ಶಿವಮೊಗ್ಗ : ಮಳೆ ಬಂದಾಗ ತೀವ್ರ ಹಾನಿಯಾಗದಿದ್ದ ಹಾಗೆ, ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರು ಸಿಲುಕಿಕೊಂಡಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದವರನ್ನು ಕರೆತರಲು ಅಧಿಕಾರಿಗಳು ಪ್ರಯತ್ನ ಮಾಡ್ತಿದ್ದಾರೆ. ಒಬ್ಬರನ್ನು ಬಿಡದೇ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡ್ತೇವೆ. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡ್ತೇವೆ ಎಂದರು.
ಇನ್ನು, ಹಾನಿ ಆಗುವುದನ್ನು ತಪ್ಪಿಸಲು, ಮಳೆ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಜಿಲ್ಲಾಧಿಕಾರಿಗಳು, ತಹಶಿಲ್ದಾರ್ ಬಳಿ ಹಣ ಇದೆ. ಅದನ್ನು ಖರ್ಚು ಮಾಡಿ ಪರಿಹಾರ ನೀಡಲು ಸೂಚಿಸಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಮಳೆ ಬಂದಾಗ ತೀವ್ರ ಹಾನಿಯಾಗದಿದ್ದ ಹಾಗೆ, ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಇನ್ನು, ಹರ್ಷ ಸಹೋದರಿ ಅಶ್ವಿನಿ ಗೃಹ ಸಚಿವರ ವಿರುದ್ದ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡ ತಕ್ಷಣ ಹೋಗಿ ಸಾಂತ್ವಾನ ಹೇಳಿದ್ದೇನೆ. ಏನೂ ಮಾಡಬೇಕೋ ಎಲ್ಲವನ್ನು ಮಾಡಿದ್ದೇನೆ. ಜೈಲಿನಲ್ಲಿ ಏನೋ ನಡೆಯಿತು, ಮೊಬೈಲ್ ಸಿಕ್ತು ಅಂತಾ ಇಷ್ಟೆಲ್ಲಾ ಮಾಡ್ತಿದ್ದಾರೆ. ಅವರಿಗೆ ನಾನು ಏನು ಮಾಹಿತಿ ಕೊಡಬೇಕಿತ್ತೋ ಅದನ್ನೆಲ್ಲಾ ಕೊಟ್ಟಿದ್ದೇನೆ. ಆದರೆ ಅವರಿಗೆ ಯಾಕೋ ಸಮಾಧಾನ ಇಲ್ಲ. ನಾನೊಬ್ಬ ಗೃಹ ಸಚಿವನಾಗಿ ಅವರಿಗೆ ಏನು ಮಾಹಿತಿ ಕೊಡಬಹುದಿತ್ತೋ ಅದನ್ನು ಕೊಟ್ಟಿದ್ದೇನೆ ಎಂದರು.
ಅದಲ್ಲದೇ, ಯಾವ ಅಗೌರವವನ್ನು ನಾನು ಯಾರ ಬಗ್ಗೆಯೂ ಮಾಡುವುದಿಲ್ಲ. ಅವರು ನನ್ನ ಬಳಿ ಸಮಾಧಾನದಿಂದ ಮಾತನಾಡಲಿಲ್ಲ. ಶ್ರೀರಾಮಸೇನೆಯ 20 ಜನರ ಜೊತೆ ಬಂದಿದ್ದರು. ಆ ರೀತಿಯ ವರ್ತನೆಯಿಂದ ಅವರ ಜೊತೆ ಬಂದಿದ್ದ ಶ್ರೀರಾಮಸೇನೆಯವರಿಗೆ ಬೇಜಾರಾಗಿದೆ. ಗೃಹ ಸಚಿವರನ್ನು ರಾಜೀನಾಮೆ ಕೇಳದೇ ಇನ್ನು ಯಾರನ್ನು ಕೇಳುತ್ತಾರೆ. ಎಲ್ಲರೂ ಗೃಹ ಸಚಿವರನ್ನೇ ರಾಜೀನಾಮೆ ಕೇಳೋದು. ಒಬ್ಬೊಬ್ಬರ ಮನಸ್ಸು ಒಂದೊಂದು ರೀತಿ ಇರುತ್ತದೆ ಏನು ಮಾಡಲು ಆಗುತ್ತದೆ ಎಂದು ಹೇಳಿದರು.