Wednesday, December 25, 2024

ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಹಾಸನ : ರೌಡಿಶೀಟರ್, ತನ್ನ ಪತ್ನಿಗೆ ಕೈ ಟಚ್ ಮಾಡಿ ಪತ್ನಿಯ ಮುಂದೆಯೇ ಅವಾಜ್​​​​​​ ಹಾಕಿದ್ದ ಅನ್ನೋ ಒಂದೇ ಒಂದು ಕಾರಣಕ್ಕೆ ಆತ ಕೊಲೆಯೇ ಆಗಿ ಹೋಗಿದ್ದಾನೆ ಅಷ್ಟಕ್ಕೂ ಕೊಲೆಯಾಗಿದ್ದು ಎಲ್ಲಿ ಆ ಯುವಕ ಯಾರು..?

ಜುಲೈ 9ರ ಶನಿವಾರ ರಾತ್ರಿ ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಾರ್​​​ನಲ್ಲಿ ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ರೌಡಿಶೀಟರ್ ರಾಖಿ, ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಹೋಗಿದ್ದ. ಪಾರ್ಟಿ ಮುಗಿಸಿ ಬರೋ‌ ವೇಳೆ ಲಿಫ್ಟ್​ನಲ್ಲಿ ತನ್ನ ಹೆಂಡತಿಯ ಕೈಗೆ ಟಚ್ ಮಾಡಿದ್ದಾನೆಂದು ಅಪ್ರಾಪ್ತ ಯುವಕ ವಿನಯ್ ಎಂಬಾತನೊಂದಿಗೆ ಗಲಾಟೆ ಮಾಡಿಕೊಳ್ತಾನೆ. ರೌಡಿಶೀಟರ್ ರಾಖಿಗೆ ಯುವಕ ಆವಾಜ್​​​​ ಹಾಕಿ ಅಲ್ಲಿಂದ ಹೋಗಿರ್ತಾನೆ. ತನ್ನ ಪತ್ನಿ ಎದುರಿಗೆ ಅವಮಾನ ಮಾಡಿದ ಎಂದು ಸಿಟ್ಟಿಗೆದ್ದ ರಾಖಿ ತನ್ನ ಸಹಚರರೊಂದಿಗೆ ಭಾನುವಾರ ಮನೆಗೆ ಬಂದು ಬಲವಂತವಾಗಿ ಎಳೆದೊಯ್ದು ಹಲ್ಲೆ ಮಾಡಿ, ಚಾಕುವಿನಿಂದ ಇರಿದು ಕೊಂದಿದ್ದಾನೆ.

ಇನ್ನು ಪಬ್​ನಲ್ಲಿ ರಾಖಿ ಹಾಗೂ ವಿನಯ್ ನಡುವೆ ನಡೆದಿರೋ ಗಲಾಟೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋ ಹಾಗೂ ತಾಯಿಯ ದೂರನ್ನ ಆಧರಿಸಿದ ಪೊಲೀಸರು, ಘಟನೆ ಸಂಬಂಧ ರೌಡಿ‌ಶೀಟರ್ ರಾಖಿ, ಆತನ ಪತ್ನಿ ಸೇರಿ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ನೀಡಿರೋ ಮಾಹಿತಿ ಪ್ರಕಾರ ವಿನಯ್​ನನ್ನ ಮರ್ಡರ್ ಮಾಡಿ, ಡೆಡ್ ಬಾಡಿಯನ್ನ ಸಕಲೇಶಪುರ ತಾಲೂಕಿನ ಗುಂಡ್ಯ ಸಮೀಪದ ಕೆಂಪುಹೊಳೆಗೆ ಬಿಸಾಡಿದ್ದಾರೆ. ಆರೋಪಿಗಳು ಕೊಟ್ಟಿರೋ ಮಾಹಿತಿಯನ್ನಾಧರಿಸಿ, ಪೊಲೀಸರು ಮೃತದೇಹ ಪತ್ತೆಗೆ ಮುಂದಾಗಿದ್ದಾರೆ.

ಯಾವುದೇ ಕೊಲೆ ಕೇಸ್​ಗಳಲ್ಲಿ‌‌‌ ಮೊದಲು ಡೆಡ್ ಬಾಡಿ ಸಿಕ್ಕಿ, ನಂತರ ಆರೋಪಿಗಳನ್ನ ಪತ್ತೆ ಹಚ್ಚೋದು ಸಾಮಾನ್ಯವಾಗಿರುತ್ತದೆ. ಆದ್ರೆ ಈ ಕೇಸ್​ನಲ್ಲಿ ಮೊದಲು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದು, ಇದೀಗ ಪೊಲೀಸರು ಡೆಡ್ ಬಾಡಿಯನ್ನು ಹುಡುಕೋ‌ ಯತ್ನದಲ್ಲಿದ್ದಾರೆ.

ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ

RELATED ARTICLES

Related Articles

TRENDING ARTICLES