Monday, December 23, 2024

ಸ್ಯಾಂಡಲ್​ವುಡ್​ಗೆ ಕಂಬ್ಯಾಕ್ ಮಾಡ್ತಾರಾ ರಮ್ಯಾ..?

ಸ್ಯಾಂಡಲ್’ವುಡ್ ಕ್ವೀನ್, ಮೋಹಕ ತಾರೆ ಎಂದೇ ಖ್ಯಾತಿ ಪಡೆದ ನಟಿ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಿನಿಮಾ ವಿಚಾರಗಳಿಗೆ ಸಂಬಂಧಿಸಿದಂತೆ ಸಖತ್ ಆ್ಯಕ್ಟಿವ್ ಆಗಿರೋ ರಮ್ಯಾ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡ್ತಿದ್ದಾರೆ.

ಇದೀಗ ಡಾಲಿ ಧನಂಜಯ ಹಾಗೂ ಅಮೃತಾ ನಾಯ್ಡು ಅಭಿನಯದ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್‌ಗೆ ಭೇಟಿ ಕೊಟ್ಟಿದ್ದಾರೆ. ಚಿತ್ರತಂಡದ ಜೊತೆ ಸ್ವಲ್ಪ ಹೊತ್ತು ಸಮಯ ಕಳೆದು ಸಿನಿಮಾಗೆ ಶುಭ ಹಾರೈಸಿದ್ದಾರೆ. ಆರೆಂಜ್ ಟೀ ಶರ್ಟ್ ತೊಟ್ಟಿರುವ ರಮ್ಯಾ ಮುದ್ದು ಮುದ್ದಾಗಿ ಕಾಣ್ತಿದ್ದಾರೆ.ಜೊತೆಗೆ ಹೊಯ್ಸಳ ಚಿತ್ರದ ಕೆಲವು ಮೇಕಿಂಗ್ ತುಣುಕು ನೋಡಿ ವ್ಹಾವ್ ಎಂದಿದ್ದಾರೆ. ಪದೇ ಪದೇ ಸಿನಿಮಾ ಚಟುವಟಿಕೆಗಳಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ ಈ ಮೂಲಕ ಮತ್ತೆ ಸ್ಯಾಂಡಲ್’ವುಡ್ ಗೆ ಕಂಬ್ಯಾಕ್ ಆಗೋ ಸುಳಿವು ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES