ರಾಮನಗರ: ಕಾಂಗ್ರೆಸ್ ಪಕ್ಷದಲ್ಲಿರುವಂತೆ ಬಿಜೆಪಿಯಲ್ಲಿ ಯಾವುದೇ ಒಳಜಗಳ, ಭಿನ್ನಾಭಿಪ್ರಾಯಗಳು ಇಲ್ಲ. ನಮ್ಮ ಪಕ್ಷ ಬಲಿಷ್ಠವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಲ್ಲಿರುವ ಕಿತ್ತಾಟ ನೋಡುತ್ತಿದ್ದೇವೆ. ಕೆಲವರು ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಿಸಬೇಕು ಎನ್ನುತ್ತಾರೆ. ಮತ್ತೆ ಕೆಲವರು ಬೇಡ ಎನ್ನುತ್ತಿದ್ದಾರೆ. ಒಟ್ಟಾರೆ ಪಕ್ಷದಲ್ಲಿಯೇ ಸಿದ್ದರಾಮಯ್ಯ ಅವರ ಪಂಚೆ ಎಳೆಯುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಡಿ.ಕೆ.ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು ಅಧಿಕಾರದ ಆಸೆಯಿಂದ ಪಾಪ ಅಣ್ಣ-ತಮ್ಮ ಇಬ್ಬರೂ ಸೂಟು ಬೂಟು ಹೊಲಿಸಿಕೊಂಡು ರೆಡಿಯಾಗಿದ್ದರು. ಆದರೆ, ಈಗ ನಿರಾಶರಾಗಿದ್ದಾರೆ ಇಬ್ಬರೂ ಚಿತ್ರಾನ್ನ ಗಿರಾಕಿಗಳು ಎಂದು ಕಿಡಿಕಾರಿದ್ದಾರೆ. ನಾವು ಜನರಿಗಾಗಿ ಬದುಕುತ್ತೇವೆ ಹೊರತು ಅಧಿಕಾರಕ್ಕಾಗಿ ಅಲ್ಲ. ಅದರೆ, ಡಿ.ಕೆ.ಸಹೋದರರು ಅಧಿಕಾರಕ್ಕಾಗಿ ಬದುಕುವವರು. ಜನರಿಗಾಗಿ ಬದುಕುವವರಿಗೆ ಯಾವತ್ತೂ ನಿರಾಸೆಯಾಗಲ್ಲ ಎಂದು ಹೇಳಿದರು.