Saturday, January 18, 2025

ಸೆಪ್ಟೆಂಬರ್ 9ಕ್ಕೆ ಜಮಾಲಿ ಗುಡ್ಡದ ಸೀಕ್ರೆಟ್ಸ್ ಬಟಾ ಬಯಲು

ಸ್ಯಾಂಡಲ್​ವುಡ್ ಅಂಗಳದಲ್ಲಿ ಹಿರೋಶಿಮಾ- ನಾಗಸಾಗಿಯ ಸದ್ದು ಸಖತ್ ಜೋರಿದೆ. ಅರೇ ಸೆಕೆಂಡ್ ವರ್ಲ್ಡ್​ ವಾರ್ ಕುರಿತ ಸಿನಿಮಾ ಏನಾದ್ರು ಶುರು ಆಗ್ತಿದೆಯಾ ಅಂತ ಹುಬ್ಬೇರಿಸಬೇಡಿ. ಆದ್ರೆ ಇದು ಕೂಡ ಒಂಥರಾ ಯುದ್ಧಾನೇ. ಅದು ಯಾರಿಗಾಗಿ..? ಯಾರ ನಡುವೆ..? ಜಪಾನ್​ನ ಆ ಎರಡು ಸಿಟಿಗಳ ಟೈಟಲ್​ಗಳು ಇಲ್ಯಾಕೆ ಬಂತು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್​ ಇಲ್ಲಿದೆ. ಜಸ್ಟ್ ವಾಚ್.

ಹಿರೋಶಿಮಾ – ನಾಗಸಾಕಿಯಾಗಿ ಡಾಲಿ – ಯಶ್ ಮೋಡಿ

ಅವಳಿ ನಗರಗಳ ಹೆಸ್ರಲ್ಲಿ ಅವಳಿ ಖೈದಿಗಳಿಬ್ಬರ ಅನಾವರಣ

ಟೈಟಲ್ & ಪಾತ್ರಗಳಿಂದ ಜಮಾಲಿ ಗುಡ್ಡ ಸಖತ್ ಡಿಫರೆಂಟ್

ಸೆಪ್ಟೆಂಬರ್ 9ಕ್ಕೆ ಜಮಾಲಿ ಗುಡ್ಡದ ಸೀಕ್ರೆಟ್ಸ್ ಬಟಾ ಬಯಲು..!

ಹಿರೋಶಿಮಾ & ನಾಗಸಾಕಿ.. ಈ ಹೆಸ್ರುಗಳು ಕೇಳ್ತಿದ್ದಂತೆ ಇತಿಹಾಸ ನೆನಪಾಗುತ್ತೆ. ಎರಡನೇ ಮಹಾ ಪ್ರಪಂಚ ಯುದ್ಧ ಕಣ್ಮುಂದೆ ಬರುತ್ತೆ. ಅದ್ರಲ್ಲೂ ಪರಮಾಣು ದಾಳಿಗೊಳಗಾಗಿ ಅಕ್ಷರಶಃ ಸ್ಮಶಾನಗಳಾಗಿ ಬದಲಾದ ಜಪಾನ್​ನ ಆ ಬ್ಯೂಟಿಫುಲ್ ಅವಳಿ ನಗರಗಳು ನೆನಪಾಗುತ್ತವೆ. ಹೌದು.. ಹಿರೋಶಿಮಾ- ನಾಗಸಾಕಿಗೆ ಅದರದ್ದೇ ಆದ ಹಿಸ್ಟರಿ ಇದೆ. ಆದ್ರೀಗ ನಾವು ಹೇಳೋಕೆ ಹೊರಟಿರೋದು ಆ ಯುದ್ಧದ ನಗರಗಳ ಬಗ್ಗೆ ಅಲ್ಲ. ಆ ಹೆಸರುಗಳಲ್ಲಿರೋ ಇಬ್ಬರು ಖೈದಿಗಳ ಬಗ್ಗೆ ಅನ್ನೋದು ಇಂಟರೆಸ್ಟಿಂಗ್.

ಸಾಮಾನ್ಯವಾಗಿ ಸುಕ್ಕಾ ಸೂರಿ, ದುನಿಯಾ ವಿಜಯ್, ಪ್ರಶಾಂತ್ ನೀಲ್ ಅಂತಹ ಡೈರೆಕ್ಟರ್​ಗಳು ತಮ್ಮ ಸಿನಿಮಾಗಳಲ್ಲಿನ ಕ್ಯಾರೆಕ್ಟರ್​ಗಳಿಗೆ ಆ ರೀತಿಯ ಹೆಸ್ರುಗಳನ್ನು ಇಡ್ತಿದ್ರು. ಆದ್ರೀಗ ಒನ್ಸ್ ಅಪ್ ಆನ್ ಎ ಟೈಮ್ ಜಮಾಲಿ ಗುಡ್ಡ ಚಿತ್ರಕ್ಕಾಗಿ ನಿರ್ದೇಶಕ ಕುಶಾಲ್ ಗೌಡ ಎರಡು ಪಾತ್ರಗಳಿಗೆ ಹಿರೋಶಿಮಾ ಹಾಗೂ ನಾಗಸಾಕಿ ಅಂತ ಹೆಸರಿಟ್ಟಿದ್ದಾರೆ. ಹೌದು.. ಹಿರೋಶಿಮಾ ಆಗಿ ಡಾಲಿ ಧನಂಜಯ, ನಾಗಸಾಕಿ ಆಗಿ ಯಶ್ ಶೆಟ್ಟಿ ಮಿಂಚಲಿದ್ದಾರೆ.

ಅಂದಹಾಗೆ ಇಲ್ಲಿಯವರೆಗೆ ಈ ಚಿತ್ರದ ಕಥೆ, ಎಳೆ, ಜಾನರ್ ಯಾವುದನ್ನೂ ಬಿಟ್ಟುಕೊಡದ ಚಿತ್ರತಂಡ, ಬರೀ ಕ್ಯಾರೆಕ್ಟರ್​​ಗಳನ್ನಷ್ಟೇ ರಿವೀಲ್ ಮಾಡಿತ್ತು. ಇದು ಮಗುವಿನೊಂದಿಗೆ ಹಿರೋಶಿಮಾ ಪಾತ್ರದಾರಿ ಡಾಲಿಯ ಜರ್ನಿಯ ಕಥಾನಕ ಆಗಲಿದ್ದು, ಇಲ್ಲಿ ಯಶ್- ಡಾಲಿ ಇಬ್ಬರೂ ಖೈದಿಗಳಾಗಿ ಕಾಣಸಿಗಲಿದ್ದಾರೆ. ಇತಿಹಾಸದ ಯುದ್ಧದಂತೆ ಇಲ್ಲಿಯೂ ಮಗುವಿಗಾಗಿ ನಡೆಯೋ ಯುದ್ಧ ಇದಾಗಿರಲಿದೆ ಅಂತ ಶಂಕಿಸಲಾಗಿದೆ. ಆದ್ರೆ ಇವರಿಬ್ಬರ ಗೆಟಪ್​ಗಳು ವಿಚಿತ್ರವಾಗಿದ್ದು, ಸಂಥಿಂಗ್ ಫ್ರೆಶ್ ಫೀಲ್ ಕೊಡ್ತಿವೆ.

ಶ್ರೀಹರಿ ನಿರ್ಮಾಣದ ಈ ಸಿನಿಮಾದಲ್ಲಿ ಡಾಲಿ ಜೊತೆ ಬಹುದೊಡ್ಡ ತಾರಾಗಣವಿದೆ. ನಾಯಕನಟಿಯಾಗಿ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದು, ಈ ಹಿಂದೆ ಫೈಟ್ ಸೀಕ್ವೆನ್ಸ್ ಮೇಕಿಂಗ್​​ ಎಲ್ಲರ ಗಮನ ಸೆಳೆದಿತ್ತು. ಒಟ್ನಲ್ಲಿ ಜಮಾಲಿಗುಡ್ಡದಿಂದ ಸ್ಯಾಂಡಲ್​ವುಡ್​ನಲ್ಲಿ ಒಂದೊಳ್ಳೆ ಪ್ರಯೋಗವಂತೂ ಆಗ್ತಿದೆ. ಸಿನಿಮಾದ ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು, ಇದೇ ಸೆಪ್ಟೆಂಬರ್ 9ಕ್ಕೆ ತೆರೆಗಪ್ಪಳಿಸಲಿದೆ.

ಸದಾ ಹೊಸತನಕ್ಕೆ ಹಾತೊರೆಯೋ ಡಾಲಿ ಧನಂಜಯ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿದ್ರೂ ಸಹ ಈ ರೀತಿ ಭಿನ್ನ ವಿಭಿನ್ನ ಕಥೆಗಳು ಹಾಗೂ ಪಾತ್ರಗಳಿಗೆ ತಮ್ಮನ್ನ ಒಡ್ಡಿಕೊಳ್ತಿರೋದು ನಿಜಕ್ಕೂ ಗ್ರೇಟ್. ಒಬ್ಬ ವರ್ಸಟೈಲ್ ಌಕ್ಟರ್​ಗೆ ಇರಬೇಕಾದ ಕ್ವಾಲಿಟೀಸ್ ಇವಾಗಿದ್ದು, ಈ ಚಿತ್ರದಿಂದ ಮತ್ತೊಂದು ದಾಖಲೆ ಬರೆಯೋ ಸಾಧ್ಯತೆಯಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES