Monday, December 23, 2024

ನಿತ್ಯಾನಂದ ಅವರನ್ನ ಮದ್ವೆ ಆಗ್ತೀನಿ ಅಂದ್ರಾ ಜೇಮ್ಸ್​ ಚಕೋರಿ

ಜೇಮ್ಸ್​​ ಚಿತ್ರದ ನಾಯಕಿ ಪ್ರಿಯಾ ಆನಂದ್​​ ಯಾರಿಗೆ ತಾನೆ ಗೊತ್ತಿಲ್ಲ. ಹೆಸರಿಗೆ ತಕ್ಕಂತೆ ಇವರು ನಟನೆಯಲ್ಲೂ ಎಲ್ಲರಿಗೂ ಪ್ರಿಯವಾಗಿರುವ ಕಲಾವಿದೆ. ಸದ್ಯ, ಪ್ರಿಯಾ ಆನಂದ್​ ವಿವಾದಿತ ಹೇಳಿಕೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವ್ರ ಹೆಸರು ದೇಶ ಬಿಟ್ಟು ಪರಾರಿಯಾಗಿರೋ ಕೈಲಾಸವಾಸಿ, ಅಘೋಷಿತ ದೇವಮಾನವ ನಿತ್ಯಾನಂದ ಅವರ ಜತೆ ತಳುಕು ಹಾಕಿಕೊಂಡಿದೆ. ಅಸಲಿಗೆ ಏನ್​​ ಸಮಾಚಾರ ಅಂತೀರಾ. ಈ ಸ್ಟೋರಿ ಓದಿ.

ಅಸಲಿಗೆ ಯಾವುದು ಸತ್ಯ.. ಯಾವುದು ಸುಳ್ಳು.. ಪ್ರಿಯಾ ಸ್ಪಷ್ಟನೆ

ಅಪ್ಪು ಅಭಿನಯದ ರಾಜಕುಮಾರ, ಜೇಮ್ಸ್​​ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಪ್ರಿಯಾ ಆನಂದ್​​ ವಿವಾದಿತ ಹೇಳಿಕೆಯಿಂದ ಸಖತ್​ ಸುದ್ದಿಯಲ್ಲಿದ್ದಾರೆ. ದೇಶ ಬಿಟ್ಟು ಕೈಲಾಸದಲ್ಲಿ ನೆಲೆಸಿರುವ ಅಘೋಷಿತ ದೇವಮಾನವ ನಿತ್ಯಾನಂದ ಅವರನ್ನು ಮದ್ವೆ ಆಗೋದಾಗಿ ಹೇಳಿಕೆ ನೀಡಿ ವೀವಾದದಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ನಿತ್ಯಾನಂದ ಅವರನ್ನು ಮದ್ವೆ ಆಗಲು ಬಯಸಿದ್ದೇನೆ ಎಂದಿದ್ದರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ವಿಲಾಸಪ್ರಿಯ, ರಾಸಲೀಲೆಯಲ್ಲಿ ಸಿಲುಕಿ ದೇಶ ಬಿಟ್ಟು ಪರಾರಿಯಾಗಿ ತನ್ನದೇ ಸಾಮ್ರಾಜ್ಯಕ್ಕೆ ಕೈಲಾಸ ಎಂಬ ಹೆಸರಿಟ್ಟು ದೇವಮಾನವನಾಗಿ ಮೆರೆಯುತ್ತಿರುವ ಸನ್ಯಾಸಿಯೇ ಸ್ವಾಮಿ ನಿತ್ಯಾನಂದ. ಇದೀಗ ಪ್ರಿಯಾ ಅನಂದ್​ಗೂ, ಸ್ವಾಮಿ ನಿತ್ಯಾನಂದನಿಗೂ ಏನು ಸಂಬಂಧ ಅಂತಾ ಕೇಳಬೇಡಿ. ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡ್ತಾ ತಮಾಷೆಗೆ ನಿತ್ಯಾನಂದ ಅವರ ಟ್ರೋಲ್​​ಗಳನ್ನು ಉಲ್ಲೇಖಿಸಿ, ನಾನು ನಿತ್ಯಾನಂದ ಅವರನ್ನು ಮದ್ವೆ ಆಗ್ತೀನಿ ಎಂದಿದ್ದಾರೆ ಪ್ರಿಯಾ ಅನಂದ್​​​. ಇದೀಗ ಈ ಹೇಳಿಕೆ ಸಖತ್ ಟ್ರೋಲ್​​ ಆಗಿದೆ.

ಇದ್ರ ಜತೆಯಲ್ಲಿ, ನನ್ನ ಹೆಸರಿಗೂ, ಅವರ ಹೆಸರಿಗೂ ಸಾಮ್ಯತೆ ಇದೆ. ನಾನು ಅವರನ್ನು ಮದ್ವೆ ಆದರೆ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಹೇಳಿಕೆಯನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಪ್ರಿಯಾ ಅನಂದ್​ ಅಲ್ಲಗಳೆದಿದ್ದರೂ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಈ ಕುರಿತು ಪವರ್​ ಟಿವಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿತಾದ್ರೂ, ದಯವಿಟ್ಟು ನಾನು ಹೇಳಿಲ್ಲ. ಇದನ್ನು ಇಲ್ಲಿಗೆ ಬಿಟ್ಟಿಬಿಡಿ ಎಂದು ಸಮಜಾಯಿಷಿ ಕೊಟ್ಟರು. ಒಟ್ಟಾರೆ ತಮಾಷೆಗೆ ಆಡಿದ ಮಾತು ಈ ಹಂತದವರೆಗು ತಲುಪಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ತಕ್ಷಣಕ್ಕೆ ರಿಯಾಕ್ಟ್​ ಮಾಡಿದ್ದರೆ ಇಂತಹ ಸಣ್ಣ ಪುಟ್ಟ ಆರೋಪಗಳಿಂದ ಬೇಗ ಮುಕ್ತವಾಗಬಹುದಿತ್ತು. ಎನಿವೇ ಪ್ರಿಯಾ ಆನಂದ್​​ ಸಿನಿಕರಿಯರ್​ಗೆ ಆಲ್​ ದಿ ಬೆಸ್ಟ್​​​​​.

ರಾಕೇಶ್​​ ಅರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES