Wednesday, January 22, 2025

ಹಿಜಾಬ್ ಧರಿಸಿ ಈದ್ ಶುಭಾಶಯ ಕೋರಿದ ರಶ್ಮಿಕಾ

ಸೀತಾ ರಾಮಂ ಚಿತ್ರದಲ್ಲಿ ಮೊದಲ ಬಾರಿಗೆ ವಿಭಿನ್ನ ಗೆಟಪ್​ನಲ್ಲಿ ಶ್ರೀವಲ್ಲಿ ರಶ್ಮಿಕಾ ಮಿಂಚ್ತಿದ್ದಾರೆ. ಇದಕ್ಕೂ ಮುನ್ನ ಹಿಜಾಬ್​ ಧರಿಸಿ, ಕೈಯಲ್ಲಿ ಗನ್​ ಹಿಡಿದು ಪೋಸ್​ ಕೊಟ್ಟಿದ್ದ ಕೊಡಗಿನ ಕುವರಿ ಚಿತ್ರರಸಿಕರ ತಲೆಯಲ್ಲಿ ಹುಳ ಬಿಟ್ಟಿದ್ದರು. ಇದೀಗ ರಶ್ಮಿಕಾ ಡಿಫರೆಂಟ್​ ಗೆಟಪ್​​ನಲ್ಲಿರೋ ಫೋಸ್ಟರ್​​ವೊಂದನ್ನ ಶೇರ್​ ಮಾಡಿದ್ದು, ಸಖತ್ ವೈರಲ್​ ಆಗಿದೆ. ಯಾವ ಗೆಟಪ್​​​​​​..? ಏನ್​ ಆ ಫೋಟೊ ಅಂತೀರಾ..?

ಹಿಜಾಬ್ ಧರಿಸಿ ಈದ್ ಶುಭಾಶಯ ಕೋರಿದ ರಶ್ಮಿಕಾ

ಮುಸ್ಲಿಂ ರೋಲ್​ನಲ್ಲಿ ಕೊಡಗಿನ ಬೆಡಗಿ ರೋರಿಂಗ್​​​​..!

ಆರ್ಮಿ ಗೆಟಪ್​ನಲ್ಲಿ ದುಲ್ಕರ್​​.. ಕಾಶ್ಮೀರಿ ಹುಡುಗಿಯಾಗಿ ಶ್ರೀವಲ್ಲಿ

ಮಲಯಾಳಂ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ಮಿಂಚಿಂಗ್​​​​..!

ಸೌತ್​ ಸಿನಿಮಾ ರಂಗದಲ್ಲೇ ಸಖತ್ ಸೆನ್ಸೇಷನ್​ ಕ್ರಿಯೇಟ್​ ಮಾಡಿರುವ ಸಿನಿಮಾ ಸೀತಾ ರಾಮಂ. ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರ್ತಿರೋ ಈ ಸಿನಿಮಾ ಬೇಜಾನ್​ ಹೈಪ್​ ಕ್ರಿಯೇಟ್​ ಮಾಡಿದೆ. ಯೋಧನೊಬ್ಬನ, ಯಾರು ಕಂಡು ಕೇಳಿರದ ಮನಮುಟ್ಟುವ ಪ್ರೇಮಕಥೆಯನ್ನು ಹೇಳೋಕೆ ಸಿನಿಮಾ ಸಜ್ಜಾಗಿದೆ, ಟೀಸರ್​ ನೋಡಿದವ್ರು ಕೂಡ ಪ್ರಾಮಿಸಿಂಗ್​ ಸಿನಿಮಾ ಎಂದು ಹಾಡಿ ಹೊಗಳಿದ್ದಾರೆ. ದುಲ್ಖರ್​ ಸಲ್ಮಾನ್​​​, ರಶ್ಮಿಕಾ, ಮೃಣಾಲ್​ ಠಾಕೂರ್​ ಅಭಿನಯದಲ್ಲಿ ಸೀತಾ ರಾಮಂ ಮೂಡಿ ಬರ್ತಿದೆ.

ಕಾಶ್ಮೀರ ಕಣಿವೆಯಲ್ಲಿ ರೊಮ್ಯಾಂಟಿಕ್​ ಪ್ರೇಮಕಥೆಯನ್ನು ಹೇಳಲು ಹೊರಟಿರುವ ಚಿತ್ರತಂಡ ಪೋಸ್ಟರ್​ಗಳ ಮೂಲಕವೇ ಎಲ್ಲರ ಗಮನ ಸೆಳಿತಿದೆ. ಈ ಸಿನಿಮಾದ ಒಂದು ಪೋಸ್ಟರ್​​ ಆರಂಭದಲ್ಲಿ ಸಖತ್​ ವೈರಲ್​ ಆಗಿತ್ತು. ಯೆಸ್​​.. ಕೊಡಗಿನ ಕುವರಿ, ಬಹುಭಾಷಾ ನಟಿಯಾಗಿ ಅಬ್ಬರಿಸ್ತಾ ಇರೋ ಬ್ಯೂಟಿ ಕ್ವೀನ್​ ರಶ್ಮಿಕಾ ಮಂದಣ್ಣ ಹಿಜಾಬ್​​ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದರು.

ಕೈಯಲ್ಲಿ ಗನ್​ ಹಿಡಿದು ಪೋಸ್​ ಕೊಟ್ಟಿದ್ದ ರಶ್ಮಿಕಾ ಯಾವುದೋ ಧಾರ್ಮಿಕ ಸಂಘರ್ಷದ ಕಥೆಯಲ್ಲಿ ಕಾಣಿಸಿಕೊಳ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಹಿಜಾಬ್​​ ಗೆಟಪ್​​ನಲ್ಲಿ ಈದ್​ ಹಬ್ಬಕ್ಕೆ ಶುಭಾಶಯ ಕೋರುವ ಮೂಲಕ ಸದ್ದು ಮಾಡ್ತಿದ್ದಾರೆ. ಮುಸ್ಲಿಂ ಬಾಂಧವರಿಗೆ ರಶ್ಮಿಕಾ ವಿಭಿನ್ನವಾಗಿ ವಿಶ್​ ಮಾಡಿ ಶುಭ ಕೋರಿದ್ದಾರೆ.

ಟಾಪ್​ ಸ್ಠಾರ್​ ನಟಿಯರಲ್ಲಿ ಒಬ್ಬರಾಗಿರೋ ರಶ್ಮಿಕಾ ಕನ್ನಡ, ತೆಲುಗು, ಮಲಯಾಳಂನಲ್ಲೂ ಮಿಂಚ್ತಿದ್ದಾರೆ. ಸೀತಾ ರಾಮಂ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ರಶ್ಮಿಕಾ ಕಾಶ್ಮೀರಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ತಿದ್ದಾರೆ. ಕ್ಲಾಸಿಕ್​ ಟೈಟಲ್​​ ಸೀತಾ ರಾಮಂ ಸಿನಿಮಾದಲ್ಲಿ ರಶ್ಮಿಕಾ ಹಿಜಾಬ್​​ ಗೆಟಪ್​​ ಎಲ್ಲರ ಕುತೂಹಲವನ್ನು ಕೆರಳಿಸಿದೆ.

ಈಗಾಗಲೇ ಈ ಚಿತ್ರದ ಹಾಡು, ಟೀಸರ್​ ಸಖತ್​ ಹಿಟ್​ ಆಗಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆಗೆ ಪಾತ್ರವಾಗಿದೆ. ಇದ್ರ ನಡುವೆ ರಶ್ಮಿಕಾ ಅವರ ಲೇಟೆಸ್ಟ್​​ ಲುಕ್​​ ವೈರಲ್​ ಆಗಿದೆ. ಸೀತಾ ರಾಮಂ ಚಿತ್ರವನ್ನು ಹನು ರಾಗವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ದಿವಾಕರ್ ಮಣಿ ಮತ್ತು ಪಿ.ಎಸ್.ವಿನೋದ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದ್ದು, ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಶ್ವಿನಿ ದತ್​ ಹಾಗೂ ಪ್ರಿಯಾಂಕ ದತ್​ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆಗಸ್ಟ್​ 05 ರಂದು ವರ್ಲ್ಡ್​ ವೈಡ್​ ತೆರೆಗೆ ಬರಲಿದೆ. ಅದೇನೆ ಇರಲಿ ಹಿಜಾಬ್​ ಸಂಘರ್ಷದ ನಡುವೆ ರಶ್ಮಿಕಾ ಪಾತ್ರ ಯಾವ ಸಂದೇಶ ಕೊಡಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇದೆ.

ರಾಕೇಶ್​ ಆರುಂಡಿ, ಫಿಲ್ಮ್​​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES