Monday, December 23, 2024

ಶಿವಣ್ಣ ಬರ್ತ್​ಡೇ: ಕಿಚ್ಚನ ಕಡೆಯಿಂದ ಒಲಿದು ಬಂತು ಸ್ಪೆಷಲ್​ ಗಿಫ್ಟ್​

ಅರವತ್ತರಲ್ಲೂ ಹದಿನಾರರ ಉತ್ಸಾಹ, ಚುರುಕುತನದ ಚಿಲುಮೆ, ಕೋಟ್ಯಂತರ ಅಭಿಮಾನಿಗಳ ಅರಸ, ಕನ್ನಡ ಕಸ್ತೂರಿ ಹ್ಯಾಟ್ರಿಕ್​​ ಹೀರೋ ಶಿವಣ್ಣ ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸೋಕೆ ಕನಸು ಕಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅಪ್ಪು ಇಲ್ಲದ ನೋವಿನಲ್ಲಿ ಸಡಗರ ಸಂಭ್ರಮಕ್ಕೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ ಡಾ.ಶಿವಣ್ಣ. ಇದ್ರ ನಡುವೆ ಶಿವಣ್ಣನಿಗೆ ಗೌರವಾರ್ಥವಾಗಿ ಮಾನ್ಯತಾ ಟೆಕ್​ ಸರ್ಕಲ್​ಗೆ ಶಿವರಾಜ್​ಕುಮಾರ್​ ಹೆಸರಿಡಲಾಗಿದೆ.

ಮನೆಬಾಗಿಲಲ್ಲಿ ಕಾದು ನಿಂತು ವಾಪಾಸಾದ ಅಭಿಮಾನಿ ಬಳಗ

ಕಿಚ್ಚನ ಕಡೆಯಿಂದ ಒಲಿದು ಬಂತು ಸ್ಪೆಷಲ್​ ಬರ್ತ್​ಡೇ ಗಿಫ್ಟ್​..!

ಬೆಳೆದಿದ್ದು ಮದ್ರಾಸಿನಲ್ಲಿ, ಓದಿದ್ದೂ ಬಿ.ಎಸ್ಸಿ. ತಂದೆ ಕರುನಾಡಿಗೆ ಬಂಗಾರದ ಮನುಷ್ಯನಾಗಿ ಮಿಂಚ್ತಿದ್ದ ಕಾಲ ಅದು. ನಾಗರಾಜು ಎಂಬ ಹೆಸರಿನ ಮುದ್ದು ಪೋರ ಮುಂದೊಂದು ದಿನ ಕನ್ನಡ ಚಿತ್ರರಂಗದಲ್ಲಿ ಅರಸನಾಗಿ ಮೆರೆಯುತ್ತಾನೆ ಎಂದೂ ಯಾರು ಊಹಿಸಿರಲಿಲ್ಲ. ಅಣ್ಣಾವ್ರ ಹಿರಿಯ ಮಗ ಶಿವಣ್ಣನ ಪರಿಚಯ ಕೂಡ ಹೆಚ್ಚಿನ ಸಿನಿಪ್ರಿಯರಿಗೆ ತಿಳಿದಿರಲಿಲ್ಲ. ಮೊದಲ ಸಿನಿಮಾ ಆನಂದ್​​ ಚಿತ್ರದ ಮೂಲಕ ಸಿಂಹದ ಹೆಜ್ಜೆ ಇಟ್ಟು ಬಂದ ಶಿವಣ್ಣ ಮತ್ತೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ತಿರುಗಿ ನೋಡುವಷ್ಟು ಪುರುಸೊತ್ತಿಲ್ಲದ ಹೆಮ್ಮೆಯ ಕನ್ನಡಿಗ ಡಾ.ಶಿವಣ್ಣ.

ಆನಂದ್​​, ರಥಸಪ್ತಮಿ, ಮನಮೆಚ್ಚಿದ ಹುಡುಗಿ ಸಿನಿಮಾಗಳ ಮೂಲಕ ಹ್ಯಾಟ್ರಿಕ್​​ ಶತದಿನೋತ್ಸವ ಆಚರಿಸಿದ ಲಕ್ಕಿ ಲೆಗ್​​ ಡಾ.ಶಿವರಾಜ್​​ಕುಮಾರ್​​​. ಶಿವಣ್ಣ ತಂದೆ ಹಾಕಿದ ಮರಕ್ಕೆ ಜೋತು ಬಿದ್ದವರಲ್ಲ. ತಮ್ಮದೇ ಪರಿಶ್ರಮ, ಶ್ರದ್ಧೆ, ಸಾಮರ್ಥ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅರಸನಾಗಿ ಮೆರೆದ ಅಪ್ಪಟ ಚಿನ್ನದ ಗಣಿ ಶಿವಣ್ಣ. ದೊಡ್ಮನೆಯ ಹೆಸರನ್ನು ಚಾಚು ತಪ್ಪದೇ ಉಳಿಸಿ, ಬೆಳೆಸಿಕೊಂಡು ಬರ್ತಿರೋ ಪ್ರತಿಭಾವಂತ ಕಲಾವಿದ ಶಿವರಾಜ್​ಕುಮಾರ್​​​ ಇಂದು 60ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಪ್ಪು ಇಲ್ಲದ ನೋವಿನಲ್ಲಿ ಬರ್ತ್​ಡೇ ಸಂಭ್ರಮಕ್ಕೆ ಫುಲ್​ಸ್ಟಾಪ್​ ಇಟ್ಟಿರೋ ಸೆಂಚುರಿ ಸ್ಟಾರ್​​ ಸರಳವಾಗಿ ಬರ್ತ್​ ಡೇ ಸಂಭ್ರಮಿಸಿದ್ದಾರೆ.

ಅವ್ರ ಸಿನಿಕರಿಯರ್​ನಲ್ಲಿ ಓಂ, AK47, ಜನುಮದ ಜೋಡಿ, ಜೋಗಿ, ಮಫ್ತಿ ಸಿನಿಮಾಗಳು ಅವ್ರ ಮನೋಘ್ನ ಅಭಿನಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಯುವನಟರೇ ಸಿನಿಮಾಗಳಿಲ್ಲದೇ ಖಾಲಿ ಕೈಯಲ್ಲಿ ಕೂತಿರುವಾಗ ಎಂಟರಿಂದ ಹತ್ತು ಪ್ರಾಜೆಕ್ಟ್​​​ಗಳನ್ನು ಅಂಗೈಯಲ್ಲಿ ಇಟ್ಟುಕೊಂಡಿರುವ ಮೋಸ್ಟ್​ ಬ್ಯುಸಿಯೆಸ್ಟ್​ ನಟ ಡಾ.ಶಿವರಾಜ್​ಕುಮಾರ್​​​. ಇವ್ರ ಸಿನಿಮಾ ಸಾಧನೆಯ ಪ್ರತೀಕವಾಗಿ ಅನೇಕ ಸಂಘ ಸಂಸ್ಥೆಗಳು ತಲೆ ಎತ್ತಿವೆ. ಅನೇಕ ರಸ್ತಗಳಿಗೆ ಇವ್ರ ಹೆಸರಿಡಲಾಗಿದೆ. ಇಂದು ಕೂಡ ಶಿವಣ್ಣ ಅವ್ರು ವಾಸವಾಗಿರುವ ಮಾನ್ಯತಾ ಟೆಕ್​ ಪಾರ್ಕ್​​​​ಗೆ ಡಾ.ಶಿವರಾಜ್​​​​ ಕುಮಾರ್​ ವೃತ್ತ ಎಂದು ಹೆಸರಿಡಲಾಗಿದೆ.


ಇದ್ರ ಜತೆಯಲ್ಲಿ ಸ್ಯಾಂಡಲ್​ವುಡ್​​ ಕೂಡ ಶಿವಣ್ಣನ ಬರ್ತ್​ಡೇಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟಿದೆ. ಸ್ಯಾಂಡಲ್​ವುಡ್​ ಬಾದ್​ಷಾ ಕಿಚ್ಚ ಸುದೀಪ್​​ ಘೋಸ್ಟ್​​​ ಚಿತ್ರದ ಕಿಂಗ್​ ಆಫ್​ ಆಲ್​ ಮಾಸಸ್​ ಪೋಸ್ಟರ್​ ರಿಲೀಸ್​ ಮಾಡಿ ಬರ್ತ್​ ಡೇಗೆ ಶುಭ ಕೋರಿದ್ದಾರೆ. ಚಿತ್ರರಂಗದ ಕಡೆಯಿಂದ ಶಿವಣ್ಣನ ಕಾಮನ್​ ಡಿಪಿ ಬಿಡುಗಡೆ ಮಾಡಿ ಭಜರಂಗಿಗೆ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್​​ ಜೊತೆ ಜೈಲರ್​​, ಪ್ರುಭುದೇವ್​ ಜೊತೆಯಲ್ಲಿ ಮತ್ತೊಂದು ಸಿನಿಮಾ, ವೇದ, ಅಶ್ವತ್ಥಾಮ ಹೀಗೆ ಸಾಲು,ಸಾಲು ಸಿನಿಮಾಗಳ ಸರದಾರ ಶಿವಣ್ಣ. ಹೋದಲ್ಲಿ,ಬಂದಲ್ಲಿ ಸರಳತೆಯ ಸಾಕಾರಮೂರ್ತಿಯಾಗಿ ಕಂಗೊಳಿಸುತ್ತಿರುವ ಬಂಗಾರ ಸನ್​ ಆಫ್​ ಬಂಗಾರದ ಮನುಷ್ಯನಿಗೆ ಪವರ್​ ಟಿವಿ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯ. ನೂರಾರು ಕಾಲ ಸುಖವಾಗಿ ಬಾಳಿ ಡಾ.ಶಿವಣ್ಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ ಪವರ್​ ಟಿವಿ

RELATED ARTICLES

Related Articles

TRENDING ARTICLES