Monday, December 23, 2024

746 ಕೋಟಿ ರೂ. ಸಾಲದಲ್ಲಿದೆ ಬಿಎಂಟಿಸಿ..!

ಬೆಂಗಳೂರು : ನಗರದ ಗಲ್ಲಿ ಗಲ್ಲಿಗೂ ಸಂಪರ್ಕ ಜಾಲ.. ಲಕ್ಷಾಂತರ ಜನ್ರ ಜೀವನಾಡಿ.. ರಾಷ್ಟ್ರ ಮಟ್ಟದಲ್ಲಿ ಹತ್ತಾರು ಪ್ರಶಸ್ತಿಗಳನ್ನ ಬಾಚ್ಚಿಕೊಂಡಿರೋ ಇದೇ ಬಿಎಂಟಿಸಿ ಸಾಲದ ಸುಳಿಯಲ್ಲಿ ಸಿಲುಕಿದೆ. ನಾಲ್ಕೈದು ವರ್ಷಗಳಲ್ಲಿ ನೂರಾರು ಕೋಟಿ ಸಾಲ ಪಡೆದಿದೆ. ತಾನು ಪಡೆದಿರೋ ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗದೆ ಇದೀಗ ಹೆಣಗಾಡುತ್ತಿದೆ.

ಟ್ಯಾಕ್ಸಿ ಸೇವೆ, ಮೆಟ್ರೋ ವಿಸ್ತರಣೆ ಹೆಚ್ಚಾಗುತ್ತಿದ್ದ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಕೋವಿಡ್ ಕಾರಣದಿಂದ ಇನ್ನೂ ಐಟಿ ಬಿಟಿ ಕಂಪನಿಯ ನೌಕರರು ವರ್ಕ್ ಫ್ರಮ್ ಹೋಂನಲ್ಲಿ ಇದ್ದಾರೆ. ಇದಲ್ಲದೆ ಬಿಎಂಟಿಸಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಸಾಲ ಮಾಡಲಾಗಿದೆ. ಆದ್ರೆ ಸಾಲದ ಪ್ರತಿಯಾಗಿ ಬಡ್ಡಿನೂ ಕಟ್ಟೋಕೆ ಆಗದೆ ಪರದಾಡುತ್ತಿದೆ. ಸಾಲದ ಹೊರೆ ಬಗ್ಗೆ ಬಿಎಂಟಿಸಿ ಎಂ.ಡಿ ಸತ್ಯವಾತಿ ಮಾತನಾಡಿದ್ದು, ಸದ್ಯ 746 ಕೋಟಿ ಸಾಲ ಇದೆ. ಇರೋ ಸಾಲ‌ ಮರುಪಾವತಿ ಸವಾಲು ಆಗಿದ್ದು, ಹಂತವಾಗಿ ಸಾಲ ತಿರಿಸೋ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ BMTC ಇದೀಗ ಪರ್ಮನೆಂಟಾಗಿ ಬೀಗ ಬೀಳುತ್ತಾ ಅನ್ನೋ ಆತಂಕದಲ್ಲಿದೆ. ಆಡಳಿತ ವೈಫಲ್ಯ ಹಾಗೂ ದುಂದುವೆಚ್ಚ, ನಿಯಂತ್ರಣ ಹಾಕಲು ಸಾಧ್ಯವಾಗದೇ ಇರೋದ್ರಿಂದ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ರೂ ಅದನ್ನ ಮೇಲಕ್ಕೆತ್ತಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಸರ್ಕಾರ. ಕೋವಿಡ್ ಅವಧಿಯಲ್ಲಿ ಅತಿ ಹೆಚ್ಚು ಸಾಲ ಪಡೆದಿದ್ದು, ಇದೀಗ ಬಡ್ಡಿ ಕಟ್ಟೋದೇ ಸವಾಲಾಗಿದೆ. 2019-2020ರಲ್ಲಿ 160 ಕೋಟಿ, 2020-21ರಲ್ಲಿ 407 ಕೋಟಿ ಸಾಲ, 2022 ಮಾರ್ಚ್​​ನಲ್ಲಿ 183 ಕೋಟಿ ಸಾಲ ಪಡೆಯಲಾಗಿದೆ.

ಒಟ್ಟಿನಲ್ಲಿ ಆಡಳಿತ ವೈಫಲ್ಯ, ನಿಯಂತ್ರಣಕ್ಕೆ ಬಾರದ ಅಕ್ರಮಗಳಿಂದ ನಿಗಮ ದಿವಾಳಿಯಾಗಿದೆ. ನಷ್ಟದಿಂದ ಪಾರಾಗಲು ಕೋಟಿ ಕೋಟಿ ಸಾಲ ಪಡೆದು ಮರುಪಾವತಿಸಲು ಹೆಣಗಾಡುತ್ತಿದೆ. ಈ ಹಿಂದೆ ವೋಲ್ವೋ ಬಸ್​ಗಳನ್ನ ಮಾತ್ರ ಬಿಳಿಯಾನೆ ಅಂತ ಸರ್ಕಾರದ ಹೇಳಿತ್ತು. ಆದ್ರೆ ಇದೀಗ ಇಡೀ ಬಿಎಂಟಿಸಿನೇ ಸರ್ಕಾರಕ್ಕೆ ಬಿಳಿಯಾನೆ ಆಗಿದೆ. ನಿಗಮ ಈಗೇ ಮುಂದುವರೆ ಸಾಲ ಮಾಡಿಯೇ ತುಪ್ಪ ತಿನ್ನುವ ಪರಿಸ್ಥಿತಿ ಎದುರಾಗಲಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES