ಗದಗ: ಗದಗ ಜಿಲ್ಲೆಯಲ್ಲೂ ಬಿಟ್ಟು ಬಿಡದೆ ನಿರಂತರವಾಗಿ ಮಳೆ ಮುಂದುವರೆದಿದೆ. ಗದಗ ಜಿಲ್ಲೆಯಲ್ಲಿರುವ ತುಂಗಭದ್ರಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಶಿಂಗಟಾಲೂರು ಏತ ನೀರಾವರಿ ಬ್ಯಾರೇಜ್ ತುಂಬಿ ಹರಿಯುತ್ತಿದೆ.
ತುಂಗಭದ್ರಾ ನದಿಗೆ ಅಡ್ಡಲಾಗಿ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರು ಏತ ನೀರಾವರಿ ಕಿರು ಆಣೆಕಟ್ಟು ನಿರ್ಮಿಸಲಾಗಿದ್ದು ನೀರು ಹೆಚ್ಚಳವಾದ ಹಿನ್ನೆಲೆ ಬ್ಯಾರೇಜ್‌ನ 18 ಗೇಟ್ಗಳನ್ನೂ ಸಹ ಓಪನ್ ಮಾಡಲಾಗಿದೆ.ಒಟ್ಟು 82,283 ಕ್ಯೂಸೆಸ್ ಒಳಹರಿವು ಹೆಚ್ಚಳವಾಗಿದ್ದು ಬ್ಯಾರೇಜ್‌ನಿಂದ ಒಟ್ಟು 82,283 ಕ್ಯೂಸೆಸ್ ನೀರು ಬಿಡುಗಡೆ ಮಾಡಲಾಗ್ತಿದೆ. ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಗದಗ ಜಿಲ್ಲಾಡಳಿತ ಸೂಚನೆ ನೀಡಿದೆ.