Monday, December 23, 2024

ಓ ಮೈ ಲವ್ ಗುಬ್ಬಿ ಗೂಡಲ್ಲಿ ಕೌಟುಂಬಿಕ ಮೌಲ್ಯದ ದಿಬ್ಬಣ

ಪ್ರೀತಿ- ಪ್ರೇಮದ ಹೊಳೆ ಹರಿಸೋಕೆ ಓ ಮೈ ಲವ್ ಅಂತ ಬೆಳ್ಳಿತೆರೆ ಮೇಲೆ ಬರ್ತಿದ್ದಾರೆ ಜೂನಿಯರ್ ಸುಪ್ರೀಂ ಹೀರೋ ಅಕ್ಷಿತ್ ಶಶಿಕುಮಾರ್. ಸನಾದಿ ಅಪ್ಪಣ್ಣನ ಕುಟುಂಬದ ಕುಡಿಯೊಂದಿಗೆ ಎಂಟ್ರಿ ಕೊಡ್ತಿರೋ ಅಕ್ಷಿತ್,​​ ಹುಡ್ಗ- ಹುಡ್ಗಿ ಪ್ರೇಮ್ ಕಹಾನಿ ಜೊತೆ ಕೌಟುಂಬಿಕ ಮೌಲ್ಯಗಳ ದಿಬ್ಬಣ ಹೊರಡಿಸಲಿದ್ದಾರೆ.

ಓ ಮೈ ಲವ್ ಗುಬ್ಬಿ ಗೂಡಲ್ಲಿ ಕೌಟುಂಬಿಕ ಮೌಲ್ಯದ ದಿಬ್ಬಣ

ತುಂಬಿದ ಕುಟುಂಬಕ್ಕೆ ಕೇರ್ ಆಫ್ ಅಡ್ರೆಸ್ ಈ ಓ ಮೈ ಲವ್

ಸನಾದಿ ಅಪ್ಪಣ್ಣ ಮೊಮ್ಮಗಳೊಂದಿಗೆ ಜೂ. ಸುಪ್ರೀಂ ಹೀರೋ

ನಿರ್ಮಾಪಕ ರಾಮಾಂಜಿನಿ ಕಥೆ.. ಸ್ಮೈಲ್ ಶ್ರೀನು ಕರಾಮತ್ತು..!

ಹೊಸ ಜಾನರ್​ನ ವಿಭಿನ್ನ ಪ್ರೇಮಕಥೆಯೊಂದನ್ನು ಯುವ ನಿರ್ದೇಶಕ ಸ್ಮೈಲ್‌ ಶ್ರೀನು ಅವರು ಓ ಮೈ ಲವ್ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ನಡೆಯಿತು. ರೊಮ್ಯಾಂಟಿಕ್ ಜಾನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸ್ಸಿನ ಯುವ ಮನಸುಗಳ ಮನದಲ್ಲಿನ ತಳಮಳ, ಪ್ರೀತಿ, ಪ್ರೇಮದ  ಕುರಿತಾದ ವಿಷಯಗಳನ್ನು ಹೇಳಲಾಗಿದೆ.

ಸ್ಮೈಲ್‌ ಶ್ರೀನು ಅವ್ರು ರೆಗ್ಯುಲರ್ ಜಾನರ್ ಬಿಟ್ಟು ಬೇರೆ ತರಹದ ನಿರೂಪಣೆಯನ್ನು  ಈ ಚಿತ್ರದಲ್ಲಿ  ಮಾಡಿದ್ದಾರೆ. ಫ್ಯಾಮಿಲಿ ಎಲಿಮೆಂಟ್ಸ್ ಹಾಗೂ ಹಾಸ್ಯದ ಜೊತೆಗೆ  ಒಂದು ಪ್ರೇಮಕಥೆಯನ್ನ ಹೀಗೂ ಹೇಳಬಹುದು ಅನ್ನೋದನ್ನ ತೋರಿಸೋಕೆ ಹೊರಟಿದ್ದಾರೆ. ಸುಪ್ರೀಂ ಹೀರೋ ಪುತ್ರ ಅಕ್ಷಿತ್ ಶಶಿಕುಮಾರ್ ಈ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ  ಕೀರ್ತಿ ಕಲಕೇರಿ ಕಾಣಸಿಗಲಿದ್ದಾರೆ. ಅಂದಹಾಗೆ ಜೂನಿಯರ್ ಸುಪ್ರೀಂ ಹೀರೋ ಜೊತೆ ರೊಮ್ಯಾನ್ಸ್ ಮಾಡಲಿರೋ ಈ ಚೆಲುವೆ ಸನಾದಿ ಅಪ್ಪಣ್ಣ ಅವ್ರ ಕುಟುಂಬದ ಕುಡಿ ಅನ್ನೋದು ವಿಶೇಷ.

ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ ಈ ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ  ಚಿತ್ರೀಕರಿಸಲಾಗಿದೆ. ರಾಜ್ಯಾದ್ಯಂತ ಕನ್ನಡ ಕಲಾರಸಿಕರಿಂದ ಪ್ರಮೋಷನ್ ವೇಳೆ ಚಿತ್ರಕ್ಕೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಕಮರ್ಷಿಯಲ್ ಮ್ಯೂಸಿಕಲ್ ಲವ್ ಸ್ಟೋರಿ ಎಂದಿದ್ದಾರೆ ನಿರ್ದೇಶಕ.

ಎರಡು ಗೀತೆಗಳು ಈಗಾಗಲೇ  ಹಿಟ್ ಆಗಿದ್ದು, ಸಾಹಸ ದೃಶ್ಯಗಳು ಸಹ ಡೇರಿಂಗ್ ಹಾಗೂ ಡೆಡ್ಲಿಯಾಗಿ ಮೂಡಿಬಂದಿವೆ. ಜೊತೆಗೆ ಎಲ್ಲಾ ಥರದ ಎಮೋಷನ್ಸ್ ಚಿತ್ರಕ್ಕೆ ಪ್ಲಸ್ ಆಗಲಿದೆ. ನಾಯಕ ಅಕ್ಷಿತ್​ಗೆ ಇದೊಂದು ಹಾರ್ಟ್​ ಟಚಿಂಗ್ ಎಂಟರ್​ಟೈನರ್ ಅಂತೆ. ಕಲಾಸಾಮ್ರಾಟ್ ಎಸ್ ನಾರಾಯಣ್​ರಿಂದ ಸಾಕಷ್ಟು ಕಲಿತರಂತೆ. ಸೀತಾಯಣ ಒಂಥರಾ ಡಬ್ಬಿಂಗ್ ಸಿನಿಮಾ ಆಗಿದ್ದು, ಓ ಮೈ ಲವ್ ಲಾಂಚ್ ಚಿತ್ರ ಆಗ್ತಿದೆ.

ನಾಯಕಿ ಕೀರ್ತಿ ಕಲ್ಕರೆ  ಮಾತನಾಡಿ ನಾವು ಕಾಲೇಜುಗಳಿಗೆ ಭೇಟಿ ನೀಡಿದಾಗ ಒಳ್ಳೆಯ ಸ್ಪಂದನೆ ಸಿಗುತ್ತಿತ್ತು. ಚಿತ್ರದಲ್ಲಿ ಕಾಮಿಡಿ, ಲವ್, ಫೈಟ್, ಫ್ರೆಂಡ್‌ಶಿಪ್ ಎಲ್ಲವೂ ಇದೆ ಎಂದರು. ನಂತರ ಮಾತನಾಡಿದ  ಎಸ್.ನಾರಾಯಣ್  ನಿರ್ಮಾಪಕರು ನಿರ್ದೇಶಕರಿಗೆ  ಬೇಕಾದ ಎಲ್ಲಾ  ಅನುಕೂಲತೆಗಳನ್ನು ಮಾಡಿಕೊಟ್ಟಿರುವುದರಿಂದ ಚಿತ್ರವು ಅದ್ಬುತವಾಗಿ ಮೂಡಿಬಂದಿದೆ.  ಇಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಹೆಚ್ಚು ಹೆಚ್ಚು ಬರಬೇಕು ಎಂದರು.

ನಿರ್ಮಾಪಕ ಜಿ.ರಾಮಾಂಜಿನಿ ಅವ್ರು ಈ ಚಿತ್ರಕ್ಕೆ ಬರೀ ಹಣವಷ್ಟೇ ಹೂಡಿಲ್ಲ. ಬದಲಿಗೆ ಕಥೆ ಕೂಡ ಅವರದ್ದೇ. ಒಂದೊಳ್ಳೆ ಸಿನಿಮಾನ ಕನ್ನಡದ ಜನತೆಗೆ ಕಾಣಿಕೆಯಾಗಿ ನೀಡಬೇಕು ಅನ್ನೋ ಉದ್ದೇಶದಿಂದ ಆತ್ಮೀಯ ಗೆಳೆಯ ಸ್ಮೈಲ್ ಶ್ರೀನು ಬಳಿ ಡೈರೆಕ್ಟ್ ಮಾಡಿಸಿದ್ದಾರೆ.  ಮಗಧೀರ ಖ್ಯಾತಿಯ ದೇವ್​ಗಿಲ್ ಕೂಡ ಚಿತ್ರದಲ್ಲಿದ್ದು, ಸಿನಿಮಾದ ಮೇಕಿಂಗ್ ಕ್ವಾಲಿಟಿ ನೆಕ್ಸ್ಟ್ ಲೆವೆಲ್​ಗಿದೆ. ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್, ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್ ಸೇರಿದಂತೆ ಬಹುದೊಡ್ಡ  ತಾರಾಗಣವೇ ಈ ಚಿತ್ರದಲ್ಲಿದೆ.

ಮದ್ವೆ ಸೆಲೆಬ್ರೇಷನ್​ನ ನೆನಪಿಸೋ ತುಂಬಿದ ಕುಟುಂಬಗಳ ಕಲರವಸ ಹಾಡೊಂಡು ರೀಸೆಂಟ್ ಆಗಿ ರಿಲೀಸ್ ಆಗಿದ್ದು, ಇಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರ ಸಮಾಗಮದ ದೃಶ್ಯಗಳು ನಿಜಕ್ಕೂ ಫೀಲ್ ಗುಡ್ ಅನಿಸಿವೆ. ಫ್ಯಾಮಿಲಿ ಮೌಲ್ಯಗಳನ್ನು ಎತ್ತಿ ಹಿಡಿಯೋ ಅಂತಹ ಈ ರೀತಿಯ ಚಿತ್ರಗಳು ಮತ್ತಷ್ಟು ತಯಾರಾಗಬೇಕಿದೆ. ಒಟ್ಟಾರೆ ಜುಲೈ 15ಕ್ಕೆ ಪ್ರೇಮದ ಹೊಳೆ ಹರಿಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES