Monday, December 23, 2024

ವಾಮನ ಮೇಕಿಂಗ್ ಝಲಕ್​​; ಶೋಕ್ದಾರ್ ಧನ್ವೀರ್ ಮಿಂಚಿಂಗ್

ಬೈ ಟು ಲವ್​ ಚಿತ್ರದ ನಂತ್ರ ವಾಮನನಾಗಿ ​ ಧನ್ವೀರ್​​ ಮಾಸ್​ ಗೆಟಪ್​​​ನಲ್ಲಿ ಮಿಂಚ್ತಿದ್ದಾರೆ. ಸಿನಿಮಾದ ಪೋಸ್ಟರ್​​​​ಗಳು ಪಕ್ಕಾ ಆ್ಯಕ್ಷನ್​ ವೆಂಚರ್​ ಸಿನಿಮಾ ಅನ್ನೋದನ್ನ ಸಾರಿ ಸಾರಿ ಹೇಳುತ್ತವೆ. ಎದೆ ಹುಬ್ಬಿಸಿ, ರಗಡ್​ ಲುಕ್​ನಲ್ಲಿ, ಸ್ಟೈಲೀಶ್​ ಆಗಿ ಕಾಣಿಸೋ ಧನ್ವೀರ್​​​ ಈ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಸಿಕರನ್ನ ರಂಜಿಸಿಲಿದ್ದಾರೆ. ಸದ್ಯ ಈ ಚಿತ್ರದ ಮೇಕಿಂಗ್​ ಝಲಕ್​​ ವೀಡಿಯೋ ವೈರಲ್ಲಾಗಿದ್ದು ಸೋಶಿಯಲ್​​ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ.

ವಾಮನ ಮೇಕಿಂಗ್ ಝಲಕ್​​.. ಶೋಕ್ದಾರ್ ಧನ್ವೀರ್ ಮಿಂಚಿಂಗ್

ಶೀಘ್ರದಲ್ಲೇ ಟೀಸರ್​ ರಿಲೀಸ್​​.. ಚಿತ್ರತಂಡದಿಂದ ಗುಡ್​ನ್ಯೂಸ್​​​​​..!

ಬಬ್ಲಿ ಪಾತ್ರದಲ್ಲಿ ತುಳುನಾಡ ಚೆಲುವೆ ರಚನಾ ರೈ ಶೈನಿಂಗ್​​

ಜಾಲಿ ಬಾಸ್ಟಿನ್​ ಸಾಹಸ ನಿರ್ದೇಶನದಲ್ಲಿ ಮಸ್ತ್​​ ಫೈಟಿಂಗ್​​​

ಶೋಕ್ದಾರ್​​​ ಆಗಿ ಮಿಂಚಿ, ಬೈ ಟು ಲವ್​ ಚಿತ್ರದ ಮೂಲಕ ಫ್ಯಾಮಿಲಿ ಪ್ರೇಕ್ಷಕರ ಹೃದಯ ಗೆದ್ದಿದ್ದ ಚೆಲುವ ಧನ್ವೀರ್​. ಇದೀಗ ಮಾಫಿಯಾ ಲೋಕದ ಕರಾಳ ಸತ್ಯವನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡಲಿದ್ದಾರೆ. ವಾಮನ ಸಿನಿಮಾದ ಫಸ್ಟ್​ ಲುಕ್​ನಲ್ಲಿ ಕೈನಲ್ಲಿ ಚಾಕು ಹಿಡಿದು ಭಯಾನಕ ಲುಕ್​ ಕೊಟ್ಟಿದ್ದ ಧನ್ವೀರ್​ ಮಾಸ್​ ಸಿನಿಮಾದಲ್ಲಿ ನಟಿಸ್ತಿದ್ದಾರೆ ಅನ್ನೋ ಸೂಚನೆ ಕೊಟ್ಟಿದ್ರು. ಇದೀಗ ವಾಮನ ಶೂಟಿಂಗ್​ ಮುಗಿಯುವ ಹಂತಕ್ಕೆ ಬಂದಿದ್ದು, ಚಿತ್ರತಂಡ ಮೇಕಿಂಗ್​ನ ಸಣ್ಣ ತುಣುಕು ರಿಲೀಸ್​ ಮಾಡಿ ಸರ್​ಪ್ರೈಸ್​ ನೀಡಿದೆ.

ಮೂರು ಹಂತದ ಶೂಟಿಂಗ್ ಕಂಪ್ಲೀಟ್​ ಮಾಡಿರೋ ಚಿತ್ರತಂಡ ಸದ್ಯ ಖುಷಿಯಲ್ಲಿದೆ. ಇನ್ನೇನು ಸದ್ಯದಲ್ಲೇ ಸಿನಿಮಾದ ಟೀಸರ್​ ಕೂಡ ರಿಲೀಸ್​ ಮಾಡಲಿದೆ ಚಿತ್ರತಂಡ. ಇದ್ರ ಜತೆಯಲ್ಲೇ ಶೂಟಿಂಗ್​ ವೇಳೆಯಲ್ಲಿನ ಮೇಕಿಂಗ್​​ ಝಲಕ್​ ರಿಲೀಸ್​ ಮಾಡಿದ್ದು, ಈ ವೀಡಿಯೋ ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡಿದೆ. 40 ಸೆಕೆಂಡ್​​​​ಗಳ ಕಾಲ ಇರುವ ಈ ವೀಡಿಯೋ ತುಣುಕು ಸಿನಿಮಾದಲ್ಲಿನ ಆ್ಯಕ್ಷನ್​​ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮಾಫಿಯಾ ಲೋಕದ ಕಥೆ ಜೊತೆ ಆಕ್ಷನ್ ಎಂಟರ್ಟ್ರೈನರ್ ಸಿನಿಮಾದಲ್ಲಿ ಧನ್ವೀರ್​​​ಗೆ ಜೊತೆ ನಾಯಕಿ ರಚನಾ ರೈ ರೊಮ್ಯಾನ್ಸ್​ ಮಾಡಲಿದ್ದಾರೆ. ಮಾಡೆಲ್​​ , ಡ್ಯಾನ್ಸರ್​​, ಬ್ಯಾಡ್ಮಿಂಟನ್​ ಪ್ಲೈಯರ್​ ಕೂಡ ಆಗಿರುವ ರಚನಾ ರೈಗೆ ಇದು ಮೊದಲ ಸಿನಿಮಾ ಆಗಿದೆ. ಜತೆಗೆ ಓ ಮೈ ಡಾಗ್​ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ.

ಸಿನಿಮಾದ ಮೇಕಿಂಗ್​​ ಝಲಕ್​ನಲ್ಲಿ ಬ್ಲಾಕ್​ ಅಂಡ್​ ಬ್ಲಾಕ್​​ನಲ್ಲಿ ಮಿಂಚ್ತಾ ಇರೋ ಧನ್ವೀರ್​ ಯಾವುದೋ ಆ್ಯಕ್ಷನ್​ ಸೀಕ್ವೆನ್ಸ್​​​​​ ಸೀನ್​ಗೆ ಸಜ್ಜಾಗಿದ್ದಾರೆ. ಆಟೋಮೊಬೈಲ್​​ ಗ್ಯಾರೇಜ್​​ನ ದೃಶ್ಯ ಇದಾಗಿದ್ದು, ರೌಡಿಗಳನ್ನು ಕೆಣಕೋ ದೃಶ್ಯವನ್ನು ಚಿತ್ರೀಕರಿಸುವಂತೆ ಕಾಣ್ತಿದೆ. ಶಂಕರ್​ ರಾಮನ್​ ನಿರ್ದೇಶನದ ಕರಾಮತ್ತಿನಲ್ಲಿ ಸಿನಿಮಾ ಕರಾರುವಕ್ಕಾಗಿ ಸಿದ್ಧವಾಗ್ತಿದೆ. ಈಕ್ವಿನಾಕ್ಸ್ ಗ್ಲೋಬಲ್ ಬ್ಯಾನರ್​​​ ಅಡಿಯಲ್ಲಿ ಚೇತನ್​​ಕುಮಾರ್​ ಅದ್ಧೂರಿಯಾಗಿ‌ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ಈ ಸಿನಿಮಾದಲ್ಲಿ ಸಂಪತ್ ಖಳನಾಯಕನಾಗಿ ಬಣ್ಣ ಹಚ್ಚಿದ್ದು, ಅಚ್ಯುತ್ ಕುಮಾರ್, ತಾರಾ ಅನುರಾಧಾ, ಶಿವರಾಜ್ ಕೆ.ಆರ್ ಪೇಟೆ ಮತ್ತು ಕಾಕ್ರೋಚ್ ಸುದಿ ತಾರಾಗಣದಲ್ಲಿದ್ದಾರೆ. ಮಹೇನ್ ಸಿಂಹ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸ ಚಿತ್ರಕ್ಕಿದೆ. ಸದ್ಯ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿರುವ ಚಿತ್ರತಂಡ ಶೀಘ್ರದಲ್ಲಿಯೇ  ಟೀಸರ್ ರಿಲೀಸ್ ಮಾಡೋ ಪ್ಲಾನ್​​  ಹಾಕಿಕೊಂಡಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES