Monday, December 23, 2024

ಮತ್ತೆ ‘ಓಂ’ನಲ್ಲಿ ನಟಿಸಿದ ಸ್ವೀಟ್ 60 ಶಿವಣ್ಣ ಖದರ್ 

ಭೂಗತ ಲೋಕದ ಕಥೆಯ ಮೂಲಕ ಬೆಚ್ಚಿ ಬೀಳಿಸಿದ್ದ ಓಂ ಸಿನಿಮಾ ಬಾಕ್ಸ್​ ಆಫೀಸ್​ ಲೂಟಿ ಮಾಡಿತ್ತು. ಇಂದು, ಮುಂದು, ಎಂದೆಂದೂ ಓಂ ಸಿನಿಮಾದ ದಾಖಲೆ ಮುರಿಯೋಕೆ ಸಾಧ್ಯವಿಲ್ಲ. ಈ ಸಿನಿಮಾದ ಪ್ರತಿ ಸೀನ್​​​​ ಕೂಡ ಅದ್ಭುತ, ಅಮೋಘ, ಅತಿರೋಚಕ. ಇದೀಗ ಮತ್ತೆ ಓಂ ಗೆಟಪ್​ನಲ್ಲಿ ಶಿವಣ್ಣ ಕಾಣಿಸಿದ್ದಾರೆ. ಎಲ್ಲಿ ಅಂತೀರಾ..? ಈ ಸ್ಟೋರಿ ಓದಿ.

  • ಐ ಲವ್​ ಯು.. ಯು ಮಸ್ಟ್​ ಲವ್​ ಮಿ ಡೈಲಾಗ್ ವೈರಲ್​​

ಸ್ವೀಟ್​ 60 ಶಿವಣ್ಣ ಅವ್ರಿಗೆ ವಯಸ್ಸೆ ಆಗಲ್ಲ ಬಿಡಿ. ಇದನ್ನ ಅವ್ರು ಮತ್ತೆ ಮತ್ತೆ ಪ್ರೂವ್​ ಮಾಡ್ತಾ ಬಂದಿದ್ದಾರೆ. ಅವ್ರ ಎನರ್ಜಿಗೆ ಅವರೇ ಸಾಟಿ. ಈ ವಯಸ್ಸಲ್ಲೂ ಅವ್ರ ಸರಿಸಮಾನವಾಗಿ ಹೆಜ್ಜೆ ಹಾಕೋ ಗಂಡು ಕೂಡ ಹುಟ್ಟಿಲ್ಲ. 60ರ ಅಂಚಿನಲ್ಲಿರೋ ಡಾ.ಶಿವಣ್ಣ ಇಂದಿಗೂ ಸಿನಿಮಾ ಪ್ರಮೋಷನ್​​ ವಿಚಾರದಲ್ಲಿ ಹಗಲು ರಾತ್ರಿ ಊರೂರು ಸುತ್ತೋದು ನೋಡಿದ್ರೆ ಹರೆಯದ ಯುವಕರು ಕೂಡ ಅಚ್ಚರಿಯಾಗ್ತಾರೆ.

ಸಿನಿಮಾ, ರಿಯಾಲಿಟಿ ಶೋ ಅಂತಾ ಸದಾ ಬ್ಯುಸಿ ಇರೋ ಶಿವಣ್ಣ ಮತ್ತೆ ಓಂ ಗೆಟಪ್​ನಲ್ಲಿ ಕಾಣಿಸಿದ್ದಾರೆ. ಇತ್ತ ಬೈರಾಗಿ ಸಿನಿಮಾ ಸಕ್ಸಸ್ ಮೂಡ್​​ನಲ್ಲಿರೋ ಶಿವಣ್ಣ ರಿಯಾಲಿಟಿ ಶೋವೊಂದರಲ್ಲಿ ಓಂ ಅವತಾರ ತಾಳಿದ್ದಾರೆ. ಸ್ಯಾಂಡಲ್​ವುಡ್​​ನಲ್ಲಿ ರಿಯಲ್​​ ರೌಡಿಗಳನ್ನು ಇಟ್ಟುಕೊಂಡು ಮಾಡಲಾಗಿದ್ದ ಓಂ ಸಿನಿಮಾ ಬಾಕ್ಸ್​ಆಫೀಸ್​ ದೂಳಿಪಟ ಮಾಡಿತ್ತು. ಶಿವಣ್ಣನ ಮ್ಯಾನರಿಸಂಗೆ ಇಡೀ ಕರುನಾಡೆ ಥಂಡಾ ಹೊಡೆದಿತ್ತು. ಶಿವಣ್ಣ ಓಂ 2 ಸಿನಿಮಾ ಮಾಡಲಿ ಅಂತಾ ಪ್ರಾರ್ಥನೆ ಮಾಡ್ತಿದ್ದ ಅಭಿಮಾನಿಗಳಿಗೆ ಈ ಸೀನ್​​ ನೋಡಿ ದಿಲ್​ ಖುಷ್​ ಆಗಿದೆ.

  • ಆರೇ ನಿಮಿಷದಲ್ಲಿ ಓಂ ಸಿನಿಮಾ ಅನಾವರಣ..!
  • ಮತ್ತೆ ಓಂ ಸಿನಿಮಾ ಮಾಡ್ತಾರಾ ಡಾ.ಶಿವಣ್ಣ..?

ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ ಓಂ ಸಿನಿಮಾ  ಭೂಗತ ಲೋಕದ ಬ್ಯಾಕ್​​​​ ಡ್ರಾಪ್​​​ನಲ್ಲಿ ಸಾಗೋ ಕಥೆ. ಅಮಾಯಕನಂತಿದ್ದ ವ್ಯಕ್ತಿಯನ್ನು ಹುಚ್ಚನಂತೆ ಪ್ರೀತಿಸುವಂತೆ ಮಾಡಿ ಕೊನೆಗೆ ಭೂಗತ ಲೋಕದೊಳಗೆ ತಳ್ಳುತ್ತಾರೆ ನಟಿ ಪ್ರೇಮಾ. ಆದ್ರೆ ಯಾರು ನಿರೀಕ್ಷೆ ಮಾಡದ ಕ್ಲೈಮ್ಯಾಕ್ಸ್​ ಸಿನಿ ಇತಿಹಾಸದಲ್ಲೆ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಅಚ್ಚರಿ ಮೂಡಿಸಿತ್ತು. ಸಿನಿಮಾ ರಿಲೀಸ್​ ಆದಾಗಿನಿಂದ ಇಲ್ಲಿವರೆಗೂ ಓಂ ಸಿನಿಮಾ ಚಾಪ್ಟರ್​ 2 ಬರಲಿ ಅಂತಾ ಅಭಿಮಾನಿಗಳು ಕನವರಿಸುತ್ತಲೇ ಇದ್ದಾರೆ.

ಸೆಂಚುರಿ ಸ್ಟಾರ್​ ಶಿವಣ್ಣನ ಸಿನಿಮಾ ಸಾಕಷ್ಟು ಬಾರಿ ರಿ ರಿಲೀಸ್ ಆಗಿದೆ. ಓಂ ಸಿನಿಮಾ ರಿಲೀಸ್​ ಆದ್ರೆ  ಇಂದಿಗೂ ಅದೇ ಕ್ರೇಜ್​​. ಇದೀಗ ಐಕಾನಿಕ್​ ಸ್ಟಾರ್​ ಶಿವಣ್ಣ ಖಾಸಗಿ ವಾಹಿನಿಯ ವೇದಿಕೆಯಲ್ಲಿ ಓಂ ಸ್ಟೈಲ್​​ನಲ್ಲಿ ಮಿಂಚಿದ್ದಾರೆ. ಕೈನಲ್ಲಿ ಸಿಗರೇಟ್​​ ಹಿಡಿದು ಓಂ ಸಿನಿಮಾದ ಡೈಲಾಗ್​ ಹೊಡೆದಿದ್ದಾರೆ. ಈ ಪ್ರೋಮೋಗೆ ಲೈಕ್ಸ್​​ ಕೆಮೆಂಟ್ಸ್​ಗಳ ಸುರಿಮಳೆಯಾಗಿದೆ.

ಇದೇ ತಿಂಗಳ ಜುಲೈ 12ಕ್ಕೆ ಶಿವಣ್ಣ ಬರ್ತ್​​ಡೇ ಸೆಲೆಬ್ರೇಟ್​ ಮಾಡಿಕೊಳ್ತಿದ್ದಾರೆ. ಈ ನಡುವೆ ಐ ಲವ್​ ಯು. ಯೂ ಮಸ್ಟ್​ ಲವ್​​ ಮಿ ಸಾಂಗ್​ಗೆ ಲೈಟರ್​ ಹಚ್ಚಿ ಮತ್ತೆ ಕಿಚ್ಚು ಹಚ್ಚಿದ್ದಾರೆ. ಶಿವಣ್ಣ ಪ್ಲೀಜ್​ ಓಂ ಸಿನಿಮಾ ಮಾಡಿ ಅಂತಾ ಕಲರ್​​ಫುಲ್​​ ಕಮೆಂಟ್ಸ್​ ಮಾಡ್ತಿದ್ದಾರೆ. ಒಟ್ಟಾರೆ ಶಿವಣ್ಣ ಓಂ ಪ್ರಾಜೆಕ್ಟ್​ ಬಗ್ಗೆ ಆಲೋಚಿಸ್ತಾರಾ ಕಾದು ನೋಡ್ಬೇಕು. ಎನಿವೇ ಅಡ್ವಾನ್ಸ್​ ಹ್ಯಾಪಿ ಬರ್ತ್​ ಡೇ ಶಿವಣ್ಣ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟವಿ

RELATED ARTICLES

Related Articles

TRENDING ARTICLES