Thursday, January 23, 2025

ಬಂದೂಕು ಹಿಡಿದು ರಣಬೇಟೆಗೆ ಹೊರಟು ನಿಂತ ಕಿಟ್ಟಿ

ಸ್ಯಾಂಡಲ್​​ವುಡ್​​ನಲ್ಲಿ ಕೃಷ್ಣ ಕಿಟ್ಟಿಯಾಗಿ ಮಿಂಚಿದ ಕಥೆಯೇ ರೋಚಕ. ಅವರ ಸಿನಿಮಾಗಳ ಆಯ್ಕೆ ಕೂಡ ಮನಮೋಹಕ. ತಮ್ಮದೇ ವಿಭಿನ್ನ ಮ್ಯಾನರಿಸಂನಿಂದ ಹೆಸ್ರು ಮಾಡಿರೋ ಕಿಟ್ಟಿಯ ಗೌಳಿ ಸದ್ದು ಮುಗಿಲು ಮುಟ್ಟಿದೆ. ಮಹಾರಕ್ಕಸನ ಆರ್ಭಟ ಘನಘೋರವಾಗಿರಲಿದೆ. ಕಿಟ್ಟಿ ಬರ್ತ್​ಡೇ ಸಲುವಾಗಿ ಇಡೀ ಚಿತ್ರತಂಡ ಮಾಧ್ಯಮದ ಎದುರಾಗಿತ್ತು. ಚಿತ್ರದ ಬಗ್ಗೆ ಎಕ್ಸ್​​ಕ್ಲೂಸಿವ್​​ ಮಾಹಿತಿ ಹಂಚಿಕೊಳ್ತು.

ಬಂದೂಕು ಹಿಡಿದು ರಣಬೇಟೆಗೆ ಹೊರಟು ನಿಂತ ಕಿಟ್ಟಿ

ಎರಡು ಗಂಟೆ, ಹತ್ತು ನಿಮಿಷ ನಾನ್​ಸ್ಟಾಪ್​​​​​ ಥ್ರಿಲ್ಲಿಂಗ್​​

ಕೊರೋನಾ ಇಂದ ಇಡೀ ಚಿತ್ರರಂಗವೇ ಸ್ವಿಚ್ ಆಫ್​ ಆಗಿತ್ತು. ಇದೀಗ ಮತ್ತೆ ಅದೇ ಜೋಶ್​ ಮೂಲಕ ಕಂಬ್ಯಾಕ್​​ ಆಗಿರೋ ಸ್ಯಾಂಡಲ್​​ವುಡ್​​ ಸಾಲು ಸಾಲು ಸಿನಿಮಾಗಳ ಮೂಲಕ ಕಂಗೊಳಿಸುತ್ತಿದೆ. ಇನ್ನೂ ಕಿಟ್ಟಿಯ ಹೊಸ ಅವತಾರ ಕಂಡು ಎಲ್ಲರು ಬೆಸ್ತು ಬಿದ್ದಿದ್ದಾರೆ. ಗೌಳಿಯಾಗಿ ಮಹಾರಕ್ಕಸನ ಪಾತ್ರದಲ್ಲಿ ಕಿಟ್ಟಿ ಕಿಚ್ಚು ಹಚ್ಚಿದ್ದಾರೆ. ಇನ್ನು ಬರ್ತ್​ಡೇ ಖುಷಿಯಲ್ಲಿರೋ ಕಿಟ್ಟಿ ಮಾಧ್ಯಮಗಳೊಂದಿಗೆ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್​ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ.

ಶ್ರೀನಗರ ಕಿಟ್ಟಿಯ ಬರ್ತ್​ಡೇ ಯನ್ನು ಜೋರಾಗಿಯೇ ಅಚರಿಸಿದ ಚಿತ್ರತಂಡ ಹೂವಿನ ಮಾಲೆ ಹಾಕಿ, ಕೇಕ್​ ಕಟ್​ ಮಾಡಿ ಸಿಹಿ ಹಂಚಿತು. ಇದ್ರ ಜೊತೆಯಲ್ಲಿ ಕಿಟ್ಟಿ ಸಿನಿಮಾ ಕುರಿತು ಆಡಿದ ಮಾತುಗಳು ಸಿನಿಮಾ ಮೇಲಿನ ಕೂತೂಹಲವನ್ನ ಹತ್ತು ಪಟ್ಟು ಡಬಲ್​ ಮಾಡಿತು. ಗೌಳಿ ಬೇರೆಯದೇ ಫೀಲ್​ ಕೊಡುತ್ತೆ. ನಿಮ್ಮತನ ಬಿಟ್ಟು ಹೇಗೆ ಬದುಕಬೇಕು ಅನ್ನೋ ಕರಾಳ ಕಥೆ ಇದು. ನಾವ್​ ಬರ್ತೀವಿ ತುಂಬಾ ಮಜವಾಗೆ ಬರ್ತೀವಿ  ಎಂದ್ರು.

ನೀವು ಈ ಸಿನಿಮಾ ನೋಡಿದ್ರೆ, ಥಿಯೇಟರ್​ ಒಳಗೆ ಬೇರೆಯದೇ ಜೀವನ ತೆರೆದುಕೊಳ್ಳುತ್ತೆ. ನಾನು ಹೆಗ್ಗಳಿಕೆಯಿಂದ ಹೇಳ್ತಿಲ್ಲ. ಬನ್ನಿ, ಎರಡು ಗಂಟೆ ಹತ್ತು ನಿಮಿಷ ನಿಮ್ಮನ್ನು ನಕ್ಕು ನಗಿಸಿ, ಅಳಿಸಿ ಕಳಿಸ್ತೀವಿ ಎಂದ್ರು. ಒಟ್ಟಾರೆ ಪ್ರಾಮಿಸಿಂಗ್​ ಸಿನಿಮಾ ಎಂಬ ಭರವಸೆ ಮೂಡಿಸಿದ್ದಾರೆ ಗೌಳಿ ಕಿಟ್ಟಿ.

ಸೂರ ಅವರ ನಿರ್ದೇಶನದಲ್ಲಿ, ರಘು ಸಿಂಗಮ್​​ ಅವರ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರ್ತಿದೆ. ಈಗಾಗ್ಲೇ ಸಿನಿಮಾದ ಟೀಸರ್​ಗೆ ಪ್ರೇಕ್ಷಕ ಕ್ಲೀನ್​ ಬೋಲ್ಡ್​​ ಆಗಿದ್ದಾರೆ. ಸಂದೀಪ್​​ ವಲ್ಲೂರಿ ಕ್ಯಾಮೆರಾ ಕೈಚಳಕದಲ್ಲಿ ಕಿಟ್ಟಿ ಕೆಂಡಕಾರುವ ರಾಕ್ಷಸನಾಗಿ ಕಾಣುತ್ತಾರೆ. ಶಶಾಂಕ್​ ಶೇಷಗಿರಿ ಮ್ಯೂಸಿಕ್​​​​ ಹಿಟ್​ ಆಗಿದೆ. ರಘು ಎಮ್​ ಆರ್ಟ್​ ವರ್ಕಿಂಗ್​​ ಸಿನಿಮಾದ ರಂಗನ್ನು ಡಬಲ್​​ ಮಾಡಲಿದೆ.  ಗೌಳಿ ಗತ್ತು, ತಾಕತ್ತು ಸಿಲ್ವರ್​​ ಸ್ಕ್ರೀನ್​ ಮೇಲೆ ಯಾವ ರೀತಿ ಮ್ಯಾಜಿಕ್​ ಮಾಡುತ್ತೋ ಕಾದು ನೋಡಬೇಕು.

ರಾಕೇಶ್​​ ಅರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES