Monday, December 23, 2024

ಕಾಡಿನಿಂದ ನಾಡಿಗೆ ಬಂದ ಹುಲಿರಾಯ..!

ಮೈಸೂರು : ಕಾಡಿನಿಂದ ನಾಡಿಗೆ ಹುಲಿ ಬಂದ ಘಟನೆ ಹೆಚ್‌.ಡಿ.ಕೋಟೆ ತಾಲೂಕಿನ ಚಾಮಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿ‌ನ ಚಾಮಹಳ್ಳಿ ಗ್ರಾಮದ ಜಮೀನುವೊಂದರಲ್ಲಿ ನಿನ್ನೆ ಸಂಜೆ ಹುಲಿ ಕಾಣಿಸಿಕೊಂಡಿದೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.

ಇನ್ನು, ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಹುಲಿ ಇರುವಿಕೆ ಅಧಿಕಾರಿಗಳು ಖಚಿತ ಪಡಿಸಿಡಿಸಿದ್ದಾರೆ. ಇಂದು ಹುಲಿ ಸೆರೆ ಕಾರ್ಯಾಚರಣೆಗೆ ಸಿದ್ಧವಾಗಿರೋ ಅಧಿಕಾರಿಗಳು ಸ್ಥಳಕ್ಕೆ ಭೀಮ, ಶ್ರೀಕಂಠ, ಅರ್ಜುನ ಆನೆಗಳನ್ನ ಸಿಬ್ಬಂದಿ ಕರೆಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES