Saturday, January 18, 2025

ಹೊಯ್ಸಳ ಸೆಟ್​​​​​​​ನಲ್ಲಿ ಮೋಹಕ ತಾರೆ ರಮ್ಯಾ ರಂಗು

ಸ್ಯಾಂಡಲ್​​​ವುಡ್ ಕ್ವೀನ್​​​ ರಮ್ಯಾ ಸಿನಿಮಾಗೆ ಗುಡ್​​ ಬೈ ಹೇಳ್ಬಿಟ್ರು. ಇನ್ಮುಂದೆ ರಮ್ಯಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲ್ಲ. ಅವರು ಎಲ್ಲಿದ್ದಾರೆ ಅಂತಾನೇ ಗೊತ್ತಿಲ್ಲ. ರಮ್ಯಾ ಸೋಶಿಯಲ್​​ ಮೀಡಿಯಾ, ಗೂಗಲ್​​ ಹುಡುಕಿದ್ರು ಸಿಗ್ತಿಲ್ಲ ಅಂತಾ ನಿರಾಸೆಯಾಗಿದ್ದ ಫ್ಯಾನ್ಸ್​ ಇತ್ತೀಚೆಗೆ ಫುಲ್​ ಖುಷ್​ ಆಗಿದ್ದಾರೆ. ಮೋಹಕ ತಾರೆ, ಹಾಲುಗಲ್ಲದ ಚೆಲುವೆ ರಮ್ಯಾ ಮತ್ತೆ ಸ್ಯಾಂಡಲ್​ವುಡ್​​ಗೆ ಕಂಬ್ಯಾಕ್​​ ಆಗಿದ್ದಾರೆ. ಹೊಯ್ಸಳನ ಅಡ್ಡಾದಲ್ಲಿ ತಿರುಗಾಡಿ ಹರಟೆ ಹೊಡೆದಿದ್ದಾರೆ.

ಹೊಯ್ಸಳ ಸೆಟ್​​​​​​​ನಲ್ಲಿ ಮೋಹಕ ತಾರೆ ರಮ್ಯಾ ರಂಗು..!

ಆರೇಂಜ್​ ಕಲರ್​​​ T-ಶರ್ಟ್​​ನಲ್ಲಿ ಪದ್ಮಾವತಿ ಮಿಂಚಿಂಗ್

ಹೊಯ್ಸಳನ ಮೇಕಿಂಗ್​​ ಸ್ಟೈಲ್​​ ಕಂಡು ಬೆರಗಾದ ರಮ್ಯಾ

ಪವರ್​ಫುಲ್​​ ಹೊಯ್ಸಳನಿಗೆ ದಂತದ ಗೊಂಬೆ ಸಾಥ್​

ಸ್ಯಾಂಡಲ್​ವುಡ್​​ ಕ್ವೀನ್​ ರಮ್ಯಾ ಚಂದನವನದಲ್ಲಿ ರಾರಾಜಿಸಿದ ಕಾಲವೊಂದಿತ್ತು. ಸಾಲು ಸಾಲು ಸಿನಿಮಾಗಳ ಮೂಲಕ ಯಾರೂ ಸರಿಗಟ್ಟಲಾಗದ ರೀತಿ ಟಾಪ್​​ ಒನ್​​​ ಸ್ಥಾನದಲ್ಲಿ ಮಿಂಚಿದ್ದರು. ಸಿನಿಮಾ ತೊರೆದು, ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಮ್ಯಾ ಮತ್ಯಾಕೋ ಸಿನಿಮಾ ಕಡೆ ಸುಳಿಯಲೇ ಇಲ್ಲ. ಯಾವ ಗೂಗಲ್​ ಹುಡುಕಿದ್ರು ರಮ್ಯಾ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದೀಗ ರಮ್ಯಾ ಮತ್ತೆ ಕಂಬ್ಯಾಕ್​ ಆಗಿದ್ದಾರೆ. ಪ್ರತಿ ನಿತ್ಯ ಸಿನಿಮಾದ ಚಟುವಟಿಕೆಗಳಲ್ಲಿ ಭಾಗಿಯಾಗ್ತಿದ್ದಾರೆ.

ಇಂದಿಗೂ ಅದೇ ಗ್ಲಾಮರ್​​, ಅದೇ ಚಾರ್ಮಿಂಗ್​​, ಅದೇ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರೋ ರಮ್ಯಾ ಅಭಿಮಾನಿಗಳ ಪಾಲಿಗೆ ಕನಸಿನ ರಾಣಿ. ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ಕಾಲಿಡ್ತಾರೆ ಅನ್ನೋ ಬಿಸಿ ಬಿಸಿ ಸುದ್ದಿ ಚರ್ಚೆಯಾಗುತ್ತಲೇ ಇದೆ. ಇದಕ್ಕೆ ತುಪ್ಪ ಸುರಿಯೋ ಹಾಗೆ ರಮ್ಯಾ ಕನ್ನಡದ ಸಿನಿಮಾಗಳಿಗೆ ಸಪೋರ್ಟ್​ ಮಾಡ್ತಿದ್ದಾರೆ. ಸಿನಿಮಾ ಶೂಟಿಂಗ್​ ಸೆಟ್​ಗೆ ಭೇಟಿ ಕೊಟ್ಟು ಹರಟೆ ಹೊಡೆದಿದ್ದಾರೆ. ರಮ್ಯಾ ಹೊಯ್ಸಳನ ಅಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಆರೆಂಜ್​ ಟೀ ಶರ್ಟ್​​​ನಲ್ಲಿ ಮಿಂಚಿ ಚಿತ್ರತಂಡದ ಜೊತೆ ಟೈಮ್​ ಪಾಸ್​ ಮಾಡಿದ್ದಾರೆ.​​​​​

ಡಾಲಿ ಧನಂಜಯ ಸಿನಿ ಕರಿಯರ್​​​ನ 25ನೇ ಸಿನಿಮಾ ಹೊಯ್ಸಳ ಚಿತ್ರದ ಶೂಟಿಂಗ್​ ಭರದಿಂದ ಸಾಗಿದೆ. ಈ ನಡುವೆ ಹೊಯ್ಸಳನ ಅಡ್ಡಾದಲ್ಲಿ ವಿಶೇಷ ಅತಿಥಿಯೊಬ್ಬರು ಭೇಟಿ ಕೊಟ್ಟು ಸರ್​ಪ್ರೈಸ್​ ಕೊಟ್ಟಿದ್ದಾರೆ. ಯೆಸ್​​​.. ಮೋಹಕ ತಾರೆ ರಮ್ಯಾ ಶೂಟಿಂಗ್​ ಸೆಟ್​​ಗೆ ಭೇಟಿ ಕೊಟ್ಟು ಸಮಯ ಕಳೆದಿದ್ದಾರೆ. ಜೊತೆಗೆ ಹೊಯ್ಸಳ ಚಿತ್ರದ ಆ್ಯಕ್ಷನ್​ ಸೀಕ್ವೆನ್ಸ್​​​ಗಳನ್ನು ನೋಡಿ ವಾವ್ಹ್​​​ ಎಂದಿದ್ದಾರೆ. ಇಂಟೆನ್ಸ್​ ಆ್ಯಕ್ಷನ್​​ ಸೀನ್​​ ಕಂಡು ಬೆರಗಾದ ರಮ್ಯಾ ಸೂಪರ್​​ ಎಂದಿದ್ದಾರೆ. ಜೊತೆಗೆ ಚಾಕ್ಲೇಟ್​​​ ಹಾಗೂ ಆಸಕ್ತಿದಾಯಕ ಮಾತುಕತೆಗೆ ಧನ್ಯವಾದಗಳು ಎಂದು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಟಗರು ಡಾಲಿ ಮೊದಲ ಬಾರಿಗೆ ಹೊಯ್ಸಳ ಚಿತ್ರದಲ್ಲಿ ಪೋಲೀಸ್​ ರೋಲ್​​ನಲ್ಲಿ ಕಾಣಿಸ್ತಿದ್ದಾರೆ. ನೆಗಟಿವ್​​​​ ರೋಲ್​​ನಲ್ಲಿ ಆರ್ಭಟಿಸುತ್ತಿದ್ದ ಡಾಲಿಗೆ ಈ ಸಿನಿಮಾ ಸಿಕ್ಕಾಪಟ್ಟೆ ವಿಶೇಷವಾಗಿದೆ. ಸಖತ್​ ಚ್ಯುಸಿಯಾಗಿರುವ ಧನಂಜಯ ಪ್ರತಿ ಸಿನಿಮಾದಲ್ಲೂ ಒಂದಿಲ್ಲೊಂದು ವಿಭಿನ್ನ ಪಾತ್ರಗಳಲ್ಲಿ ಆರ್ಭಟಿಸುತ್ತಿದ್ದಾರೆ. ಹೊಯ್ಸಳ ಸಿನಿಮಾದ ಬಗ್ಗೆಯೂ ಎಲ್ರಿಗೂ ಕುತೂಹಲವಿದೆ. ಡಾಲಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್​ ನಟಿಸ್ತಾ ಇರೋದು ಚಿತ್ರಕ್ಕೆ ಮತ್ತಷ್ಟು ಪ್ಲಸ್​ ಆಗಿದೆ.

ವಿಜಯ್​ ಎನ್​​ ನಿರ್ದೇಶನದ ಕರಾಮತ್ತಿನಲ್ಲಿ ಹೊಯ್ಸಳ ಮೂಡಿ ಬರ್ತಿದೆ. ಈ ಸಿನಿಮಾಗೆ ಕಾರ್ತಿಕ್​​​, ಯೋಗಿ ಜಿ ರಾಜ್​​ ಬಂಡವಾಳ ಹೂಡಿದ್ದು ಅಜನೀಶ್​ ಲೋಕನಾಥ್​​ ಮ್ಯೂಸಿಕ್​ ಕಂಪೋಸಿಂಗ್​ ಇದೆ. ಮಾಸ್ತಿ ಸಂಭಾಷಣೆಯಲ್ಲಿ ಸಿನಿಮಾ ಘರ್ಜಿಸಲಿದೆ. ಪಕ್ಕಾ ಮಾಸ್​ ಜಾನರ್​​ನಲ್ಲಿ ಸಿನಿಮಾ ಮೂಡಿ ಬರ್ತಿದ್ದು ರಮ್ಯಾ ಸಾಥ್​ ನೀಡಿರೋದ್ರಿಂದ ಸಿನಿಮಾದ ಮೈಲೇಜ್​​​ ಹೆಚ್ಚಾಗಲಿದೆ. ಪದೇ ಪದೇ ಸಿನಿಮಾ ಸುದ್ದಿಯಲ್ಲಿರೋ ರಮ್ಯಾ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿ ಎಂಬುದೇ ಫ್ಯಾನ್ಸ್​ ಅಶಯವಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES