Monday, November 18, 2024

ನಿಗಮ ಮಂಡಳಿದ್ದವರಿಗೆ ಕೊಕ್ ​: ಬಿಎಸ್​ವೈಗೆ ಶಾಕ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಹತ್ತೇ ಹತ್ತು ತಿಂಗಳು ಬಾಕಿಯಿದೆ. ಮತ್ತೆ ಅಧಿಕಾರಕ್ಕೇರಲು ಕಮಲಪಡೆ ಭರ್ಜರಿ ಕಸರತ್ತು ನಡೆಸ್ತಿದೆ. ಸದ್ಯಕ್ಕಂತೂ ಸಂಪುಟ ಕಗ್ಗಂಟು ಬಗೆಹರಿಯುವಂತೆ ಕಾಣ್ತಿಲ್ಲ. ಈ ನಡುವೆ ನಿಗಮ ಮಂಡಳಿಗಳ ಮೇಲೆ ಕಣ್ಣಿಟ್ಟಿದವರಿಗೆ ಸಿಎಂ ಬೊಮ್ಮಾಯಿ ಗುಡ್​ನ್ಯೂಸ್​ ಕೊಟ್ರೆ. ಬಿಎಸ್​ವೈ ಆಪ್ತರಿಗೆ ಬಿಗ್​ ಶಾಕ್​ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಕೇವಲ ಹತ್ತೇ ಹತ್ತು ತಿಂಗಳು ಬಾಕಿಯಿದೆ. ಈಗಾಗಲೇ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಮಲ ಪಾಳಯದಲ್ಲೂ ಮಹತ್ವದ ಬೆಳವಣಿಗೆಗಳು ಆರಂಭವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಕಾಲದ ನಿಗಮಗಳ ಮಂಡಳಿ‌ ನೇಮಕಾತಿಗಳ ಆದೇಶವನ್ನ ಬೊಮ್ಮಾಯಿ ಸರ್ಕಾರ ರದ್ದು ಮಾಡೋ ಮೂಲಕ ಬಿಎಸ್​ವೈ ಬೆಂಬಲಿಗರಿಗೆ ಬಿಗ್ ಶಾಕ್ ನೀಡಿದೆ. ಈ ಮೂಲಕ ಬಿಎಸ್​ವೈ ಸೈಡ್​ಲೈನ್​ಗೆ ಮುನ್ನುಡಿ ಬರೆದಿದೆ.

ಸಾಕಷ್ಟು ದಿನಗಳಿಂದ ಮೂಲೆ ಸೇರಿದ ನಿಗಮ ಮಂಡಳಿ ನೇಮಕದ ಫೈಲ್ ಇದೀಗ ಬೊಮ್ಮಾಯಿ ಟೇಬಲ್ ಮೇಲೆ ಬಂದಿದೆ. ಹಿಂದಿನಿಂದಲೂ ಕಾರ್ಯಕರ್ತರಿಗೆ ಮಣೆ ಹಾಕಬೇಕು ಅನ್ನೋ ಕೂಗು ಕೇಳಿ ಬರ್ತಿತ್ತು. ಆದ್ರೆ, ಒಂದೂವರೆ ವರ್ಷ ಸೇವೆ ಸಲ್ಲಿಸಿರೋ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ತೆಗೆಯವಂತೆ ಮಾತುಕತೆ ಸಹ ನಡೆದಿತ್ತು. ಆದ್ರೆ, ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಒಪ್ಪಿರಲಿಲ್ಲ. ಇತ್ತ ಮಾಜಿ ಸಿಎಂ ಒಪ್ಪಿಗೆ ಮೇರೆಗೆ ನಿಗಮ ಮಂಡಳಿ ನೇಮಕ ಮಾಡಬೇಕು ಅಂತ ಕಾಯಲಾಗಿತ್ತು. ಆದ್ರೆ, ಯಾವುದಕ್ಕೂ ರಾಜಾಹುಲಿ ಒಪ್ಪಿಗೆಯನ್ನ ಸೂಚಿಸಿರಲಿಲ್ಲ. ಆದ್ರೆ ಕಳೆದ 15 ದಿನದ ಹಿಂದೆ ಎರೆಡೆರಡು ಬಾರೀ ಕೇಶವ ಕೃಪಾಗೆ ಭೇಟಿ ಕೊಟ್ಟ ಬೊಮ್ಮಾಯಿಗೆ ಸಂಘ ಬಿಸಿ ಮುಟ್ಟಿಸಿತ್ತು. ಕೊನೆಗೆ ಸಂಘ ಮತ್ತು ಹೈಕಮಾಂಡ್​ ಮಾತಿಗೆ ಅಸ್ತು ಅಂದ ಸಿಎಂ ಇದೀಗ ನಿಗಮ ಮಂಡಳಿ ನೇಮಕಕ್ಕೆ ಮನಸ್ಸು ಮಾಡಿದ್ದಾರೆ.

ಸದ್ಯ 22 ಇಲಾಖೆಯ 62 ನಿಗಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನೇಮಕವನ್ನ ಸರ್ಕಾರ ರದ್ದು ಮಾಡಿದೆ. ರದ್ದಾದವರಲ್ಲಿ ಬಿಎಸ್​ವೈ  ಆಪ್ತರ ಸಂಖ್ಯೆಯೇ ಅತಿ ಹೆಚ್ಚು. ಸದ್ಯದ ಮಾಹಿತಿ ಪ್ರಕಾರ ಸದ್ಯದಲ್ಲೇ ನೂತನ‌ ನಿಗಮ ಅಧ್ಯಕ್ಷರ ನೇಮಕವಾಗುತ್ತೆ ಎಂದು ಹೇಳಲಾಗ್ತಿದೆ. ಈ ಹಿನ್ನಲೆಯಲ್ಲಿ 22 ಇಲಾಖೆಯ ‌ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವನ್ನ ರದ್ದು ಮಾಡುವಂತೆ ಸಿಎಂ ಆಪ್ತ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಅದರಂತೆ ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಿಎಂ ಆಪ್ತ ಕಾರ್ಯದರ್ಶಿಯಿಂದ ಆದೇಶ ಕಳಿಸಿ ಈ ಕೂಡಲೇ ರದ್ದು ಮಾಡುವಂತೆ ಸೂಚಿಸಲಾಗಿದೆ.

ಯಾರ್ಯಾರಿಗೆ ಕೊಕ್​..? :

1. L.R.ಮಹದೇವ ಸ್ವಾಮಿ‌, ಮೈಸೂರು ಮೃಗಾಲಯದ ಅಧ್ಯಕ್ಷ
2.ಎನ್.ವಿ.ಪಣೀಶ್, ಮೈಸೂರು ಪೈಂಟ್ಸ್ Ltd ಅಧ್ಯಕ್ಷ
3. ರವೀಂದ್ರ ಶೆಟ್ಟಿ, ಅಲೆಮಾರಿ‌ ಅಭಿವೃದ್ದಿ ನಿಗಮದ ಅಧ್ಯಕ್ಷ
4. ಬೇಳೂರು ರಾಘವೇಂದ್ರ ಶೆಟ್ಟಿ, ಕರ್ನಾಟಕ ಕರಕುಶಲ ಅಭಿವೃದ್ಧಿ ‌ನಿಗಮ
5. S.N.ಈಶ್ವರಪ್ಪ, ಉಪಾಧ್ಯಕ್ಷ KSRTC
6. ಎಂ.ಆರ್.ವೆಂಕಟೇಶ್​, ಉಪಾಧ್ಯಕ್ಷ ಬಿಎಂಟಿಸಿ
7. N.R.ಕೃಷ್ಣಪ್ಪ ಗೌಡ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ‌ಮಂಡಳಿ

ಮೈಸೂರು ಮೃಗಾಲಯದ ಅಧ್ಯಕ್ಷ L.R.ಮಹದೇವ ಸ್ವಾಮಿ‌ಗೆ ಕೊಕ್​ ಕೊಡುವ ಸಾಧ್ಯತೆಯಿದೆ. ಮೈಸೂರು ಪೈಂಟ್ಸ್ Ltd ಅಧ್ಯಕ್ಷ ಎನ್.ವಿ.ಪಣೀಶ್, ಅಲೆಮಾರಿ‌ ಅಭಿವೃದ್ದಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿಯನ್ನ ಕೈ ಬಿಡುವುದು ದಟ್ಟವಾಗಿದೆ.. ಕರ್ನಾಟಕ ಕರಕುಶಲ ಅಭಿವೃದ್ಧಿ ‌ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ, KSRTC ಉಪಾಧ್ಯಕ್ಷ S.N.ಈಶ್ವರಪ್ಪ, ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್​ ಕೊಕ್​ ನೀಡೋದು ಪಕ್ಕಾ ಆಗಿದೆ.. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ‌ಮಂಡಳಿಯ N.R.ಕೃಷ್ಣಪ್ಪ ಗೌಡಗೂ ಕೊಕ್​ ನೀಡುವ ಸಾಧ್ಯತೆ ದಟ್ಟವಾಗಿದೆ..

ಬಿಎಸ್​ವೈ ಆಪ್ತ ಬಣದ ನಾಲ್ವರು ಸೇಫ್​..? :

ಇನ್ನು, ಉಪ್ಪಾರ ಅಭಿವೃದ್ಧಿ ನಿಗಮ‌ ಗಿರೀಶ್ ಉಪ್ಪಾರ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ‌ದ ರುದ್ರೇಶ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪೂ ಸಿದ್ದಲಿಂಗಸ್ವಾಮಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ತಾರಾ ಅನುರಾಧಾ ಸೇರಿದಂತೆ ಐದಾರು ನಿಗಮ ಮಂಡಳಿ ಅಧ್ಯಕ್ಷರು ಸೇಫ್​ ಆಗಿದ್ದಾರೆ.. ಈ ಮೂಲಕ ಯಡಿಯೂರಪ್ಪ ಒಲೈಕೆಗೆ ಮುಂದಾಗಿದ್ದಂತೆ ಭಾಸವಾಗ್ತಿದೆ..

ಒಟ್ಟಿನಲ್ಲಿ ರಾಜಾಹುಲಿಗೆ ಬಿಗ್ ಶಾಕ್ ನೀಡಿರೋ ಸರ್ಕಾರ, ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯವಾಗಿ ಅಧಿಕಾರ ಹಿಡಿಯಲು ಪ್ಲ್ಯಾನ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಇದು ಯಡಿಯೂರಪ್ಪನವರ ಸೈಡ್​ಲೈನ್​ಗೆ ಮುನ್ನುಡಿ ಎಂದು ರಾಜಕೀಯ ಪಡುಶಾಲೆಯಲ್ಲಿ ಕೇಳಿ ಬರ್ತಿದೆ.

ರಾಘವೇಂದ್ರ.ವಿ.ಎನ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES