Monday, December 23, 2024

ಶಿವಣ್ಣನ ಬರ್ತ್​​​​​​ಡೇಗೆ ವಿಕ್ರಾಂತ್ ರೋಣ ಸರ್​​​​ಪ್ರೈಸ್ ಗಿಫ್ಟ್

ಸೆಂಚುರಿ ಸ್ಟಾರ್​ ಶಿವಣ್ಣ 60ರ ಹೊಸ್ತಿಲಲ್ಲಿದ್ದಾರೆ. ಏನೇ ಇರಲಿ ಶಿವಣ್ಣನಿಗೆ ಏಜ್​ ಈಸ್​ ಜಸ್ಟ್ ಎ​ ನಂಬರ್​​. ಶಿವಣ್ಣ ಮಾತ್ರ ಆಯಾಸವಿಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಆ್ಯಕ್ಟ್​ ಮಾಡ್ತಿದ್ದಾರೆ. ಇದೀಗ ಘೋಸ್ಟ್​​ ಅಬ್ಬರ ಶುರುವಾಗಿದೆ. ಸ್ಯಾಂಡಲ್​​ವುಡ್​ ಬೀರ್​ಬಲ್​ ಶ್ರೀನಿ ಆ್ಯಕ್ಷನ್​ ಕಟ್​ ಹೇಳ್ತಾ ಇರೋ ಘೋಸ್ಟ್​ ಸಿನಿಮಾಗೆ ಕಿಚ್ಚನ ಬಲ ಸಿಕ್ಕಿದೆ. ಹ್ಯಾಟ್ರಿಕ್​ ಹೀರೋ ಶಿವಣ್ಣನ ಬರ್ತ್​​ಡೇಗೆ ವಿಕ್ರಾಂತ್​ ರೋಣ ಸರ್​ಪ್ರೈಸ್​ ಗಿಫ್ಟ್​​ ಕೊಡ್ತಿದ್ದಾರೆ. ಆ ಉಡುಗೊರೆ ಏನ್​ ಗೊತ್ತಾ..?

ಶಿವಣ್ಣನ ಬರ್ತ್​​​​​​ಡೇಗೆ ವಿಕ್ರಾಂತ್ ರೋಣ ಸರ್​​​​ಪ್ರೈಸ್  ಗಿಫ್ಟ್

‘ಕಿಂಗ್ ಆಫ್​ ಆಲ್​ ಮಾಸಸ್’ ಸ್ಪೆಷಲ್​​​​​​ ಪೋಸ್ಟರ್​ ರಿಲೀಸ್​​​

ಹೈ ವೋಲ್ಟೇಜ್ ಮಾಸ್ ವೆಂಚರ್.. ಆ್ಯಕ್ಷನ್​ ಎಂಟರ್​ಟೈನರ್​​

ಶ್ರೀನಿ ಸಾರಥ್ಯದಲ್ಲಿ ಚಿತ್ರರಸಿಕರಿಗೆ ಸಿಗಲಿದೆ ಓಲ್ಡ್​ ಮಾಂಕ್​ ಕಿಕ್​​

ಡಾ.ಶಿವಣ್ಣನ ಬರ್ತ್​ಡೇ ಸಂಭ್ರಮ ಎಲ್ಲೆಡೆ ಜೋರಾಗಿದೆ. ಜುಲೈ12ಕ್ಕೆ ಶಿವಣ್ಣ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಕೂಡ ಸ್ಯಾಂಡಲ್​ವುಡ್​​​​​ ಸಿಂಹದ ಮರಿಯ ಬರ್ತ್​ಡೇಯನ್ನು ಅದ್ಧೂರಿಯಾಗಿ ಆಚರಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಸ್ಯಾಂಡಲ್​​ವುಡ್​​ ಬಾದ್​ಷಾ ಕಿಚ್ಚ ಸುದೀಪ್​, ಶಿವಣ್ಣನ ಬರ್ತ್​ಡೇ ಸ್ಪೆಷಲ್​ ಗಿಫ್ಟ್​ ಕೊಡ್ತಿದ್ದಾರೆ.

