Wednesday, January 22, 2025

‘ಕಾಳಿ ಪೋಸ್ಟರ್’ ವಿವಾದದ ಬೆನ್ನಲ್ಲೇ ಮೌನ ಮುರಿದ ಮೋದಿ

ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ಚಿತ್ರಿಸಿರುವ ವಿವಾದಾತ್ಮಕ ಕಾಳಿ ದೇವತೆ ಪೋಸ್ಟರ್ ಬಗ್ಗೆ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ಈ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.. ಹೌದು, ಇತ್ತೀಚೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಕಾಳಿ ದೇವಿಯನ್ನು ಮಾಂಸ ತಿನ್ನುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆಯಾಗಿ ಕಲ್ಪಿಸಿಕೊಳ್ಳಲು ಒಬ್ಬ ವ್ಯಕ್ತಿಯಾಗಿ ತನಗೆ ಎಲ್ಲಾ ಹಕ್ಕಿದೆ ಎಂಬ ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹೌದು, ಸ್ವಾಮಿ ಆತ್ಮಸ್ಥಾನಂದ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ವಿಶ್ವ ಕಲ್ಯಾಣಕ್ಕಾಗಿ ಅಧ್ಯಾತ್ಮಿಕ ಶಕ್ತಿಯೊಂದಿಗೆ ಮುನ್ನಡೆಯುತ್ತಿರುವ ಭಾರತಾದ್ಯಂತ ದೇಶಕ್ಕೆ ಕಾಳಿ ಮಾತೆಯ ಆಶೀರ್ವಾದ ಸದಾ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ರಾಮಕೃಷ್ಣ ಮಿಷನ್ ಆಯೋಜಿಸಿದ್ದ ಸ್ವಾಮಿ ಆತ್ಮಸ್ಥಾನಂದರ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸ್ವಾಮಿ ರಾಮಕೃಷ್ಣ ಪರಮಹಂಸರು ಕಾಳಿ ದೇವಿಯ ದರ್ಶನ ಪಡೆದಿದ್ದರು. ಆಕೆಯ ಪ್ರಜ್ಞೆಯಿಂದ ಎಲ್ಲವೂ ವ್ಯಾಪಿಸಿದೆ ಎಂದು ನಂಬಿದ್ದರು. ಸ್ವಾಮಿ ರಾಮಕೃಷ್ಣ ಪರಮಹಂಸರು ಮಾ ಕಾಳಿಯ ದರ್ಶನವನ್ನು ಹೊಂದಿದ್ದ ಒಬ್ಬ ಸಂತರು. ಅವರು ಕಾಳಿಯ ಪಾದದಲ್ಲಿ ತನ್ನ ಸಂಪೂರ್ಣ ಅಸ್ತಿತ್ವವನ್ನು ಅರ್ಪಿಸಿದರು. ಅವರು ಇಡೀ ಜಗತ್ತಿಗೆ ಹೇಳುತ್ತಿದ್ದರು, ಎಲ್ಲವೂ ದೇವಿಯ ಪ್ರಜ್ಞೆಯಿಂದ ಹರಡಿದೆ ಎಂದು. ಈ ಪ್ರಜ್ಞೆಯು ಬಂಗಾಳದ ಕಾಳಿ ಪೂಜೆಯಲ್ಲಿ ಗೋಚರಿಸುತ್ತದೆ. ಈ ಪ್ರಜ್ಞೆಯು ಬಂಗಾಳ ಮತ್ತು ದೇಶದ ನಂಬಿಕೆಯಲ್ಲಿ ಗೋಚರಿಸುತ್ತದೆ ಎಂದು ಮೋದಿ ಬಣ್ಣಿಸಿದರು.

ಕಾಳಿ ಪೋಸ್ಟರ್‌ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಮತ್ತು ಟಿಎಂಸಿ ಮಧ್ಯೆ ನೇರಾ ನೇರ ಫೈಟ್‌ ಶುರುವಾಗಿದೆ.. ಮಹುವಾ ಮೊಯಿತ್ರಾ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಅಂತ ಸಮರ್ಥನೆಗಿಳಿದ್ದಾರೆ.. ಈ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದು ಪರೋಕ್ಷವಾಗಿಯೇ ದೇವಿ ವಿಚಾರವಾಗಿ ರಗಳೆ ಮಾಡ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES