ಚಾಮರಾಜಪೇಟೆ : ಆಟದ ಮೈದಾನ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸ್ತಿಲ್ಲ. ಮೈದಾನ ಪಾಲಿಕೆಯ ಸ್ವತ್ತು. ಇಲ್ಲಿ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಚಾಮರಾಜಪೇಟೆ ನಾಗರೀಕರ ವೇದಿಕೆ ಆಗ್ರಹಿಸಿದೆ. ಮೈದಾನದ ಉಳಿವಿಗಾಗಿ ಬಿಜೆಪಿಯ ಮಾಜಿ ಕಾರ್ಪೊರೇಟರ್, ಉಪಮೇಯರ್ ಹಾಗೂ ಮುಖಂಡರು ಇದೇ 12ನೇ ತಾರೀಕಿನಂದು ಬಂದ್‌ಗೆ ಕರೆಯನ್ನ ಕೊಟ್ಟಿದ್ದಾರೆ.
ಇನ್ನೊಂದೆಡೆ ಕ್ಷೇತ್ರದ ಶಾಸಕರು ಹಾಗೂ ಅವ್ರ ಬೆಂಬಲಿತ ಕೈ ಮಾಜಿ ಕಾರ್ಪೋರೇಟರ್‌ಗಳು ಬಂದ್‌ಗೆ ವಿರೋಧಿಸ್ತಿದ್ದಾರೆ. ಚಾಮರಾಜಪೇಟೆ ನಾಗರಿಕರ ವೇದಿಕೆ, 20ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ಕೊಟ್ಟಿದೆ.ಮಾಜಿ ಕಾರ್ಪೋರೇಟರ್‌ಗಳು, ಸಂಘ- ಸಂಸ್ಥೆಗಳ ಮುಖ್ಯಸ್ಥರನ್ನು ಸಭೆಗೆ ಕರೆದಿದ್ರು. ಸಭೆಯಲ್ಲಿ ಬಂದ್‌ಗೆ ಬೆಂಬಲಿಸಬೇಡಿ. ಆಗಷ್ಟ್ 15ರಂದು ರಾಷ್ಟ್ರಧ್ವಜ, ನವೆಂಬರ್ 1ರಂದು ಕನ್ನಡ ಬಾವುಟ ಹಾಗೂ ಜನವರಿ.26ಕ್ಕೆ ಗಣರಾಜ್ಯೋತ್ಸವವನ್ನೂ ಆಚರಿಸ್ತೇವೆ ಎಂದು ಸಭೆಯಲ್ಲಿ ಮಾತನಾಡಿದ್ರು.
ಬಂದ್ ಮಾಡದಂತೆ ಶಾಸಕರು ಸಭೆ ಮಾಡಿದ್ರೂ ನಾವು ಜಗ್ಗಲ್ಲ. ಇದು ಪಾಲಿಕೆಯ ಸ್ವತ್ತು ಅಂತ ಅವ್ರು ಹೇಳಲಿ. ಬಂದ್ ಮಾಡೇ ಮಾಡ್ತೀವಿ. ಅಂದು ರ್ಯಾಲಿ ಇರಲ್ಲ. ಶಾಂತಿಯುತವಾಗಿ ಜನ ಸ್ವಯಂಪ್ರೇರಿತವಾಗಿ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡ್ತಾರೆ ಅಂತ ಚಾಮರಾಜಪೇಟೆ ನಾಗರೀಕರ ವೇದಿಕೆಯ ಸಂಚಾಲಕ ರುಕ್ಮಾಂಗದ ಹೇಳಿದ್ದಾರೆ. ಬಂದ್ ಬೆಂಬಲಿಸಿ ಎಂದು ಬಟ್ಟೆ ವ್ಯಾಪಾರಿಗಳಿಗೆ, ಹಣ್ಣು ವ್ಯಾಪಾರಿ, ಹೊಟೇಲ್ ವ್ಯಾಪಾರಿಗಳಿಗೆ ಕರ ಪತ್ರ ಹಂಚಿದ್ರು. ಇನ್ನೂ ಕ್ಷೇತ್ರದ ವರ್ತಕರ ಸಂಘವೂ ಬಂದ್ ಬೆಂಬಲಿಸಿದೆ.
ಬಂದ್‌ಗೆ ಕರೆ ಕೊಟ್ಟಿದ್ದ ಸಂಘಟನೆಗಳು, ಸ್ಥಳೀಯ ಮಾಜಿ ಕಾರ್ಪೋರೇಟರ್‌ಗಳಿಗೆ ಆಹ್ವಾನ ಕೊಟ್ಟಿಲ್ಲ. ಅದ್ಕೆ ನಾವು ಬಂದ್ ವಿರೋಧಿಸ್ತಿದ್ದೇವೆ ಅಂತ ಪ್ರತಿಷ್ಠೆಯನ್ನು ತೋರಿಸಿದ್ದಾರೆ ಮಾಜಿ ಕಾರ್ಪೋರೇಟರ್ ಚಂದ್ರಶೇಖರ್.ಸಭೆಯ ಆಯೋಜಕರು ಕೂಡ ಇವ್ರೇ. ಪ್ರತಿಷ್ಠೆಯನ್ನು ತೋರಿಸುವ ಬದಲು ಕಾನೂನಾತ್ಮಕ ಹೋರಾಟ ಮಾಡಿದ್ರೆ, ಮೈದಾನದ ಬಗ್ಗೆ ಇರುವ ಗೊಂದಲದ ಬಗ್ಗೆಯಾದ್ರೂ ಹೆಚ್ಚಿನ ಮಾಹಿತಿ ಸಿಗಲಿದೆ. ಆದ್ರೆ ಇದ್ಯಾವುದನ್ನೂ ನಾಯಕರು ಮಾಡ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಕ್ಷೇತ್ರದ ಶಾಸಕರು ಕರೆದಿದ್ದ ಸಭೆಯಿಂದ ಯಾವ್ದೇ ಪ್ರಯೋಜನವಾಗಿಲ್ಲ. ಏಕಪಕ್ಷೀಯ ನಿರ್ಧಾರಗಳಿಂದಲೇ, ಸಭೆ ಅಂತ್ಯಗೊಂಡಿದೆ. ಆದ್ರೆ, ಈ ಎಲ್ಲಾ ಗೊಂದಲಗಳಿಂದ ಜೆಡಿಎಸ್ ಪಕ್ಷದ ಮುಖಂಡರಾದ ಇಮ್ರಾನ್ ಪಾಷಾ ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ತಟ್ಹಸ್ಥ ನೀತಿ ಹೊಂದಿದ್ದಾರೆ. ಆದ್ರೆ, ಬಂದ್‌ಗೆ ಇನ್ನೂ ನಾಲ್ಕೇ ದಿನ ಉಳಿದಿದ್ದು, ಯಾರ ಪ್ರತಿಷ್ಠೆ ಸಕ್ಸಸ್ ಆಗುತ್ತೆ ಅಂತ ಕಾದು ನೋಡಬೇಕಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು