Wednesday, December 25, 2024

ಅಕ್ರಮ ಸಂಬಂಧಕ್ಕೆ ಪತಿಯನ್ನೇ ಕೊಂದ ಪತ್ನಿ..!

ಮೈಸೂರು : ಜಿಲ್ಲೆ ಹುಣಸೂರು ತಾಲೂಕಿನ ಹುಂಡಿಮಾಳ ಗ್ರಾಮದಲ್ಲಿ ನಡೆದಿದ್ದ ಮರ್ಡರ್ ಮಿಸ್ಟ್ರಿ ಒಂದು ತಿಂಗಳ ನಂತರ ಬಯಲಾಗಿದೆ. ಪ್ರಿಯಕರನಿಗಾಗಿ ಗಂಡನಿಗೆ ವಿಷವಿಕ್ಕಿದ ಪತ್ನಿಯ ಕಳ್ಳಾಟ ಒಂದು ತಿಂಗಳ ನಂತರ ಬೆಳಕಿಗೆ ಬಂದಿದೆ. 36 ವರ್ಷದ ಲೋಕಮಣಿ ಮೃತ ದುರ್ದೈವಿ ಯಾದ್ರೆ, 27 ವರ್ಷದ ಶಿಲ್ಪಾ ಗಂಡನನ್ನೇ ಕೊಂದ ಪತ್ನಿಯಾಗಿದ್ದಾಲೆ. ಲೋಕಮಣಿ ಹಾಗೂ ಶಿಲ್ಪಾ ಮದುವೆಯಾಗಿ 9 ವರ್ಷಗಳಾಗಿತ್ತು. ದಂಪತಿಗೆ ಇಬ್ಬರು ಪುಟ್ಟ ಮಕ್ಕಳೂ ಇವೆ. ಆದರೆ ಮೋಹಕ್ಕೆ ಬಿದ್ದ ಪತ್ನಿ ಶಿಲ್ಪಾ 9 ವರ್ಷಗಳಿಂದಲೂ ಪಕ್ಕದ ಮನೆಯ ಪ್ರಿಯಕರ ಅಭಿನಂದನ್‌ ಜೊತೆಗೆ ಲವ್ವಿಡವಿ ನಡೆಸಿದ್ದಾಳೆ. ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ಶಿಲ್ಪಾ 9 ವರ್ಷಗಳಿಂದಲೂ ಗಂಡನ ಮನೆಯಲ್ಲೇ ಇದ್ದಳು. ಗಂಡನ ಮನೆಯಲ್ಲೇ ಇದ್ದುಕೊಂಡು ಪಕ್ಕದ ಮನೆಯ ಪ್ರಿಯಕರನ ಜೊತೆ ಕಳ್ಳಾಟ ನಡೆಸಿದ್ದಾಳೆ.

ಪತ್ನಿಯ ಕಳ್ಳಾಟ ಗಂಡನಿಗೆ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಗಲಾಟೆ ಆಗಿತ್ತು. ಅತ್ತೆ ಮುಂದೆ ತಪ್ಪು ಒಪ್ಪೊಕೊಂಡ ಶಿಲ್ಪಾ ಮುಂದೆ ತಪ್ಪು ಮಾಡದಂತೆ ಒಪ್ಪಿಕೊಂಡಿದ್ದಳು. ಆದರೆ ಜೂನ್ 9 ರಂದು ಗಂಡ ಜೋರು ಗಲಾಟೆ ಮಾಡಿದ್ದ. ಇದೇ ಕಾರಣಕ್ಕೆ ರಾತ್ರಿ ಊಟ ಮಾಡುವ ವೇಳೆ ವಿಷವಿಟ್ಟು ಪತಿಯನ್ನೇ ಕೊಂದಿರುವ ಸತ್ಯ ತಿಂಗಳ ನಂತರ ಬಯಲಾಗಿದೆ. ಜೂನ್‌ 9ರಂದು ಊಟ ಮಾಡಿ ಮಲಗಿದ ಲೋಕಮಣಿ, ಬೆಳಗ್ಗೆ ಆಗುವಷ್ಟರಲ್ಲಿ ಹಾಸಿಗೆಯಲ್ಲೇ ಸಾವನಪ್ಪಿದ್ದ. ಹೆಂಡತಿ ಶಿಲ್ಪಾ ಹೃದಯಾಘಾತದಿಂದ ಪತಿ ಸತ್ತಿದ್ದಾನೆ ಅಂತ ಎಲ್ಲರನ್ನೂ ನಂಬಿಸಿದ್ದಾಳೆ. ಆದರೆ ಗಂಡ ಸತ್ತ ಮಾರನೇ ದಿನವೇ ಶಿಲ್ಪಾ ವರ್ತನೆ ಬದಲಾಗಿದ್ದು, ಅನುಮಾನ ಬಂದ ಅತ್ತೆ ನೀಡಿದ ದೂರಿನಿಂದ ಆಕೆಯ ಮೋಸದಾಟ ಬಯಲಾಗಿದೆ.

ಸದ್ಯ ಶಿಲ್ಪಾ ಪೊಲೀಸರ ಅತಿಥಿಯಾಗಿದ್ದು, ಪ್ರಿಯಕರ ಅಭಿನಂದನ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ‌ ಗ್ರಾಮದ ಜನ ಇಬ್ಬರ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೊಂದ ತಾಯಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಸುರೇಶ್ ಬಿ ಪವರ್ ಟಿವಿ ಮೈಸೂರು

RELATED ARTICLES

Related Articles

TRENDING ARTICLES