ಖ್ಯಾತ ನಟ ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಘೋಸ್ಟ್​ ಸಿನಿಮಾ ಸೆಟ್ಟೇರೋಕೆ ಮುಂಚೆ ಹಲ್​ಚಲ್​ ಎಬ್ಬಿಸಿದೆ. ಈಗಾಗ್ಲೇ ಘೋಸ್ಟ್​ ಚಿತ್ರದ ಪೋಸ್ಟರ್​ನಲ್ಲಿ ಶಿವಣ್ಣನ ಗೆಟಪ್​ ಕಂಡು, ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದಾರೆ. ಘೋಸ್ಟ್​ ಎಂದ ಮಾತ್ರಕ್ಕೆ ಶಿವಣ್ಣ ಹಾರರ್​ ಸಿನಿಮಾದಲ್ಲಿ ಆ್ಯಕ್ಟ್​ ಮಾಡ್ತಿಲ್ಲ. ವ್ಯವಸ್ಥ್ಯೆಯ ವಿರುಧ್ದ ಹೋರಾಡುವ ಕಥೆ ಇದು. ಈ ಸಿನಿಮಾದ ಫಸ್ಟ್​ ಲುಕ್​​​​ನ್ನು ಕಿಚ್ಚ ಸುದೀಪ್​ ರಿಲೀಸ್ ಮಾಡಲಿದ್ದು, ಕಿಂಗ್​ ಆಫ್​ ಆಲ್​ ಮಾಸಸ್​​ ಎಂಬ ಹೆಸರಿನ ಪೋಸ್ಟರ್​ ಅನ್ನು ಬರ್ತ್​​ಡೇ ಗಿಫ್ಟ್​ ಆಗಿ ನೀಡಲಿದ್ದಾರೆ.

ಸಂದೇಶ್​ ಪ್ರೊಡಕ್ಷನ್​ ಲಾಂಛನದಲ್ಲಿ ನಿರ್ಮಾಣವಾಗ್ತಾ ಇರೋ ಘೋಸ್ಟ್ ಸಿನಿಮಾ ಸದ್ಯ ಪ್ರೀ ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಅದ್ರಲ್ಲೂ ಇದು ಮಾಸ್ತಿ ರೈಟಿಂಗ್​ನಿಂದ ಮತ್ತೆ ಮ್ಯಾಜಿಕ್ ಮಾಡೋ ಸೂಚನೆ ನೀಡಿದೆ. ಟೋಪಿವಾಲ, ಬೀರ್​ಬಲ್​​, ಓಲ್ಡ್​ಮಾಂಕ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿರೋ ಶ್ರೀನಿ, ಹ್ಯಾಟ್ರಿಕ್​ ಹೀರೋಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಪಕ್ಕಾ ಆ್ಯಕ್ಷನ್​ ಥ್ರಿಲ್ಲರ್​ ಜಾನರ್ ಸಿನಿಮಾ ಇದಾಗಿದ್ದು, ಸಿನಿಮಾ ಪೂರ್ತಿ ಕಮರ್ಷಿಯಲ್​ ಎಲಿಮೆಂಟ್ಸ್​ ತುಂಬಾ ಇದೆಯಂತೆ. ಘೋಸ್ಟ್​ ಸಿನಿಮಾ ಆಗಸ್ಟ್​ ಅಂತ್ಯದ ವೇಳೆಗೆ ಸೆಟ್ಟೇರಲಿದ್ದು, ನಾಳೆ ರಿಲೀಸ್​ ಆಗಲಿರೋ ಫಸ್ಟ್​ ಲುಕ್​ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಚಿಕ್ಕ ವಯಸ್ಸಿಂದ ಶಿವಣ್ಣನ ಸಿನಿಮಾ ನೋಡಿ ಬೆಳೆದ ನಿರ್ದೆಶಕ ಶ್ರೀನಿ ಕಥೆ ಹೇಳಿದ ತಕ್ಷಣಕ್ಕೆ ಶಿವಣ್ಣ ಓಕೆ ಎಂದಿದ್ದಾರೆ. ಹಾಲಿವುಡ್​​ ಕಥೆ ಕೇಳಿದ ಫೀಲ್​ ಶಿವಣ್ಣನಿಗೆ ಆಗಿದೆಯಂತೆ.

ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ಶಿವಣ್ಣನ ಅಭಿಮಾನಿಗಳು ಬರ್ತ್​ಡೇ ಸೆಲೆಬ್ರೇಟ್​ ಮಾಡೋಕೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದ್ದಾರೆ. ಇತ್ತ ಕಿಚ್ಚ ಸುದೀಪ್​ ಕೂಡ ಶಿವಣ್ಣನ ಘೋಸ್ಟ್​ ಸಿನಿಮಾಗೆ ಸಾಥ್​ ಕೊಡ್ತಾ ಇರೋದ್ರಿಂದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸ್ಪೈ ಥ್ರಿಲ್ಲರ್​​ ಕಥೆಯ ಸಿನಿಮಾ ಘೋಸ್ಟ್​​​ ಚಿತ್ರದ ಕಿಂಗ್ ಆಫ್​ ಆಲ್​ ಮಾಸಸ್​ ಪೋಸ್ಟರ್​ ಹೇಗಿರಲಿದೆ ಕಾದು ನೋಡ್ಬೇಕು. ಎನಿವೇ ಪವರ್​ ಟಿವಿ ಕಡೆಯಿಂದ ಶಿವಣ್ಣ ಅವ್ರಿಗೆ​ ಹ್ಯಾಪಿ ಬರ್ತ್​ಡೇ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES