Monday, December 23, 2024

ಈದ್ಗಾ ಮೈದಾನ ವಿವಾದ: ನಾಳೆ ಚಾಮರಾಜಪೇಟೆ ಬಂದ್

ಬೆಂಗಳೂರು : ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿಂದಂತೆ ನಾಳೆ ಚಾಮರಾಜಪೇಟೆ ಬಂದ್‍ಗೆ ಕರೆ ಕೊಡಲಾಗಿದೆ.

ನಾಳೆ ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ತನಕ ಚಾಮರಾಜಪೇಟೆ ಬಂದ್ ಮಾಡುವಂತೆ ನಾಗರೀಕ ಒಕ್ಕೂಟ ಕರೆ ಕೊಟ್ಟಿದೆ. ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಕೂಡ ಸಾಥ್ ನೀಡುತ್ತಿವೆ. ಈ ಮೂಲಕ ಬಂದ್ ತೀವೃಗೊಳಿಸಲು ಸಂಘಟನೆಗಳು ಕೂಡ ಮುಂದಾಗಿವೆ.

ಚಾಮರಾಜಪೇಟೆ ಮೈದಾನ ವಕ್ಪ್​​​ಗೆ ಸೇರಬಾರದು ಅದು ಆಟದ ಮೈದಾನವಾಗಿಯೇ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಈ ಬಂದ್ ನಡೆಯಲಿದೆ. ವ್ಯಾಪಾರ ಚಟುವಟಿಕೆಯ ಕೇಂದ್ರವಾಗಿರುವ ಬೆಂಗಳೂರಿನ ಚಾಮರಾಜಪೇಟೆ ಬಂದ್‍ಗೆ ಈಗಾಗಲೇ ನಾಗರೀಕ ಒಕ್ಕೂಟ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಈಗಾಗಲೇ ಎಲ್ಲಾ ಅಂಗಡಿ ಮುಗ್ಗಟ್ಟು ಮನೆ ಮನೆಗಳಿಗೆ ಕರ ಪತ್ರ ಹಂಚಲಾಗಿದೆ. ಚಾಮರಾಜಪೇಟೆ ಅಂಗಡಿಗಳ ಗೋಡೆ, ಬ್ಯಾಂಕ್‍ಗಳ ಮುಂದೆ ಮುಂದೆ ಬಂದ್​ಗೆ ಸಂಪೂರ್ಣ ಬೆಂಬಲ ನೀಡುವಂತೆ ಪೋಸ್ಟರ್ ಅಂಟಿಸಲಾಗಿದೆ. ಆಟೋಗಳ ಮೂಲಕ ಬಂದ್ ಬಗ್ಗೆ ಅನೌನ್ಸ್​​​​​​ಮೆಂಟ್ ಮಾಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಬಿಬಿಎಂಪಿ ಕಚೇರಿಗೂ ಬಿತ್ತಿ ಪತ್ರ ಅಂಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಂದಿನಿಂದಲೇ ಕಣ್ಗಾವಲು ಇರಿಸಿವೆ.

RELATED ARTICLES

Related Articles

TRENDING ARTICLES