Wednesday, January 22, 2025

ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳು ಹೇಳಿದ್ದೇನು..?

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಪೊಲೀಸರ ಮುಂದೆ ಭಯಾನಕ ಹೇಳಿಕೆ ಒಂದನ್ನು ಹೇಳಿದ್ದಾನೆ. ಅಲ್ಲದೆ, ಕೊಲೆ ನಂತರ ಅವರು ಎಲ್ಲೆಲ್ಲಿಗೆ ಹೋಗಿದ್ದರು ಎನ್ನುವುದನ್ನು ಮಾಹಿತಿ ಹೇಳಿದ್ದಾರೆ. ಇಷ್ಟಕ್ಕೂ ಆರೋಪಿಗಳು ಹೇಳಿದ್ದೇನು..?

ದೇಶಾದ್ಯಂತ ಸರಳವಾಸ್ತು ಮೂಲಕ ಖ್ಯಾತಿ ಗಳಿಸಿದ್ದ ಚಂದ್ರಶೇಖರ್ ಗುರೂಜಿಯನ್ನು ಹತ್ಯೆ ಮಾಡಿರುವ ಅವರ ಮಾಜಿ ಉದ್ಯೋಗಿಗಳು ಪೋಲೀಸರ ಮುಂದೆ ಕೊಲೆಯ ಕಾರಣವನ್ನು ಒಂದೊಂದಾಗಿಯೇ ಬಿಚ್ಚಿಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ 3 ದಿನ ಕಳೆದರೂ ಆರೋಪಿ ಮಹಾಂತೇಶ್, ಮಂಜುನಾಥ್ ಮಾತ್ರ ಕಿಂಚಿತ್ತೂ ಕಣ್ಣೀರು ಹಾಕಿಲ್ಲ ಅಂತೆ. ಪೊಲೀಸ್ ಭಾಷೆಗೆ ಒಂದೇ ಸಾರಿ ಎಲ್ಲಾ ಸತ್ಯ ಕಕ್ಕಿರುವ ಕೊಲೆಗಡುಕರು ಪ್ರೆಸಿಡೆಂಟ್ ಹೋಟೇಲ್‌ನಲ್ಲಿ ಕೊಲೆ ಮಾಡಿ ಆಚೆ ಬಂದ ನಂತರ ಏನೇನು ಮಾಡಿದ್ದೇವೆ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ.

ಹತ್ಯೆ ಮಾಡಿದ ತಕ್ಷಣ ಹೊರಬಂದ ಆರೋಪಿಗಳು ಮೊದಲು ಹತ್ತಿರದ ಶೆಲ್ ಪೆಟ್ರೋಲ್ ಪಂಪ್ ಬಳಿ ಹೋಗಿ ಚಾಕು ಎಸೆದಿದ್ದಾರೆ. ಅಲ್ಲದೇ, ಅಲ್ಲಿಂದ ನೇರವಾಗಿ ಧಾರವಾಡ ಸರಹದ್ದಿನ ಮೂಲಕ ಮಹಾಂತೇಶ್ ಸ್ವಗ್ರಾಮ ದುಮ್ಮುವಾಡಕ್ಕೆ ಹೋಗಿದ್ದಾರೆ. ಅಲ್ಲಿ ಸುಮಾರು ಅರ್ಧ ಗಂಟೆ ಕಳೆದು ವಾಪಸ್ ತಪ್ಪಿಸಿಕೊಳ್ಳಲು ರಾಮದುರ್ಗ ಕಡೆ ಹೊರಟಿದ್ದಾಗ ಸತ್ಯ ಬಾಯ್ಬಿಟ್ಟಿದ್ದಾರೆ.

ರಾಮದುರ್ಗದಲ್ಲಿ ಪೊಲೀಸರೂ ಇವರನ್ನು ಪೊಲೀಸರು ಬಂಧಿಸಿದ್ದೇ ತಡ, ಇದೀಗ ಖಾಕಿಪಡೆ ಮುಂದೆ ತಾವು ಹತ್ಯೆ ಮಾಡದೆ ಹೋದರೆ ಈ ವಿಷಯ ಗುರೂಜಿಗೆ ತಿಳಿದು ನಾವೇ ಅಂತ್ಯ ಆಗುತ್ತಿದ್ದೇವು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಹಾಗಾದ್ರೆ ಮಹಾಂತೇಶ್ ಹೊಂಚು ಹಾಕಿರುವ ಮಾಹಿತಿ ಗುರೂಜಿಗೆ ಮೊದಲೇ ಗೊತ್ತಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಂತಾಗಿದೆ. ಆದ್ರೆ, ಜೀವಕ್ಕೇ ಅಪಾಯ ಇರುವುದು ಗೊತ್ತಿದ್ದರೂ ಯಾಕೆ ನಿರ್ಲಕ್ಷ್ಯ ಮಾಡಿದರು ಎನ್ನುವುದೂ ಪ್ರಶ್ನೆ ಆಗಿಯೇ ಉಳಿದಿದೆ.

ಸರಳ ವಾಸ್ತು ಮೂಲಕ ಸಹಸ್ರಾರು ಕೋಟಿ ಗಳಿಸಿ ಭೀಕರವಾಗಿ ಕೊಲೆಯಾದ ಗುರೂಜಿ ಆರೋಪಿಗಳು ಹೇಳಿಕೆ ನೀಡಿರುವುದು ಪೊಲೀಸರಿಗೂ ಅಚ್ಚರಿಯಾಗಿದೆ. ವಿಷಯ ಮೊದಲೇ ಗೊತ್ತಿದ್ದರೂ ಎಚ್ಚೆತ್ತುಕೊಂಡಿದ್ದರೆ ಅನಾಹುತ ತಪ್ಪಿಸಬಹುದಾಗಿತ್ತು ಎನ್ನಲಾಗಿದೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES

Related Articles

TRENDING ARTICLES