Sunday, May 19, 2024

ತೂತು ಮಡಿಕೆ ಪವರ್ ಟಿವಿ ರೇಟಿಂಗ್: 3/5

ತೂತು ಮಡಿಕೆ.. ಏನಿದು ವಿಚಿತ್ರ ಟೈಟಲ್​​..! ಏನಿದ್ರ ಅಸಲಿ  ಮಸಲತ್ತು ಅಂತ ಕ್ಯೂರಿಯಸ್​ ಅಗಿದ್ದ ಪ್ರೇಕ್ಷಕನಿಗೆ ಮಸ್ತ್​ ಮನರಂಜನೆ ಸಿಕ್ಕಿದೆ. ಖಾಲಿ ಮಡಿಕೆಯ ತಲೆಯಲ್ಲಿ ಹೋಗಿದ್ದ ಚಿತ್ರರಸಿಕರಿಗೆ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಭರ್ಜರಿಯಾಗಿ ಖುಷಿ ಕೊಟ್ಟಿದೆ. ಕೊನೆಯವರೆಗೂ ಸೀಟಿನ ಅಂಚಲ್ಲಿ ತಂದು ಕೂರಿಸೋ ಸಿನಿಮಾ ಇದಾಗಿದ್ದು, ಪ್ರೇಕ್ಷಕ ಕೂಡ ಚಿಲ್​ ಆಗಿದ್ದಾನೆ. ಹೊಸಬರ ಪ್ರಯತ್ನ ಹೇಗಿದೆ..? ಸಿನಿಮಾದ ಪ್ಲಸ್​​​​ ಮೈನಸ್​​ ಏನು..?

ತೂತು ಮಡಿಕೆ ಅಸಲಿಯತ್ತೇನು..? ಏನಂದ ಪ್ರೇಕ್ಷಕ ಪ್ರಭು..?

ಅಷ್ಟಧಾತು ವಿಗ್ರಹದ ಕರಾಮತ್ತು.. ಹುಡುಕಾಟದ ಗಮ್ಮತ್ತು..!

ಹೊಸಬರ ಹೊಸ ಪ್ರಯತ್ನ ಸ್ವಾಮಿ. ಖಂಡಿತ ಒಂದೊಳ್ಳೆ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಬಂದು ಸಿನಿಮಾ ನೋಡಿ ಎಂದು ಪ್ರಮೋಷನ್​ ಮಾಡಿದ್ದ ಚಿತ್ರತಂಡಕ್ಕೆ ಗುಡ್​ ರೆಸ್ಪಾನ್ಸ್​ ಸಿಕ್ಕಿದೆ. ಚಂದ್ರಕೀರ್ತಿ ನಿರ್ದೇಶನದಲ್ಲಿ ತೂತು ಮಡಿಕೆಯ ಸಪ್ಪಳ ಮುಗಿಲು ಮುಟ್ಟಿದೆ. ತಾಳ, ಮೇಳದ ಜೊತೆಗೆ ಇಂದು ರಾಜ್ಯಾದ್ಯಂತ ತೆರೆ ಕಂಡಿರುವ ತೂತು ಮಡಿಕೆ ಸಿನಿಮಾಗೆ ಪ್ರೇಕ್ಷಕ ಜೈಕಾರ ಹಾಕಿದ್ದು, ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ.

ಸಿನಿಮಾ ಅಂದ್ಮೇಲೆ ಥಿಯೇಟರ್​ ಬಳಿ ಜಮಾಯಿಸಿರುವ ಪ್ರೇಕ್ಷಕರು ಕುಣಿದು ಕುಪ್ಪಳಿಸೋದು ಸಹಜ. ಆದ್ರೆ, ತೂತು ಮಡಿಕೆ ಸಿನಿಮಾಗೆ ಸಿಕ್ಕ ಅಭೂತಪೂರ್ವ ಸ್ವಾಗತ ನೋಡಿ ಪ್ರೇಕ್ಷಕರೆ ಥ್ರಿಲ್​ ಆದ್ರು. ಯೆಸ್​​.. ಡೊಳ್ಳು, ತಮಟೆ ಸದ್ದಿಗೆ ಪ್ರೇಕ್ಷಕರು ಸೇರಿದಂತೆ, ಸಿನಿಮಾದ ಕಲಾವಿದರೆಲ್ಲಾ ಕುಣಿದು ಕುಪ್ಪಳಿಸಿ ಎಂಜಾಯ್​ ಮಾಡಿದ್ರು. ಪ್ರಮೋದ್​ ಶೆಟ್ಟಿ, ಹೀರೋ ಚಂದ್ರ ಕೀರ್ತಿ ಎಮ್​​​, ನಾಯಕಿ ಪಾವನಾ ಗೌಡ, ಉಗ್ರಮ್​​ ಮಂಜು ಟಪ್ಪಾಂಗುಚ್ಚಿ ಸ್ಟೆಪ್​ ಹಾಕಿ ಎಂಜಾಯ್​ ಮಾಡಿದ್ರು. ಅಂತೂ ನಗರದ ಭೂಮಿಕಾ ಥಿಯೇಟರ್​​ನಲ್ಲಿ ಪುಷ್ಪಾಲಂಕಾರಗಳಿಂದ ಅದ್ಧೂರಿಯಾಗಿ ತುತು ಮಡಿಕೆ ಸಿನಿಮಾ ವೆಲ್ಕಮ್​ ಮಾಡಲಾಯಿತು.

ಚಿತ್ರ: ತೂತು ಮಡಿಕೆ

ನಿರ್ದೇಶನ: ಚಂದ್ರಕೀರ್ತಿ

ನಿರ್ಮಾಣ: ಮಧುಸೂದನ್​ ರಾವ್​​​, ಶಿವಕುಮಾರ್​ ಕೆ ಬಿ

ಸಂಗೀತ: ಸ್ವಾಮಿನಾಥನ್​​ ಆರ್​​ ಕೆ

ಸಿನಿಮಾಟೋಗ್ರಫಿ: ನವೀನ್ ​ಚಲ್ಲ

ತಾರಾಗಣ : ಪ್ರಮೋದ್​ ಶೆಟ್ಟಿ, ಚಂದ್ರಕೀರ್ತಿ, ಪಾವನಾ ಗೌಡ, ಗಿರಿ, ಉಗ್ರಂ ಮಂಜು, ಶಂಕರ್​ ಅಶ್ವತ್ಥ್, ನಂದ ಗೋಪಾಲ್​​, ನರೇಶ್​ ಭಟ್​​ ಮುಂತಾದವರು.

ತೂತು ಮಡಿಕೆ  ಸ್ಟೋರಿಲೈನ್ :

ಪುರಾತತ್ವದ ಹಳೆ ವಿಗ್ರಹಗಳಿಗೆ ಎಷ್ಟು ಡಿಮ್ಯಾಂಡ್​ ಇದೆ ಅನ್ನೋದು ಎಲ್ರಿಗು ಗೊತ್ತಿರೋ ವಿಚಾರ. ಹಳೆ ಕಾಲದ ಶುದ್ಧ ಚಿನ್ನದ ವಸ್ತುಗಳು ಕೋಟೊ ಕೋಟಿ ಬೆಲೆ ಬಾಳುತ್ತವೆ. ಅವಗಳನ್ನ ಡೀಲ್​ ಮಾಡೋದೆ ಹರಸಾಹಸ. ಈ ಸಿನಿಮಾ ಕೂಡ ಅಂತಹ ಅಷ್ಠಧಾತು ವಿಗ್ರಹದ ಸುತ್ತಾ ಸಾಗುತ್ತದೆ. ಟಿವಿ ಮುಂದೆ ಕೂತ ಹಳೆ ಢಕಾಯಿತ ರಾಜಕಾರಣಿಗೆ ಅಷ್ಠಧಾತು ವಿಗ್ರಹ ಕಳ್ಳತನವಾದ ಸುದ್ದಿ ಗೊತ್ತಗುತ್ತೆ. ಹಳೆ ಚಾಳಿಯ ನಂಟು ರಾಜಕಾರಣಿಯನ್ನು ಬಿಡೋಕೆ ಸಾಧ್ಯವೆ. ಅದ್ರ ಡೀಲ್​ ಕುದುರಿಸೋಕೆ ಕದ್ದ ವಿಲನ್​​ ನೇರವಾಗಿ ಸಂಪರ್ಕ ಮಾಡೋದು ಇದೇ ರಾಜಕಾರಣಿ ರೋಲ್​ ಮಾಡಿರೋ ಶಂಕರ್​ ಅಶ್ವಥ್​​ಗೆ ಒಪ್ಪಿಸ್ತಾನೆ. ಎಲೆಕ್ಷನ್​ ಬ್ಯುಸಿಯಲ್ಲಿ ಇದ್ದ ರಾಜಕಾರಣಿ ಮನೆಯಿಂದ ವಿಗ್ರಹ ಎಸ್ಕೇಪ್​ ಅಗುತ್ತೆ. ಎಸ್ಕೇಪ್​ ಆದ ವಿಗ್ರಹವೂ ಡೂಪ್ಲಿಕೇಟ್​​​. ಹಾಗಾದ್ರೆ, ಅಲ್ಲಿಂದ ಎಗರಿಸಿದ್ದು ಯಾರು..? ಆ ವಿಗ್ರಹ ಹುಡುಕೋ ಜವಾಬ್ದಾರಿಯನ್ನು ಹೀರೋ ಯಾಕೆ ವಹಿಸಿಕೊಳ್ತಾನೆ ಅನ್ನೋದೆ ಸಸ್ಪೆನ್ಸ್​ ಥ್ರಿಲ್ಲರ್​​​.

ತೂತು ಮಡಿಕೆ ಆರ್ಟಿಸ್ಟ್ ಪರ್ಫಾಮೆನ್ಸ್ :

ತೂತು ಮಡಿಕೆ ಸಿನಿಮಾದ ಪ್ರತಿ ಪಾತ್ರಗಳಿಗೂ ತನ್ನದೇ ತೂಕವಿದೆ. ಇಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ, ಒಟ್ಟಾರೆಯಾಗಿ ಎಲ್ಲಾ ಪಾತ್ರಗಳು ಸರಿಸಮನಾಗಿ ತಕ್ಕಡಿಯಲ್ಲಿ ತೂಗುತ್ತವೆ. ಪೋಲೀಸ್​ ಘಾಟು ಬಿಟ್ಟು ಪ್ರಮೋದ್​ ಶೆಟ್ಟಿ ಅಡ್ಡಕತ್ತರಿಯ ನಡುವೆ ಸಿಕ್ಕು ಒದ್ದಾಡಿದ್ದಾರೆ. ಮಾಡದ ತಪ್ಪಿಗೆ, ದುಡ್ಡಿನ ಮೇಲಿನ ಆಸೆಗೆ ವಿಗ್ರಹವನ್ನು ಸೇರಬೇಕಾದವರಿಗೆ ಸೇರಿಸಿದರೆ ಸಾಕಪ್ಪಾ ಅಂತಾ ಒದ್ದಾಡೋ ಪ್ರಮೋದ್ ಶೆಟ್ಟಿ ರೋಲ್​ ಅದ್ಭುತ.

ನಟ ಹಾಗು ನಿರ್ದೇಶಕನಾಗಿ ಮೊದಲ ಪ್ರಯತ್ನದಲ್ಲೇ ಸಿಕ್ಸರ್​ ಬಾರಿಸಿರೋ ಚಂದ್ರಕೀರ್ತಿ. ಸ್ಲಮ್​​ ಹುಡುಗ. ಮನೆಯಲ್ಲಿ ಬಡತನವಿದ್ದರೂ ಶೋಕಿವಾಲ. ಜೊತೆ ಗಂಡನಿಲ್ಲದ ಹೆಂಡತಿ ಮೇಲೆ ಪ್ರೇಮದ ಕನಸು. ಇದ್ರ ನಡುವೆ ಅಷ್ಠಧಾತು ವಿಗ್ರಹ ಎಲ್ಲಿದೆ ಅಂತಾ ನಕ್ಷೆ ಹಾಕೋದ್ರಲ್ಲೆ ಪ್ರಮುಖ ಪಾತ್ರದಾರಿ. ಎಲ್ಲಿಯೂ ಇದು ಮೊದಲ ಸಿನಿಮಾ ಎನ್ನಿಸಿದೆ ಕೊಟ್ಟ ಕುದುರೆಯನ್ನು ಮೆಚ್ಚುವಂತೆ ಏರಿದ ಹಮ್ಮೀರ ಚಂದ್ರ ಕೀರ್ತಿ. ಇವ್ರ ಜೊತೆಗೆ ಕಾಮಿಡಿ ರೋಲ್​ನಲ್ಲಿ ಗಿರೀಶ್​​​ ಮತ್ತೆ  ತಮ್ಮ ಅದ್ಭುತ ಹಾಸ್ಯತನವನ್ನು ಪ್ರೂವ್​ ಮಾಡಿದ್ದಾರೆ.

ನಟಿ ಪಾವನ ಗೌಡ ಕೂಡ ಪೆಟ್ಟಿಗೆ ಅಂಗಡಿಯಲ್ಲಿ ಕೂತು ಅದ್ಭುತವಾಗಿ ನಟಿಸಿದ್ದಾರೆ. ಉಗ್ರಂ ಮಂಜು ಅವರ ಪಾತ್ರಕ್ಕೆ ಶಿಳ್ಳೆ ಚಪ್ಪಾಳೆಯ ಸುರಿಮಳೆಯಾಗುತ್ತೆ.  ಶಂಕರ್​ ಅಶ್ವಥ್​​ ರಾಜಕಾರಣಿ ರೋಲ್​​ನಲ್ಲಿ ಕಂಬ್ಯಾಕ್​ ಆಗಿದ್ದಾರೆ. ಖಡಕ್​ ರಾಜಕಾರಣಿಯಾಗಿ ಗತ್ತು ಗಾಂಬೀರ್ಯದೊಂದಿಗೆ ಜಬರ್ದಸ್ತ್​ ಆಕ್ಟಿಂಗ್​ ಮಾಡಿದ್ದಾರೆ.

ತೂತು ಮಡಿಕೆ ಪ್ಲಸ್ ಪಾಯಿಂಟ್ಸ್ :

ಸಸ್ಪೆನ್ಸ್​ ಥ್ರಿಲ್ಲರ್​​ ಮ್ಯಾಜಿಕ್​​

ಗಿರೀಶ್​​​​ ಕಾಮಿಡಿ ಕಿಕ್ಕು

ಚಂದ್ರಕೀರ್ತಿ ಡೈರೆಕ್ಷನ್​​

ನ್ಯಾಚುರಲ್​​ ಸ್ಕ್ರೀನ್​​ಪ್ಲೇ

ಗುಟ್ಟು ಬಿಟ್ಟುಕೊಡದ ಕಥೆ

ಅನಿರೀಕ್ಷಿತ ಕ್ಲೈಮ್ಯಾಕ್ಸ್​​

ತೂತು ಮಡಿಕೆ ಮೈನಸ್ ಪಾಯಿಂಟ್ಸ್:

ಯಾರು ಹೀರೋನ ಹುಟ್ಟಿ ಹಾಕಲ್ಲ. ನಮಗೆ ನಾವೇ ಹೀರೋ ಆಗ್ಬೇಕು. ಯೆಸ್​​.. ನಟ ಚಂದ್ರಕೀರ್ತಿಯೂ ಕೂಡ ಯಾವ ಸಿನಿಮಾಗೂ ಹೀರೋ ಅಗಿ ಅವಕಾಶ ಬರದ ಕಾರಣ ತಾವೇ ಹೀರೋ ಕಮ್​​ ಡೈರೆಕ್ಟರ್​ ಆಗಿ ಸಿನಿಮಾ ಮಾಡಿದ್ದಾರೆ. ಸಿನಿಮಾ ಎಲ್ಲಿಯೂ ಕೂಡ ಮೊದಲ ಪ್ರಯತ್ನ ಅಂತ ಅನಿಸಲ್ಲ. ಕೆಲವು ಕಡೆ ಲಾಜಿಕ್​ ಮಿಸ್​ ಅಗಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ತೂತು ಮಡಿಕೆ ಸಣ್ಣ ಪುಟ್ಟ ಮಿಸ್ಟೇಕ್ಸ್​​ ಬಿಟ್ರೆ ಮಿಕ್ಕಿದ್ದೆಲ್ಲಾ ವಂಡರ್​​ಫುಲ್​​​​.

ತೂತು ಮಡಿಕೆ ಪವರ್ ಟಿವಿ ರೇಟಿಂಗ್: 3/5

ತೂತು ಮಡಿಕೆ  ಫೈನಲ್ ಸ್ಟೇಟ್​ಮೆಂಟ್

ಕೊಳಗೇರಿಯಲ್ಲಿ ನಡೆಯುವ ಸಿನಿಮಾ ಕಥೆ ಎಲ್ಲರಿಗೂ ಸಖತ್​ ನ್ಯಾಚುರಲ್​ ಎನಿಸುತ್ತೆ. ಪ್ರತಿ ದೃಶ್ಯಗಳು ಕೂಡ ನಮ್ಮ ಸುತ್ತ ಮುತ್ತ ನಡೆಯುವ ಸನ್ನಿವೇಶಗಳು ಅನ್ನಿಸುತ್ತೆ. ಹಣದ ಆಸೆ, ವ್ಯಾಮೋಹ, ಅಗತ್ಯಗಳು ಮನುಷ್ಯನನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತೆ ಅನ್ನೋದು ಗೊತ್ತಾಗುತ್ತೆ. ಸಿನಿಮಾ ಎಲ್ಲಿಯೂ ಬೋರ್​ ಅನಿಸೊಲ್ಲ. ಯಾವ ನಿರೀಕ್ಷೆಯಿಲ್ಲದೆ ವೀಕೆಂಡ್​ಗೆ ಒಂದೊಳ್ಳೆ ಸಿನಿಮಾ ಸವಿಯಬೇಕಾದರೆ ತೂತು ಮಡಿಕೆ ನೋಡಬಹುದು. ಫೈನಲ್ಲಿ ಟೈಟಲ್​ಗೂ ಸಿನಿಮಾದ ಕಥೆಗೂ ಹೆಚ್ಚಿನ ಸಂಬಂಧವಿಲ್ಲ ಎಂಬ ಭಾವ ಮೂಡುತ್ತದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟವಿ

RELATED ARTICLES

Related Articles

TRENDING ARTICLES