Monday, December 23, 2024

ರಾಜಧಾನಿ ಬೆಂಗಳೂರಿನಲ್ಲಿ ಅನ್ನದಾತರ ಕಿಚ್ಚು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅನ್ನದಾತರ ರಣಕಹಳೆ ಮೊಳಗಿತ್ತು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದ ಸಾವಿರಾರು ರೈತರನ್ನ ಪೊಲೀಸರು ತಡೆದಿದ್ದು, ಸರ್ಕಾರದ ವಿರುದ್ಧ ಹೋರಾಟಗಾರರ ಆಕ್ರೋಶ ಕಟ್ಟೆಹೊಡೆಯಿತು.

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ರೈತರು.. ಒಂದೆಡೆ ಹಸಿರು ಶಾಲು ಹೊದಿಸಿ ಕೊಂಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ.. ಮತ್ತೊಂದೆಡೆ ಪೊಲೀಸರು, ರೈತರ ನಡುವೆ ಮಾತಿನ ಚಕಮಕಿ.. ಇದು ಸಿಲಿಕಾನ್ ಸಿಟಿಯಲ್ಲಿ ಕಂಡು ಬಂದ ರೈತರ ಆಕ್ರೋಶ.

ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಮೆಜೆಸ್ಟಿಕ್ ನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದರು. ಬೆಳಗ್ಗೆ 11:00ಗೆ ಪ್ರತಿಭಟನಾ ರ್ಯಾಲಿ ಮೂಲಕ ಸಿಎಂ ಮನೆಗೆ ಮುತ್ತಿಗೆ ಹಾಕ್ಬೇಕು ಅಂತ ಹೇಳಿ ಸಿದ್ಧವಾಗಿದ್ರು. ಆದ್ರೆ ಪ್ರತಿಭಟನಾ ರ್ಯಾಲಿ ಶುರು ಮುನ್ನವೇ ರೈತರನ್ನ ಪೊಲೀಸರು ರೈಲ್ವೆ ನಿಲ್ದಾಣದಲ್ಲಿಯೇ ತಡೆದರು. ಅಷ್ಟೇ ಅಲ್ಲದೇ ಸ್ಥಳದಲ್ಲೇ ಪ್ರತಿಭಟನೆಗೂ ಅವಕಾಶ ಮಾಡಿಕೊಡದೆ ವಶಕ್ಕೆ ಪಡೆದುಕೊಂಡ್ರು.

ಒಂದು ತಂಡವನ್ನು ವಶಕ್ಕೆ ಪಡೆಯುತ್ತಿದ್ದಂತೆ ಮತ್ತೊಂದು ತಂಡ ನೇರವಾಗಿ ಬಸ್ ಮೂಲಕವೇ ಬಂದು ಸಿಎಂ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ಬಂಧಿಸಿದ್ರು. ಕೆಲಹೊತ್ತು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ರೈತರ ಬೇಡಿಕೆಗಳೇನು..? :
ಒಂದು ಟನ್ ಕಬ್ಬಿಗೆ 4,500 ನಿಗದಿ ಮಾಡಬೇಕು
ಶೀಘ್ರವೇ ಹಳೆಯ ಬಾಕಿ ಹಣ ಪಾವತಿ ಮಾಡಬೇಕು
FRP ಬೆಲೆಯಂತೆ ಕಬ್ಬನ್ನು ಖರೀದಿ ಮಾಡಬೇಕು

ಹಾಗಾದ್ರೆ ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗಳೇನು ಅಂತ ನೋಡೋದಾದ್ರೆ, ಒಂದು ಟನ್ ಕಬ್ಬಿಗೆ 4,500 ನಿಗದಿ ಮಾಡಬೇಕು. ಶೀಘ್ರವೇ ಹಳೆಯ ಬಾಕಿ ಹಣ ಪಾವತಿ ಮಾಡಬೇಕು. FRP ಬೆಲೆಯಂತೆ ಕಬ್ಬನ್ನು ಖರೀದಿ ಮಾಡಬೇಕು ಹೀಗೆ ಹಲವು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.

ಒಟ್ಟಿನಲ್ಲಿ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ರೈತರ ಕಿಚ್ಚು ಜೋರಾಗಿಯೇ ಇತ್ತು. ಪ್ರತಿಭಟನೆಯನ್ನ ಪೊಲೀಸರು ಹತ್ತಿಕ್ಕಿದ್ದೇ ಹೋರಾಟಗಾರರ ಕಣ್ಣು ಕೆಂಪಾಗಿಸಿತ್ತು.

ಸ್ವಾತಿ ಫುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

RELATED ARTICLES

Related Articles

TRENDING ARTICLES