Monday, December 23, 2024

ಹೊಂಬಾಳೆ ಬೆಳಗಲಿದೆ ಸೂರ್ಯ-ದುಲ್ಕರ್ ಜೋಡಿ..!

ಕೆಜಿಎಫ್​ನಿಂದ ಶುರುವಾದ ಹೊಂಬಾಳೆಯ ಪ್ಯಾನ್ ಇಂಡಿಯಾ ಜೈತ್ರಯಾತ್ರೆ ಮತ್ತಷ್ಟು ಜೋರಾಗಿ, ವಿಜೃಂಭಿಸಲಿದೆ. ಪರಭಾಷೆಗಳಿಗೂ ಲಗ್ಗೆ ಇಟ್ಟಿರೋ ಕನ್ನಡದ ಪ್ರತಿಷ್ಟಿತ ಬ್ಯಾನರ್​ನಲ್ಲಿ ಇದೀಗ ಸೂಪರ್ ಸ್ಟಾರ್​ಗಳಾದ ಸೂರ್ಯ ಹಾಗೂ ದುಲ್ಕರ್ ಒಟ್ಟಿಗೆ ಒಂದೇ ಫ್ರೇಮ್​ನಲ್ಲಿ ಕಾಣಸಿಗಲಿದ್ದಾರೆ. ಅದ್ಯಾವ ಸಿನಿಮಾ..? ಡೈರೆಕ್ಟರ್ ಯಾರು ಅಂತೀರಾ..?

ಹೊಂಬಾಳೆ ಬೆಳಗಲಿದೆ ಸೂರ್ಯ – ದುಲ್ಕರ್ ಜೋಡಿ..! 

ಸುಧಾ ಕೊಂಗಾರ ಡೈರೆಕ್ಷನ್​ನಲ್ಲಿ ಇಬ್ರು ಸೂಪರ್ ಸ್ಟಾರ್ಸ್​

ಕೆಜಿಎಫ್ ಚಾಪ್ಟರ್- 2ನಿಂದ ಬರೋಬ್ಬರಿ 1500 ಕೋಟಿ ಬ್ಯುಸಿನೆಸ್ ಮಾಡಿ, ಬಾಲಿವುಡ್ ಮೇಕರ್ಸ್​ ಹಾಗೂ ಪ್ರತಿಷ್ಠಿತ ಬ್ಯಾನರ್​ಗಳ ಹುಬ್ಬೇರಿಸಿದ ನಮ್ಮ ಕನ್ನಡದ ಬ್ಯಾನರ್ ಅಂದ್ರೆ ಹೊಂಬಾಳೆ ಫಿಲಂಸ್. ಹೌದು.. ವಿಜಯ್ ಕಿರಗಂದೂರು ಅವ್ರ ಸಿನಿಮಾ ಪ್ಯಾಷನ್​ ಎಂಥದ್ದು ಅನ್ನೋದಕ್ಕೆ ಅವ್ರು ಆರಿಸಿಕೊಳ್ತಿರೋ ಕಥೆಗಳು, ಸ್ಟಾರ್​ ಕಾಸ್ಟ್ ಹಾಗೂ ಡೈರೆಕ್ಟರ್​ಗಳೇ ಸಾಕ್ಷಿ. ಅದ್ರಲ್ಲೂ ವಿಶ್ವ ಸಿನಿದುನಿಯಾದಲ್ಲಿ ಟಾಕ್ ಕ್ರಿಯೇಟ್ ಆಗೋ ಅಂತಹ ಕ್ವಾಲಿಟಿ ಸಿನಿಮಾಗಳನ್ನ ನೀಡೋ ಬ್ರ್ಯಾಂಡ್ ಆಗಿ ಟ್ರೆಂಡ್ ಆಗ್ತಿದೆ.

ಕೆಜಿಎಫ್ ನಂತ್ರ ಪ್ರಭಾಸ್- ನೀಲ್ ಕಾಂಬೋನಲ್ಲಿ ಸಲಾರ್ ತಯಾರಾಗ್ತಿದೆ. ಈ ಸಿನಿಮಾದ ಜೊತೆ ಜೊತೆಗೆ ಒಂದಷ್ಟು ಮೆಗಾ ಪ್ಯಾನ್ ಇಂಡಿಯಾ ಪ್ರಾಜೆಕ್ಸ್ಟ್ ಅನೌನ್ಸ್ ಮಾಡಿದೆ ಹೊಂಬಾಳೆ ಬ್ಯಾನರ್. ಆ ಪೈಕಿ ಸೂರರೈ ಪೋಟ್ರು ಡೈರೆಕ್ಟರ್ ಸುಧಾ ಕೊಂಗಾರ ಜೊತೆಗಿನ ಸಿನಿಮಾ ಕೂಡ ಒಂದು. ಇದೀಗ ಸುಧಾ ಌಕ್ಷನ್ ಕಟ್ ಹೇಳಲಿರೋ ಚಿತ್ರ ಹೈ ವೋಲ್ಟೇಜ್ ಮಲ್ಟಿ ಸ್ಟಾರ್ ಌಕ್ಷನ್ ವೆಂಚರ್ ಆಗಿರಲಿದೆ ಎನ್ನಲಾಗಿದ್ದು, ಒಂದೇ ಚಿತ್ರದಲ್ಲಿ ಸೂರ್ಯ ಹಾಗೂ ದುಲ್ಕರ್ ಸಲ್ಮಾನ್ ನಟಿಸಲಿದ್ದಾರೆ ಅನ್ನೋದು ಲೇಟೆಸ್ಟ್ ನ್ಯೂಸ್.

ಸೂರ್ಯ ಬಹುಮುಖ ಪ್ರತಿಭೆ ಆಗಿದ್ದು, ತಮಿಳು, ತೆಲುಗಿನ ಜೊತೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಹೆಸ್ರು ಮಾಡಿದ್ದಾರೆ. ಅಲ್ಲದೆ, ದುಲ್ಕರ್ ಮಲಯಾಳಂ ಸೂಪರ್ ಸ್ಟಾರ್ ಆದ್ರೂ, ಬಾಲಿವುಡ್​ವರೆಗೆ ನಟನಾ ಗಮ್ಮತ್ತು ತೋರಿರೋ ಯೂತ್ ಐಕಾನ್. ಇವರಿಬ್ಬರ ಕಾಂಬೋ ಅಂದ್ರೆ ಸಹಜವಾಗಿಯೇ ರಾಜಮೌಳಿ- ನೀಲ್ ಸಿನಿಮಾಗಳಂತೆ ನಿರೀಕ್ಷೆ ದೊಡ್ಡ ಮಟ್ಟಕ್ಕಿರಲಿದೆ.

ವಿಕ್ರಮ್ ಚಿತ್ರದ ರೋಲೆಕ್ಸ್ ಪಾತ್ರದಿಂದ ಸೂರ್ಯ ಉರಿಯುತ್ತಿರೋ ಕೆಂಡದಂತೆ ಉರಂ ಮಾಸ್ ಹೀರೋ ಆಗಿ ಧೂಳೆಬ್ಬಿಸ್ತಿದ್ದಾರೆ. ಇತ್ತ ಸಾಲು ಸಾಲು ಸಿನಿಮಾಗಳಿಂದ ದುಲ್ಕರ್ ಕೂಡ ದೇಶಾದ್ಯಂತ ದೊಡ್ಡ ಫ್ಯಾನ್ ಫಾಲೋಯಿಂಗ್ ಸಂಪಾದಿಸಿದ್ದಾರೆ. ಇವರಿಬ್ಬರನ್ನ ಒಂದೇ ಚಿತ್ರದಲ್ಲಿ ಪರದೆಗೆ ತರೋಕೆ ನಮ್ಮ ಹೊಂಬಾಳೆರ ಫಿಲಂಸ್ ಪ್ಲಾನ್ ಮಾಡಿರೋದು ನಿಜಕ್ಕೂ ಅದ್ಭುತ ಹಾಗೂ ಅದ್ವಿತೀಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES