Wednesday, January 22, 2025

ಪವರ್​ನಲ್ಲಿ 777 ಚಾರ್ಲಿ ಡಿಲೀಟೆಡ್​​ ಸೀನ್ಸ್​​ ಎಕ್ಸ್​​ಕ್ಲೂಸಿವ್..!​​

777 ಚಾರ್ಲಿ ಸಿನಿಮಾ ನೀವೆಲ್ಲಾ ನೋಡೆ ಇರ್ತೀರಾ.  ಧರ್ಮ, ಚಾರ್ಲಿಯ ಕಾಂಬಿನೇಷನ್​ ನೋಡಿ ಅತ್ತು ಕಣ್ಣೀರಾಕಿದ್ದೀರ. ಯೆಸ್​​.. 777 ಚಾರ್ಲಿ ಪ್ಯಾನ್​ ಇಂಡಿಯಾ ಸಿನಿಮಾಗೆ ಫ್ಯಾನ್​​ ಆಗಿ ರಿಪೀಟ್​ ಮೋಡ್​​ನಲ್ಲಿ ನೋಡಿದ್ದೀರಾ. ಆದ್ರೆ ನೀವ್ಯಾರೂ ನೋಡಿರದ ಒಂದು ದೃಶ್ಯವನ್ನು ನಾವು ನಿಮಗೆ ತೋರಿಸ್ತೇವೆ. ಅರೆ..! ಅದೇಗೆ ಅಂತಾ ಶಾಕ್​ ಆಗ್ತಿದ್ದೀರಾ. ನೀವೇ ಓದಿ.

  • ಗೆಲುವಿನ ನಾಗಾಲೋಟ.. 777ಚಾರ್ಲಿ ಗ್ರ್ಯಾಂಡ್​ ಸಕ್ಸಸ್
  • ಶಾರ್ವರಿ ಬರ್ತ್​ಡೇ ಸಂಭ್ರಮದ ದೃಶ್ಯಕ್ಕೆ ಕತ್ತರಿ ಬಿದ್ದಿದ್ಯಾಕೆ..?

ಸ್ಯಾಂಡಲ್​​ವುಡ್​​ನ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಅಭಿನಯದ 777ಚಾರ್ಲಿ ಬ್ಲಾಕ್​​ ಬಸ್ಟರ್​​ ಸಕ್ಸಸ್​ ಕಂಡಿದೆ. 150ಕೋಟಿಗೂ ಅಧಿಕ ಕಾಮಾಯಿ ಗಳಿಸಿರುವ ಚಾರ್ಲಿಗೆ ಪರಭಾಷೆಗಳಲ್ಲೂ ಉತ್ತಮ ರೆಸ್ಪಾನ್ಸ್​ ಸಿಕ್ತಿದೆ. 25 ದಿನಗಳನ್ನು ಪೂರೈಸಿ ಮುನ್ನುಗ್ತಿರೋ ಚಾರ್ಲಿ ಸಿನಿಮಾ ಎಲ್ಲರ ಹೃದಯ ಗೆದ್ದಿದೆ. ಸಕ್ಸಸ್ ಮೂಡ್​ನಲ್ಲಿರೋ ಚಾರ್ಲಿ ಚಿತ್ರತಂಡ ತಮ್ಮ ಸಿನಿಮಾದ ವೀಡಿಯೋ ತುಣುಕೊಂದನ್ನು ಶೇರ್ ಮಾಡಿದ್ದು ಸಿನಿಮಾ ಸಕ್ಸಸ್ ಖುಷಿಯನ್ನು ಹಂಚಿಕೊಂಡಿದೆ.

777ಚಾರ್ಲಿ ಸಿನಿಮಾದಲ್ಲಿ ಡಿಲೀಟ್​ ಆದ ಸೀನ್​ ಯಾವುದು ಅನ್ನೋದನ್ನು ತಿಳಿದುಕೊಳ್ಳೊ ಕುತೂಹಲ ಎಲ್ಲರಿಗೂ ಇದೆ. ಹಾಗಾಗಿಯೇ ಯ್ಯೂ ಟ್ಯೂಬ್​​ನಲ್ಲಿ ಸಖತ್​ ವೈರಲ್​​ ಆಗಿ ದಾಖಲೆ ಮಟ್ಟದ ವೀವ್ಸ್​ ಗಳಿಸ್ತಿದೆ. ಈ ದೃಶ್ಯದಲ್ಲಿ ಧರ್ಮ ಹಾಗೂ ಚಾರ್ಲಿ  ಆದ್ರಿಕಾ ಹುಟ್ಟು ಹಬ್ಬದಲ್ಲಿ ಭಾಗಿಯಾಗುವ ದೃಶ್ಯ ಇದಾಗಿದೆ.  ಈ ದೃಶ್ಯ ತುಂಬಾ ಎಮೋಷನಲ್​ ಆಗಿ ಮುಡಿ ಬಂದಿದ್ದು ಯಾಕೆ ಕತ್ತರಿ ಹಾಕಲಾಯಿತು ಎಂಬ ಪ್ರಶ್ನೆ ಮೂಡಿದೆ.

  • ಆದ್ರಿಕಾ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದು ಹೇಗೆ ಗೊತ್ತಾ..?

ಧರ್ಮನಿಗೆ ಕೆಲಸ ಬಿಟ್ಟರೆ ಬೇರೆ ಪ್ರಪಂಚನೆ ಇಲ್ಲ. ಮನೆ ಫ್ಯಾಕ್ಟರಿ ಅಂತಾ ಒಂಟಿಯಾಗಿದ್ದ ಧರ್ಮನ ಬಾಳಿಗೆ ಚಾರ್ಲಿ ಎಂಟ್ರಿಯಾಗ್ತಾಳೆ. ಇದ್ರ ಜೊತೆಗಿನ ಫ್ರೆಂಡ್ಸಿಪ್​​​​ಗೆ ಬಾಲನಟಿ ಶಾರ್ವರಿ ಕೂಡ ಸಾಥ್​ ನೀಡಿದ್ದಾರೆ. ಆದ್ರಿಕಾ ರೋಲ್​​ನಲ್ಲಿ ಕಾಣಿಸಿರುವ ಶಾರ್ವರಿ ಈ ದೃಶ್ಯದಲ್ಲಿ ಬರ್ತ್​ ಡೇ ಸೆಲೆಬ್ರೇಟ್​ ಮಾಡ್ತಿದ್ದಾರೆ. ಅಲ್ಲಿಗೆ ಭೇಟಿ ಕೊಡುವ ಧರ್ಮ ಮತ್ತು ಚಾರ್ಲಿಯ ದೃಶ್ಯವಿದೆ. ಈ ಸೀನ್​ ಸಿನಿಮಾದಲ್ಲಿ ಸೇರಿಸಿರಲಿಲ್ಲ.  ಆದರೀಗ ಯೂಟ್ಯೂಬ್​​​​​ನಲ್ಲಿ ಈ ವೀಡಿಯೋ ರಿಲೀಸ್ ಮಾಡಿದೆ ರಕ್ಷಿತ್ ಅಂಡ್ ಟೀಂ.  ​​

777ಚಾರ್ಲಿ ಸಿನಿಮಾದಿಮದ ಡಿಲೀಟ್​ ಮಾಡಿದ್ದ ದೃಶ್ಯವನ್ನು ನಿರ್ದೇಶಕ ಕಿರಣ್​ ರಾಜ್​ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದ್ರ ಜೊತೆಗೆ ಆದ್ರಿಕಾ 7ನೇ ವರ್ಷದ ಹುಟ್ಟುಹಬ್ಬವನ್ನು ಧರ್ಮ ಹಾಗೂ ಚಾರ್ಲಿ ಸೆಲೆಬ್ರೇಟ್​ ಮಾಡಿದ್ದು ಹೀಗೆ. ಬರ್ತ್​ ಡೇ ಪಾರ್ಟಿ ನೋಡಿ ಎಂಜಾಯ್​ ಮಾಡಿ ಎಂದು ಬರೆದುಕೊಂಡಿದ್ದಾರೆ.

ಚಾರ್ಲಿ ಕಂಡ್ರೆ ಆದ್ರಿಕಾಗೆ ಸಿಕ್ಕಾಪಟ್ಟೆ ಪ್ರೀತಿ. ಈ ವೇಳೆ ಧರ್ಮ ಮತ್ತು ಚಾರ್ಲಿ ಕೂಡ ಬಂದು ಆದ್ರಿಕಾಗೆ ಬರ್ತ್‌ಡೇ ವಿಶ್ ಮಾಡಿ, ಗಿಫ್ಟ್ ಕೊಡುತ್ತಾರೆ. ಚಾರ್ಲಿಗೆ ಆದ್ರಿಕಾ ಕೇಕ್ ತಿನ್ನಿಸುತ್ತಾಳೆ. ಚಾರ್ಲಿ ಹಾಗೂ ಆದ್ರಿಕಾ ಜೊತೆ ಧರ್ಮ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಾರೆ. ಅಸಲಿಗೆ, ಈ ಸೀನ್​ ಸೇರಿಸೋ ಮೂಲಕ ಕಾಲೋನಿಯಲ್ಲಿದ್ದ ಅಭಿಪ್ರಾಯ ಬದಲಾದ ಬಗ್ಗೆಯೂ ತೋರಿಸಬಹುದಿತ್ತು. ಆದ್ರೆ ನಿರ್ದೇಶಕರು ಎಡಿಟ್​ ಮಾಡಿದ್ಯಾಕೆ ಅನ್ನೋ ಪ್ರಶ್ನೆಗೆ ಅವ್ರೆ ಉತ್ತರ ಕೊಡಬೇಕಿದೆ.

ರಾಕೇಶ್​ ಆರುಂಡಿ, ಫಿಲ್ಮ್​  ಬ್ಯೂರೋ, ಪವರ್ ಟವಿ

RELATED ARTICLES

Related Articles

TRENDING ARTICLES