ವಿಜಯಪುರ : ರಜೆಯ ಮೂಡಿನಲ್ಲಿ ನಿದ್ರೆಗೆ ಜಾರಿದ್ದ ಜನತೆಗೆ ಬೆಳ್ಳಂಬೆಳಗ್ಗೆ ತಲೆಯ ಕೆಳಗಿಂದ ಜೆಸಿಬಿ ಸರಿದಾಡುತ್ತಿದೆಯೇನೋ ಎನ್ನುವಂತಹ ಅನುಭವವಾಗಿದೆ. ಅರೆ..! ಇದೇನಾಯ್ತು ಭೂಕಂಪನವಾ..? ಹೌದು ಎಂದು ಗಾಬರಿಯಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಬೆಳ್ಳಂಬೆಳಗ್ಗೆ ವಿಜಯಪುರ ನಗರ ಸೇರಿ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಭೂ ಕಂಪನದ ಅನುಭವ ಆಗಿದೆ. ಈ ಹಿಂದೆ ಕೂಡಾ ಆಗಾಗ ಭೂಮಿ ಕಂಪಿಸಿದ ಅನುಭವ ಆಗಿತ್ತು. ಅಧಿಕಾರಿಗಳು ಧೈರ್ಯ ತುಂಬಿದ್ದರು. ಇದಾದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿಯ ತೀವ್ರತೆ ಜನತೆಯನ್ನು ಬೆಚ್ಚಿ ಬೀಳಿಸಿದೆ. ಕಂಪನದ ತೀವ್ರತೆಗೆ ಜನ ಬೆಳಗಿನ ಜಾವದ ನಿದ್ರೆಯಿಂದೆದ್ದು ತಕ್ಷಣ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದು ಕೆಲವೆಡೆ ಸಿಸಿಟಿವಿಗಳಲ್ಲಿ ಸಹ ದಾಖಲಾಗಿದೆ.
ಭೂಕಂಪನಕ್ಕೆ ಸಂಬಂಧಿತ ಆ್ಯಪ್ ಮತ್ತು ವೆಬ್ಸೈಟ್’ಗಳಲ್ಲೂ ಸಹ ಭೂಕಂಪನದ ತೀವ್ರತೆ ದಾಖಲಾಗಿದೆ. ಇನ್ನು ಇಂದಿನ ಭೂಕಂಪನದ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಮಹಾರಾಷ್ಟ್ರ ಗಡಿಯ ಕನ್ನೂರು ಗ್ರಾಮ ಪಂಚಾಯಿತಿಯಿಂದ 2.3 ಕಿಲೋ ಮೀಟರ್ ಉತ್ತರ ಪಶ್ಚಿಮ ಭಾಗದ ಹತ್ತು ಕಿಲೋಮೀಟರ್ ಆಳದಲ್ಲಿ ಸುಮಾರು 4.4 ಮ್ಯಾಗ್ನಿಟ್ಯೂಡ್ʼ ನಷ್ಟು ಭೂಮಿ ಕಂಪಿಸಿದೆ.
ವಿಜಯಪುರ ತಹಸೀಲ್ದಾರ್, ಇಂಡಿ ಉಪವಿಭಾಗಾಧಿಕಾರಿ ಸೇರಿ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಬಂದು ಮಾಹಿತಿ ಪಡೆದರು.ತಿಕ್ಕುಂಡಿ, ಮರಬಗಿ, ತಿಕ್ಕುಂಡಿ, ಜಾಲಿಹಾಳ, ಮುಚ್ಚಂಡಿ ಹಾಗೂ ಸೊಲ್ಹಾಪುರ ಜಿಲ್ಲೆಯ ದಕ್ಷಿಣ ಸೊಲ್ಹಾಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿಯೂ ಅನುಭವಕ್ಕೆ ಬಂದಿದೆ.
ಸುನೀಲ್ ಭಾಸ್ಕರ ಪವರ್ ಟಿವಿ ವಿಜಯಪುರ