Sunday, January 19, 2025

ಹೂತಿದ್ದ ಶವದ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ

ವಿಜಯಪುರ : ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಯಾಗುತ್ತಿದ್ದು, ಜನ ಜೀವನ ಅಸ್ಥವ್ಯಸ್ತವಾಗಿದೆ. ಜೊತೆಗೆ ಹಲವೆಡೆ ರೆಡ್, ಯೊಲ್ಲೋ , ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಆದರೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಒಂದು ಹನಿ ಮಳೆ ಕೂಡ ಆಗಿಲ್ಲ. ಮಳೆಯಿಲ್ಲದೆ ಜನರು ಕಂಗಾಲಾಗಿದ್ದು, ವಿಶಿಷ್ಟ ಆಚರಣೆ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ. ಸದ್ಯ ಮಳೆ ಗಾಗಿ ವಿಜಯಪುರ ಜಿಲ್ಲೆಯಲ್ಲಿ ಜನರು ವಿಶಿಷ್ಟ ಆಚರಣೆಯೊಂದು ಮಾಡುತ್ತಿದ್ದು, ಸ್ಮಶಾನದಲ್ಲಿ ಹೂತಿದ್ದ ಶವ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥನೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

ಕಳೆದ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸ್ಮಶಾನದಲ್ಲಿಶವ ಹೂತಿರೋ ಸ್ಥಳದಲ್ಲಿ ಎರಡು ಅಡಿ ಮಣ್ಣು ತೆಗೆದು ಗ್ರಾಮಸ್ಥರು ನೀರು ಹಾಕಿದರು. ಟ್ಯಾಂಕರ್ ಮೂಲಕ ಶವದ ಮೇಲೆ ಜನರು ನೀರು ಹಾಕಿದ್ದು, ಕೆಲ ಶವಗಳು ಬಾಯಿ ಬಿಟ್ಟಿರುತ್ತವೆ. ಅಂಥ ಶವಗಳಬಾಯಿಗೆ ನೀರು ಹಾಕೋ ಪದ್ದತಿ ಇದಾಗಿದೆ. ಎಲ್ಲೆಲ್ಲಿ ಶವ ಬಾಯಿ ಬಿಟ್ಟಿವೆ ಎಂದು ವ್ಯಕ್ತಿಹೇಳಿದ್ದು, ಕೆಲ ಶವಗಳ ಹೂತಿರೋ ಸ್ಥಳದಲ್ಲಿ ಎರಡು ಅಡಿ ಅಗೆದು ಸ್ಥಳಿಯರು ನೀರು ಹಾಕಿದರು. ಕಾಕತಾಳಿಯವೆಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ಜಿಟಿಜಿಟಿ ಮಳೆ ಆರಂಭವಾಯಿತು.

RELATED ARTICLES

Related Articles

TRENDING ARTICLES