Monday, December 23, 2024

PSI ಅಕ್ರಮ: ಗಣಪತಿ ಭಟ್ ಸಿಐಡಿ​ ವಶಕ್ಕೆ

ಕಾರವಾರ : 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೇರೂರು ಗ್ರಾಮ ನಿವಾಸಿ ಗಣಪತಿ ವಿ.ಭಟ್​​​ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್‌ಫರ್ ಹಾಗೂ ಇತರ ಡೀಲಿಂಗ್‌ಗಳಲ್ಲಿ ಸಕ್ರಿಯನಾಗಿದ್ದ ಎಂಬ ಬಗ್ಗೆ ತಿಳಿದು ಬಂದಿದೆ.

ಸಿದ್ದಾಪುರ ತಾಲೂಕಿನ ನೆಲೆಮಾವಿನ ನಿವಾಸಿ ಗಣಪತಿ ಭಟ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಗಣಪತಿ ಭಟ್ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಗಣಪತಿ ಭಟ್ ಅವರನ್ನು ವಶಕ್ಕೆ ಪಡೆದಿದ್ದಾರೆ. 545 ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ಪೊಲೀಸರು ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿರಸಿ ಮೂಲದ ವ್ಯಕ್ತಿ ಗಣಪತಿ ಭಟ್​ರನ್ನು ಎಲ್ಲಾ ಹಂತದಲ್ಲಿ ತನಿಖೆ ಮಾಡಲಾಗುತ್ತಿದೆ. ಹೆಸರಿನ ವಿಚಾರದಲ್ಲಿ ಕೆಲ ಗೊಂದಲ ಆಗಿತ್ತು. ನನ್ನ ಕಚೇರಿಯಲ್ಲೂ ಗಣಪತಿ ಭಟ್ ಅಂತ ಇದ್ದಾರೆ. ಹೀಗಾಗಿ ಗೊಂದಲ ಆಗಿದೆ. ಸದ್ಯ ಶಿರಸಿಯಲ್ಲಿ ಗಣಪತಿ ಭಟ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ರು

RELATED ARTICLES

Related Articles

TRENDING ARTICLES