಇನ್ನೊಂದು ಪ್ರಾಜೆಕ್ಟ್ ತಯಾರಾಗಲಿದ್ದು, ‘ಒನ್ಸ್ ಎ ಗ್ಯಾಂಗ್​ಸ್ಟರ್.. ಈಸ್ ಆಲ್ವೇಸ್ ಎ ಗ್ಯಾಂಗ್​ಸ್ಟರ್’ ಅನ್ನೋ ಟ್ಯಾಗ್​ಲೈನ್ ಌಕ್ಷನ್ ಪ್ರಿಯರ ನಾಡಿಮಿಡಿತ ಹೆಚ್ಚಿಸಿದೆ. ಇದಲ್ಲದೆ ಖದರ್ ಕುಮಾರ್​ರ ಖದರ್, ಎಸ್​ಆರ್​ಕೆ 127 ಹೀಗೆ ಸಾಲು ಸಾಲು ಚಿತ್ರಗಳು ಶಿವಣ್ಣನ ಡೇಟ್ಸ್​ಗಾಗಿ ಕ್ಯೂ ನಿಂತಿವೆ. ಒಟ್ಟಾರೆ ಲಿವಿಂಗ್ ಲೆಜೆಂಡ್ ಆಗಿರೋ ಶಿವಣ್ಣ, ಕರುನಾಡಿನ ಕೊಹಿನೂರ್ ಡೈಮಂಡ್ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹ್ಯಾಪಿ ಬರ್ತ್ ಡೇ ಶಿವಣ್ಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES