Monday, December 23, 2024

ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಸತೀಶ್- ಹರಿಪ್ರಿಯಾ ಪೋಲಿ ಆಟ

ಅಂಧಕಾರದಲ್ಲಿರೋ ಮನಸ್ಸುಗಳಿಗೆ ಪೆಟ್ರೋಮ್ಯಾಕ್ಸ್​ನಿಂದ ಬೆಳಕು ಚೆಲ್ಲೋಕೆ ತುದಿಗಾಲಲ್ಲಿ ನಿಂತಿದ್ದಾರೆ ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಡೈರೆಕ್ಟರ್ ವಿಜಯ್ ಪ್ರಸಾದ್. ಆದ್ರೀಗ ಅದೇ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಹರಿಪ್ರಿಯಾ ಜೊತೆ ಪೋಲಿ ಆಟ ಆಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ ಸತೀಶ್.

ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಸತೀಶ್- ಹರಿಪ್ರಿಯಾ ಪೋಲಿ ಆಟ

ಬೆಡ್ ಮೇಲೆ ಅಭಿನಯ ಚತುರನ ಅಶ್ಲೀಲತೆಯ ವ್ಯಾಖ್ಯಾನ..!

ಮ್ಯಾಚ್.. ಪಿಚ್.. ಬೌನ್ಸ್.. ಅಬ್ಬಬ್ಬಾ ಏನ್ ಪ್ರಸಾದ ಗುರು..?

ಡಬಲ್ ಮೀನಿಂಗ್ ಡೈಲಾಗ್ಸ್ ನಡುವೆ ಎಮೋಷನಲ್ ಜರ್ನಿ

ಸಿನಿಮಾ ಅನ್ನೋದು ಬಾಳೆ ಎಲೆ ಊಟದ ಹಾಗೆ. ಅಲ್ಲಿ ಉಪ್ಪು, ಹುಳಿ, ಖಾರ, ಸಿಹಿ ಎಲ್ಲದರ ಹೂರಣ ಇದ್ರೇನೇ ಚೆಂದ. ಅರ್ಥಾತ್ ಎಲ್ಲಾ ಕಮರ್ಷಿಯಲ್ ಅಂಶಗಳಿಂದ ಒಂದೊಳ್ಳೆ ಸಿನಿಮಾ ರೂಪುಗೊಳ್ಳೋಕೆ ಸಾಧ್ಯ. ಅದ್ರಲ್ಲೂ ಕಾಮಿಡಿ, ಎಮೋಷನ್ಸ್ ಇಲ್ಲದಿದ್ರೆ ಅದು ಅಪೂರ್ಣ ಅನಿಸುತ್ತೆ. ಸದ್ಯ ಪೆಟ್ರೋಮ್ಯಾಕ್ಸ್ ಸಿನಿಮಾ ಮಸ್ತ್ ಮನರಂಜನೆಯ ಹಬ್ಬದೂಟ ಆಗಲಿದೆ.

ಯೆಸ್.. ವಿಜಯ್ ಪ್ರಸಾದ್ ಸಿನಿಮಾಗಳೇ ಹೀಗೆ. ಪ್ರೇಕ್ಷಕ ವರ್ಗಕ್ಕೆ ಸಿಕ್ಕಾಪಟ್ಟೆ ಪ್ರಸಾದ ಕೊಡುತ್ತೆ. ಸಿದ್ಲಿಂಗು, ನೀರ್​ದೋಸೆ ಬಳಿಕ ವಿಜಯ್ ಪ್ರಸಾದ್ ಮತ್ತೊಮ್ಮೆ ಪೋಲಿ ಡೈಲಾಗ್ಸ್​ ಜೊತೆ ಎಮೋಷನಲ್ ಕಥಾನಕ ಹೊತ್ತು ಬಂದಿದ್ದಾರೆ. ಆದ್ರೆ ಈ ಬಾರಿ ಹರಿಪ್ರಿಯಾ ಜೊತೆ ಅಭಿನಯ ಚತುರ ನೀನಾಸಂ ಸತೀಶ್ ಇದ್ದಾರೆ. ಇದು ಹಾಸ್ಯದ ಜೊತೆ ಜೊತೆಗೆ ಬದುಕಿನ ಭಾವನೆಗಳ ದಿಬ್ಬಣವನ್ನು ಪ್ರದರ್ಶಿಸಲಿದೆ.

ಇದೇ ಜುಲೈ 15ಕ್ಕೆ ಪೆಟ್ರೋಮ್ಯಾಕ್ಸ್​ನ ಬೆಳಕು ರಾಜ್ಯಾದ್ಯಂತ ಬೆಳ್ಳಿ ಪರದೆ ಬೆಳಗಲಿದೆ. ನೀನಾಸಂ ಸತೀಶ್ ಹಾಗೂ ಸುಧೀರ್ ನಿರ್ಮಾಣದ ಈ ಚಿತ್ರ, ಈಗಾಗ್ಲೇ ಬಹುದೊಡ್ಡ ತಾರಾಗಣ, ಡಬಲ್ ಮೀನಿಂಗ್ ಡೈಲಾಗ್ಸ್​ನ ಟ್ರೈಲರ್​ನಿಂದ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಚಿತ್ರತಂಡ ಕೂಡ ಡಿಫರೆಂಟ್ ಪ್ರೊಮೋಷನ್ಸ್​ನಿಂದ ಕ್ರಿಯಾಶೀಲತೆ ಮೆರೆಯುತ್ತಿದೆ. ಇದೀಗ ಮತ್ತೊಂದು ಹೊಸ ಟ್ರೈಲರ್ ಲಾಂಚ್ ಮಾಡಿ ಎಲ್ಲರ ಹುಬ್ಬೇರಿಸಿದೆ.

ಮ್ಯಾಚ್, ಗ್ರೌಂಡ್, ಪಿಚ್ ಅಂತ ಬೆಡ್ ಮೇಲೆ ಮಲಗಿರೋ ಹರಿಪ್ರಿಯಾ ಹಾಗೂ ನೀನಾಸಂ ಸತೀಶ್ ಪೋಲಿತನದ ತುಂಟ ಮಾತುಗಳು ಪಡ್ಡೆ ಹೈಕಳ ನಿದ್ದೆ ಕೆಡಿಸುವಂತಿವೆ. ಆದ್ರೆ ಅದನ್ನ ನಾವು ನೀವು ಅಶ್ಲೀಲತೆ ಅಂದುಕೊಳ್ಳೋ ಹಾಗಿಲ್ಲ. ಕಾರಣ ಅಭಿನಯ ಚತುರನ ಪ್ರಕಾರ ಆ ಅಶ್ಲೀಲತೆಗೆ ಬೇರೆನೇ ಅರ್ಥವಿದೆ. ಬೆಡ್ ಮೇಲೆ ಮಲಗೇ ಅಶ್ಲೀಲತೆಯನ್ನ ಅವ್ರು ಬಣ್ಣಿಸಿದ ಪರಿ ನಿಜಕ್ಕೂ ಅದ್ಭುತ ಅನಿಸುತ್ತೆ.

ನಿರಂಜನ್ ಬಾಬು ಸಿನಿಮಾಟೋಗ್ರಫಿ, ಅನೂಪ್ ಸೀಳಿನ್ ಸಂಗೀತ ಹಾಗೂ ಸುರೇಶ್ ಅರಸ್ ಸಂಕಲನ ಪೆಟ್ರೋಮ್ಯಾಕ್ಸ್ ಚಿತ್ರಕ್ಕಿದೆ. ಇಲ್ಲಿ ಸತೀಶ್- ಹರಿಪ್ರಿಯಾ ಜೊತೆಗೆ ಕಾರುಣ್ಯ ರಾಮ್, ಗೊಂಬೆಗಳ ಲವ್ ಅರುಣ್, ನಾಗಭೂಷಣ್, ಹೇಮಾ ದತ್, ಅಚ್ಯುತ್ ಸೇರಿದಂತೆ ಸಾಲು ಸಾಲು ಕಲಾವಿದರಿದ್ದಾರೆ. ಒಟ್ಟಾರೆ ಇದೊಂದು ಕಂಪ್ಲೀಟ್ ಎಂಟರ್​ಟೈನರ್ ಆಗಿ ನೋಡುಗರಿಗೆ ಮಜಾ ಕೊಡಲಿದೆ. ಇದು ಜಸ್ಟ್ ಟ್ರೈಲರ್ ಆಗಿದ್ದು, ಅಸಲಿ ಪಿಕ್ಚರ್ ಮುಂದಿನ ವಾರ ಬಿಗ್ ಸ್ಕ್ರೀನ್ ಮೇಲೆ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES