Sunday, January 19, 2025

ಭೋರ್ಗರೆದು ಹರಿಯುತ್ತಿರುವ ಹೊಗೆನಕಲ್​ ಫಾಲ್ಸ್​

ಚಾಮರಾಜನಗರ : ಕಾವೇರಿ ನದಿ ಪಾತ್ರದಲ್ಲಿ ಹೊರ ಹರಿವಿನಿಂದಾಗಿ ಹನೂರು ತಾಲೂಕಿನ ಹೊಗೆನೆಕಲ್ ಜಲಾಪಾತ ಭೋರ್ಗರೆದು ಹರಿಯುತ್ತಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹೊಗೇನಕಲ್ ಜಲಪಾತ ಹಾಗೂ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಅಪರೂಪದ ದೃಶ್ಯ ಕಾವ್ಯವನ್ನ ಕಣ್ತುಂಬಿಕೊಳ್ಳಲು ಮಳೆಯ ನಡುವೆಯೂ ಜಲಪಾತಗಳತ್ತ ಪ್ರವಾಸಿಗರು ಧಾವಿಸುತ್ತಿದ್ದಾರೆ.ಹಸಿರು ಬೆಟ್ಟದ ನಡುವೆ ಹಾಲು ಹೊಳೆಯಾಗಿ ಹರಿಯುತ್ತಿರುವ ಕಾವೇರಿ ವೈಭವ ನೋಡಲು ಸದ್ಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ.

ಇಲ್ಲಿನ ಜಲಪಾತವು ನೀರಿನಿಂದ ತುಂಬಿ ತುಳುಕುವ ದೃಶ್ಯ ಎಂಥವರನ್ನು ರೋಮಾಂಚನಗೊಳಿಸದೇ ಇರದು. ಹೊಗೆನಕಲ್ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿ ನೆಲೆಸಿದ್ದು, ಕರ್ನಾಟಕದ ಜೀವ ನದಿ ಎಂದೆ ಗುರುತಿಸಲ್ಪಟ್ಟಿದೆ.

RELATED ARTICLES

Related Articles

TRENDING ARTICLES