Wednesday, January 22, 2025

ಮೂರು ಫ್ಲಾಪ್​ ಆದ್ರೂ ಎರಡು ಬಿಗ್ ಪ್ರಾಜೆಕ್ಟ್​​ಗಳಲ್ಲಿ ಪೂಜಾ

ನ್ಯಾಷನಲ್ ಕ್ರಶ್ ರಶ್ಮಿಕಾಗೂ ಮುನ್ನ ಸೌಂದರ್ಯ ದೇವತೆಯಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇಂಡಸ್ಟ್ರಿಯಲ್ಲಿ ಟಾಕ್ ಕ್ರಿಯೇಟ್ ಮಾಡಿದ ಪೋರಿ ನಮ್ಮ ಕರಾವಳಿ ಕುವರಿ ಪೂಜಾ ಹೆಗ್ಡೆ. ಮೂರು ಫ್ಲಾಪ್ಸ್​ನಿಂದ ಈಕೆಯ ವರ್ಚಸ್ಸು ಕುಗ್ಗಿದೆ ಅಂತ ಎಲ್ರೂ ಅಂದ್ಕೋತಿದ್ರೆ, ಈಕೆ ಮಾತ್ರ ಮತ್ತೆರಡು ಬಿಗ್ ಪ್ರಾಜೆಕ್ಟ್​ಗಳಲ್ಲಿ ಬಿಗ್ ಸ್ಟಾರ್ಸ್​ ಜೊತೆ ಮಿಂಚು ಹರಿಸೋ ಮನ್ಸೂಚನೆ ನೀಡಿದ್ದಾರೆ.

ಮೂರು ಫ್ಲಾಪ್​ ಆದ್ರೂ ಎರಡು ಬಿಗ್ ಪ್ರಾಜೆಕ್ಟ್​​ಗಳಲ್ಲಿ ಪೂಜಾ

ಸೂರ್ಯ, ಪ್ರಿನ್ಸ್ ಮಹೇಶ್ ಜೊತೆ ಕರಾವಳಿ ಚೆಲುವೆ ಮಿಂಚು

ಭಾರತೀಯ ಚಿತ್ರರಂಗಕ್ಕಷ್ಟೇ ಅಲ್ಲ ಹಾಲಿವುಡ್​​ ಮಂದಿಗೂ ನಮ್ಮ ಕನ್ನಡದ ನಟೀಮಣಿಯರ ಮೇಲೆ ಕಣ್ಣು. ಈಗಾಗ್ಲೇ ದೀಪಿಕಾ ಪಡುಕೋಣೆಯಿಂದ ಅದು ಸಾಬೀತಾಗಿದೆ. ಆದ್ರೀಗ ನಮ್ಮ ಮಂಗಳೂರ್ ಬ್ಯೂಟಿ ಪೂಜಾ ಹೆಗ್ಡೆ ಸದ್ಯ ಪ್ಯಾನ್ ಇಂಡಿಯಾ ನಟೀಮಣಿಯಾಗಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ಸಕ್ಸಸ್​​ಫುಲ್ ಗ್ಲಾಮರ್ ಡಾಲ್. ತೆಲುಗು, ತಮಿಳು, ಹಿಂದಿ ಸೇರಿದಂತೆ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸೂಪರ್ ಸ್ಟಾರ್​ಗಳ ಅಚ್ಚುಮೆಚ್ಚಿನ ಬ್ಯೂಟಿ ಈಕೆ. ರಶ್ಮಿಕಾಗೂ ಮುನ್ನ ಇವ್ರ ಹವಾ ಜೋರಿತ್ತಾದ್ರೂ ಕಿರಿಕ್ ಬೆಡಗಿಯಿಂದ ಅವಕಾಶಗಳು ಡಿವೈಡ್ ಆದವು. ಆದ್ರೂ ಸಹ ಪೂಜಾಗೆ ಎಲ್ಲಿಲ್ಲದ ಬೇಡಿಕೆ. ಕಾರಣ ಈಕೆಯ ನಟನೆ, ಅಂದ ಚೆಂದವೇ ಇವ್ರ ಪ್ಲಸ್ ಪಾಯಿಂಟ್ಸ್.

ರೀಸೆಂಟ್ ಆಗಿ ಪೂಜಾ ಹೆಗ್ಡೆ ನಟಿಸಿದ ಮೂರು ಬಿಗ್ ಪ್ರಾಜೆಕ್ಸ್ಟ್ ಫ್ಲಾಪ್ ಆದ್ವು. ಡಾರ್ಲಿಂಗ್ ಜೊತೆಗಿನ ರಾಧೆ ಶ್ಯಾಮ್, ವಿಜಯ್ ಜೋಡಿಯ ಬೀಸ್ಟ್ ಹಾಗೂ ಚಿರಂಜೀವಿ- ಚರಣ್ ಜೋಡಿಯ ಆಚಾರ್ಯ. ಹೀಗೆ ಮೂರಕ್ಕೆ ಮೂರೂ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಇಂಡಸ್ಟ್ರಿ ಈಕೆ ಐರನ್ ಲೆಗ್ ಅಂತ ಭಾವಿಸುತ್ತೆ ಅಂತ್ಲೇ ಎಲ್ರೂ ಅಂದುಕೊಳ್ತಿದ್ರು. ಆದ್ರೆ ಪ್ರಿನ್ಸ್ ಮಹೇಶ್ ಬಾಬು ಹಾಗೂ ಸೂರ್ಯ ನಟನೆಯ ಮುಂದಿನ ಸಿನಿಮಾಗಳಿಗೆ ಪೂಜಾನೇ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಫ್ಲಾಪ್ ಸಿನಿಮಾಗಳ ಭಾಗವಾದ್ರೂ ಸಹ, ಸ್ಟಾರ್ಸ್​ ಮತ್ತೆ ಮತ್ತೆ ಇವ್ರನ್ನ ನಾಯಕಿಯಾಗಿ ಕಾಸ್ಟ್ ಮಾಡ್ತಿರೋದು ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES