Sunday, December 22, 2024

ವಿಕ್ರಾಂತ್ ರೋಣನಿಗೆ ಮಂಡಿ ನೋವು.. ಕಿಚ್ಚ ರೆಸ್ಟ್ ಮೋಡ್..!

ರಾ.ರಾ.ರಕ್ಕಮ್ಮ ಅಂತಾ ಚಿತ್ರರಸಿಕರಿಗೆ ಗಂಗು ಹಿಡಿಸಿರೋ ವಿಕ್ರಾಂತ್​ ರೋಣ ಸದ್ಯದಲ್ಲೇ ತೆರೆಗೆ ಬರೋಕೆ ಸಜ್ಜಾಗಿದೆ. ಇತ್ತ ಪ್ರಮೋಷನ್​ನಲ್ಲಿ ಸಖತ್​ ಬ್ಯುಸಿ ಇರೋ ಕಿಚ್ಚ ಕಾಲು ನೋವು ಅಂತಾ ರೆಸ್ಟ್​ ಮಾಡ್ತಿದ್ದಾರೆ. ಈ ಕುರಿತು ಸ್ವತಃ ಕಿಚ್ಚ ವೀಡಿಯೋ ಹರಿಬಿಟ್ಟಿದ್ದು ಈ ವೀಡಿಯೋ ಇದೀಗ ಸಖತ್​ ವೈರಲ್​​​ ಆಗಿದೆ. ಕಿಚ್ಚ ಹೇಳಿದ್ದೇನು..? ನೀವೇ ಓದಿ.

  • ನಡೆಯೋಕೂ ಕಷ್ಟ ಪಡ್ತಿದ್ದಾರೆ ಕಿಚ್ಚ.. ಭರ್ಜರಿ ಪ್ರಚಾರ ಕಾರಣ..?

ಸ್ಯಾಂಡಲ್​ವುಡ್​​ನ ಆರಡಿ ಕಟೌಟ್​​​, ಸಿಂಗಲ್​​ ಶೇರ್​ ಕಿಚ್ಚ ಅಭಿನಯದ ವಿಕ್ರಾಂತ್​ ರೋಣ ಇದೇ ತಿಂಗಳು ತೆರೆಗೆ ಬರಲಿದೆ. ಇತ್ತ ವರ್ಲ್ಡ್​​​ ವೈಡ್​​ ಪ್ರಮೋಷನ್​​ನಲ್ಲಿ ಬ್ಯುಸಿ ಇರೋ ವಿಕ್ರಾಂತ್​ ಟೀಮ್​ ಭರ್ಜರಿ ಪ್ರಚಾರ ಕೂಡ ಗಿಟ್ಟಿಸಿದೆ.ಐ ಕಾಂಟ್​ ವೈಟ್​ ಅಂತಿರೋ ಕಿಚ್ಚನ ಅಭಿಮಾನಿಗಳು ಸಿನಿಮಾದ ಜಪ ಮಾಡ್ತಿದ್ದಾರೆ. ರಾ.ರಾ.ರಕ್ಕಮ್ಮನ ಭಜನೆಯಲ್ಲಿ ಮುಳಿಗಿರೋ ಟಿಕ್​ಟಾಕ್​ ಸ್ಟಾರ್ಸ್ಸ್​ ರೀಲ್ಸ್​ ಮಾಡಿ ಅಭಿಮಾನ ವ್ಯಕ್ತಪಡಿಸ್ತಿದ್ದಾರೆ.

ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿರೋ ಕಾರಣ ವಿಕ್ರಾಂತ್​ ಟೀಮ್​ ಬಿಡುವಿಲ್ಲದ ಪ್ರಚಾರ ಮಾಡ್ತಾ ಇದೆ. ಕಿಚ್ಚ ಕೂಡ ಬೆಂಗಳೂರು ಮುಂಬೈ ಸೇರಿದಂತೆ ಎಡೆಬಿಡದೆ ಪ್ರಮೋಷನ್​ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದರು. ನಿರಂತರವಾಗಿ ಪ್ರಚಾರ ಮಾಡಿದ ಕಾರಣ ಸುದೀಪ್​ಗೆ ಆರೋಗ್ಯದಲ್ಲಿ ಸಮಸ್ಯೆ ಎದುರಾಗಿದೆ. ಮಂಡಿ ನೋವು ಇರೋದಾಗಿ ಸ್ವತಃ ಕಿಚ್ಚ ಹೇಳಿಕೊಂಡಿದ್ದಾರೆ.

  • ನಮ್​​ ಹುಡುಗರು ಚಿತ್ರದ ಟ್ರೈಲರ್​ ಲಾಂಚ್​ಗೆ ಕಿಚ್ಚ ಗೈರು
  • ಬಾರದಿದ್ದಕ್ಕೆ ರೋಣ ಸ್ಪಷ್ಟನೆ.. ಮಂಡಿ ನೋವೇ ಕಾರಣ..!

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಅವರ ಚೊಚ್ಚಲ ಸಿನಿಮಾ ‘ನಮ್ಮ ಹುಡುಗರು’. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಕಿಚ್ಚನನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕಿಚ್ಚನಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣವನ್ನೂ ಸಹ ಸುದೀಪ್ ಅವರು ಸ್ವತಃ ವಿಡಿಯೋ ಮೂಲಕ ತಿಳಿಸಿದ್ದಾರೆ. ನನಗೆ ಮಂಡಿ ನೋವಿದ್ದ ಕಾರಣ ಬರಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಮುಖ್ಯ ಅತಿಥಿಯಾಗಿ ಕಿಚ್ಚ ಅವ್ರಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ, ಅನಾರೋಗ್ಯದ ಕಾರಣ ಕಿಚ್ಚ ವಿಡೀಯೋ ಮೂಲಕವೇ ಶುಭ ಹಾರೈಸಿದ್ರು. ಜೊತೆಗೆ  ವೀಡಿಯೋ ಮೂಲಕವೇ ಟ್ರೈಲರ್​ ಲಾಂಚ್​ ಮಾಡಿದ್ರು. ‘ನಿರಂಜನ್ ಮೊದಲಿಗೆ ನನ್ನನ್ನು ಕ್ಷಮಿಸಿ, ನಾನು ಬರಲು ಸಾಧ್ಯವಾಗಲಿಲ್ಲ. ನನ್ನ ಮಂಡಿಗೆ ಪೆಟ್ಟು ಬಿದ್ದ ಕಾರಣ ಆಗಮಿಸಲು ಆಗಲಿಲ್ಲ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ಹೇಳಿಕೊಂಡಿದ್ದಾರೆ.

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿ ಯಲ್ಲಿ ಸಿನಿಮಾ ರಿಲೀಸ್ ಆಗ್ತಾ ಇರೋದ್ರಿಂದ ಕುತೂಹಲ ಹೆಚ್ಚಾಗಿದೆ. ಒನ್ ಟ್ವೆಂಟಿ 8 ಮೀಡಿಯಾ ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಜಾಕ್​ ಮಂಜು ನಿರ್ಮಾಣದಲ್ಲಿ, ಅನೂಪ್​ ಭಂಡಾರಿ ನಿರ್ದೇಶನದ ಕರಾಮತ್ತಿನಲ್ಲಿ ಇದೇ ತಿಂಗಳು ಜುಲೈ 28ಕ್ಕೆ ತೆರೆಗೆ ಬರೋಕೆ ಸಜ್ಜಾಗಿದೆ. ಈ ನಡುವೆ ಕಿಚ್ಚ ಬೇಗ ಸುಧಾರಿಸಿಕೊಳ್ಳಲಿ ಎಂಬುದು ಫ್ಯಾನ್ಸ್​​ ಆಶಯವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES