Thursday, January 23, 2025

ಹಾಡಹಗಲೇ ಮಾಜಿ ನಗರಸಭೆ ಅಧ್ಯಕ್ಷನ ಹತ್ಯೆ

ಕಲಬುರಗಿ: ಹಾಡು ಹಗಲೇ ಮಾಜಿ ನಗರ ಸಭೆ ಅಧ್ಯಕ್ಷನ ಮೇಲೆ‌ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ನಡೆದಿದೆ.

ಶಹಬಾದ್ ನಗರ ಸಭೆ ಮಾಜಿ ಅಧ್ಯಕ್ಷ ಹಾಲಿ ನಗರ ಸಭೆಯ ಅಧ್ಯಕ್ಷೆಯ ಅಂಜಲಿ ಪತಿ ಗಿರೀಶ್ ಕಂಬಾನುರ್ ಮೇಲೆ ರೈಲ್ವೇ ಟಿಕೇಟ್​​ ಬುಕ್​​ ಮಾಡಲು ಬಂದಾಗ ನಗರದ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಹಲ್ಲೆ ಮಾಡಲಾಗಿದೆ.

ಹಳೇ ವೈಷಮ್ಯದ ಹಿನ್ನಲೆ ನಾಲ್ವರು ಯುವಕರಿಂದ ದಾಳಿ ಮಾಡಿ 15 ರಿಂದ 20 ಬಾರಿ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಇರಿದಿದ್ದಾರೆ.

ಗಂಭಿರ ಗಾಯಗೊಂಡ ಗಿರೀಶ್ ಕಂಬಾನೂರನನ್ನ ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ತೀರಾ ಚಿಂತಾಜನಕ ಸ್ಥಿತಿಯಲ್ಲಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES