ಬೆಂಗಳೂರು: ಸದ್ಯ ಪಿಎಸ್ಐ ಹಗರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.. ಇದನ್ನೇ ದಾಳ ಮಾಡಿಕೊಂಡು ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್ ಸಿಡಿದು ನಿಂತಿದೆ. ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ, ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಹಗರಣದ ವಿಚಾರವಾಗಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಕಾಂಗ್ರೆಸ್ ಆಕ್ಟೀವ್ ಆಗಿದೆ. ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಎಲ್ಲ ರೀತಿಯ ಯುದ್ಧಗಳನ್ನು ಮಾಡುತ್ತಿದೆ. ಅದರಲ್ಲೂ ಸರ್ಕಾರದ ಭಾಗವಾದ ಸಚಿವರು ಮತ್ತು ಬಿಜೆಪಿ ನಾಯಕರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಸಿಓಡಿ ತನಿಖೆ ಬಿಟ್ಟು ನ್ಯಾಯಾಂಗ ತನಿಖೆ ನಡೆಸಲು ಅವಕಾಶ ನೀಡಬೇಕು ಅಂತ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡಿತ್ತು. ಅಲ್ಲದೆ ಪ್ರತಿ ದಿನ ಮಾಧ್ಯಮಗಳ ಮುಂದೆ ಮಾತನಾಡಿ ಹಗರಣವನ್ನು ಜನರ ಬಾಯಲ್ಲಿ ಜೀವಂತ ಇರಿಸುವ ಪ್ರಯತ್ನವನ್ನು ಕಾಂಗ್ರೆಸ್ ಯಶಸ್ವಿಯಾಗಿ ಮಾಡುತ್ತಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಹಗರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಸಚಿವ ಅಶ್ವಥ್ ನಾರಾಯಣ ಕೈ ಮಾಡ ಇದೆ ಅಂತ ಆರೋಪಿಸಿದ್ರು. ಇದೀಗ, ಮತ್ತೊಬ್ಬ ಸಚಿವರ ಹೆಸರು ಹೇಳುವ ಮೂಲಕ ಸಿದ್ದು ಬಾಂಬ್ ಸಿಡಿಸಿದ್ದಾರೆ.
ಯೂತ್ ಕಾಂಗ್ರೆಸ್ ಸಭೆಯಲ್ಲಿ ಸಿದ್ದರಾಮಯ್ಯ ಅತಿ ಉತ್ಸಹದಿಂದ ಭಾಷಣ ಮಾಡ್ತಾ ಇದ್ರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುವಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಕಿವಿ ಮಾತುಗಳನ್ನು ಸಿದ್ದರಾಮಯ್ಯ ಹೇಳ್ತಾ ಇದ್ರು. ಇದೇ ಸಂದರ್ಭದಲ್ಲಿ ಪಿಎಸ್ಐ ಹಗರಣ ವಿಚಾರವಾಗಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ರು.
ಒಟ್ಟಿನಲ್ಲಿ ಪಿಎಸ್ಐ ಹಗರಣದಲ್ಲಿ ಹೊಸದಾಗಿ ಸಚಿವ ಆರ್.ಅಶೋಕ್ ಹೆಸರನ್ನು ವಿರೋಧ ಪಕ್ಷದವರು ಹೇಳಿದ್ದಾರೆ. ಇಲ್ಲಿವರೆಗೆ ವಿಜಯೇಂದ್ರ ಮತ್ತು ಸಚಿವ ಅಶ್ವಥ್ ನಾರಾಯಣ ಹೆಸರು ಮಾತ್ರ ಸಿದ್ದರಾಮಯ್ಯ ಉಲ್ಲೇಖ ಮಾಡ್ತಾ ಇದ್ರು. ಈಗ ಸಚಿವ ಅಶೋಕ ಹೆಸರನ್ನು ಸಿದ್ದರಾಮಯ್ಯ ಉಲ್ಲೇಖ ಮಾಡಿದ್ದು ಮತ್ತಷ್ಟು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಲಿದೆ.
ಬಸವರಾಜ್ ಚರಂತಿಮಠ್ ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು.