ಬೆಂಗಳೂರು : ಹಳಿಗಿಳಿದು 10 ವರ್ಷದಲ್ಲಿ ಮೆಟ್ರೋ ನಿಜ ಬಣ್ಣ ಬಯಲಾಗಿದೆ. ಎಂ.ಜಿ.ರಸ್ತೆ ಟು ಬೈಯಪ್ಪನಹಳ್ಳಿ ಮಾರ್ಗದಲ್ಲಿ ನಿತ್ಯ ಸಮಸ್ಯೆ ಕಾಡೋಕೆ ಶುರುವಾಗಿದೆ. 2011 ಅಕ್ಟೋಬರ್ 20ರಂದು ಆರಂಭವಾದ ಈ ಮಾರ್ಗದ ಪಿಲ್ಲರ್ ಬೇರಿಂಗ್ಗಳು ತಿಂಗಳಿಗೆ ಎರಡೆರಡು ಬಾರಿ ರಿಪೇರಿ ವರ್ಕ್‌ಗೆ ಬರುತ್ತಿವೆ. ಸಂಪೂರ್ಣ ಮಾರ್ಗ ರಿಪೇರಿ ಮಾಡ್ಬೇಕಂದ್ರೆ ತಿಂಗಳ ಕಾಲ ಮೆಟ್ರೋ ಸ್ಥಗಿತಗೊಳಿಸಬೇಕು. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ರಿಪೇರಿ ಕಾರ್ಯ ಮಾಡ್ತೀವಿ ಅಂತ ಹೇಳಿ ಮೆಟ್ರೋದಲ್ಲಿ ಆಗ್ತಿರೋ ಸಮಸ್ಯೆಯನ್ನು BMRCL ಕೂಡ ಒಪ್ಪಿಕೊಳ್ತಿದೆ.
2019 ಡಿಸೆಂಬರ್ನಲ್ಲಿ ಟ್ರಿನಿಟಿ ಮೆಟ್ರೋ ಸ್ಟೇಷನ್ ಪಿಲ್ಲರ್ ಬೀಮ್ನಲ್ಲಿ ಬಿರುಕು ಕಾಣಿಸಿಕೊಂಡಿದ್ದ ವೇಳೆ ಅದನ್ನು ಸರಿಪಡಿಸಲು ನುರಿತ ತಜ್ಞರ ಮೊರೆ ಹೋಗಿದ್ರು. ಇದೀಗ ನೇರಳೆ ಮಾರ್ಗ ಎಂ.ಜಿ ರಸ್ತೆ ಟು ಬೈಯಪ್ಪನಹಳ್ಳಿ ಮಾರ್ಗದ ಪಿಲ್ಲರ್ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮೆಟ್ರೋ ಸಂಚರಿಸುವಾಗ ಹೆಚ್ಚಿನ ಒತ್ತಡ ಬೀಳುವ ಕಾರಣ ಬೇರಿಂಗ್ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗ್ತಿದೆ. ಇತ್ತ ಮೆಟ್ರೋ ಪಿಲ್ಲರ್ನ ಬೇರಿಂಗ್ನಲ್ಲಿ ಉಂಟಾಗಿರುವ ಡ್ಯಾಮೇಜ್ನಿಂದಾಗಿ ಹಸಿರು ಮಾರ್ಗದಲ್ಲಿ ಓಡಾಡೋಕೆ ಜನ ಆತಂಕ ಪಡುತ್ತಿದ್ದಾರೆ. ಈ ಬಗ್ಗೆ ಮೆಟ್ರೋ ಮಾತ್ರ ಜನ ಆತಂಕ ಪಡಬೇಕಿಲ್ಲ ಅಂತ ಹೇಳ್ತಿದೆ.
ಒಟ್ಟಿನಲ್ಲಿ ಮೆಟ್ರೋದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಅವಘಡಗಳಿಂದ ಸಂಚಾರ ಮಾಡೋಕೆ ಜನ ಭಯಪಡ್ತಿದ್ದಾರೆ.. ಬೆಂಗಳೂರು ಮೆಟ್ರೋ ಎಷ್ಟು ಸೇಫ್ ಅನ್ನೋ ಪ್ರಶ್ನೆ ಬಂದಿದೆ.. ನಗರದಲ್ಲಿ ನೂರು ವರ್ಷ ಬಾಳಬೇಕಾದ ಮೆಟ್ರೋ ಕಾಮಗಾರಿ ಹತ್ತೇ ವರ್ಷಕ್ಕೆ ರಿಪೇರಿ ವರ್ಕ್‌ಗೆ ಬರುತ್ತಿರೋದು ಇಲ್ಲಿ ಎಷ್ಟರ ಮಟ್ಟಿಗೆ ಕಾಮಗಾರಿ ನಡೆದಿದೆ ಅನ್ನೋದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು