Friday, December 20, 2024

ವಿಜಯಪುರದಲ್ಲಿ ಭೂಕಂಪನ

ವಿಜಯಪುರ : ಹಾಸನ, ಕೊಡಗು ಜಿಲ್ಲೆಯ ನಂತರ ಇದೀಗ ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

ಬೆಳಗ್ಗೆ 6:21ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಮಲಗಿದ್ದ ಜನರು ಭೀತಿಯಿಂದ ಓಡಿ ಹೊರಗೆ ಬಂದಿದ್ದಾರೆ. ವಿಜಯಪುರ ಗ್ರಾಮೀಣ ಭಾಗದಲ್ಲಿ ಹೆಚ್ಚು ಭೂ ಕಂಪನದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯಲ್ಲಿ ಭೂಮಿಯಾಳದ 5 ಕಿಲೋ ಮೀಟರ್‌ ಒಳಗಿನಿಂದ ಭೂಮಿ ನಡುಗಿದೆ.

ಬಸವನಬಾಗೇವಾಡಿ ಭಾಗದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಪ್ರಾಥಮಿಕ ವರದಿ ನೀಡಿದೆ. ವಿಜಯಪುರದಲ್ಲಿ 2 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಿಗ್ಗೆ 6:22ಕ್ಕೆ 4.9ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಅಲ್ಲದೆ 6:24ರಲ್ಲಿಯೂ 4.6ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ವಿಯಜಪುರ, ಇಂಡಿ, ಬಸವನ ಬಾಗೇವಾಡಿ , ಬಬಲೇಶ್ವರ, ಸೊಲ್ಲಾಪುರ, ಜಮಖಂಡಿ ಭಾಗಗಳಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದೆ.

RELATED ARTICLES

Related Articles

TRENDING ARTICLES