Monday, December 23, 2024

ಕಬಿನಿ ಜಲಾಶಯ ತುಂಬಲು ಇನ್ನು 5 ಅಡಿ ಮಾತ್ರ ಬಾಕಿ

ಮೈಸೂರು: ಕಬಿನಿ ಜಲಾಶಯ ತುಂಬಲು ಇನ್ನು 5 ಅಡಿ ಮಾತ್ರ ಬಾಕಿ ಇದೆ. ಕೇರಳದ ವೈನಾಡು ಪ್ರದೇಶದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಕಬಿನಿ ಜಲಾಶಯ ಇನ್ನೇನು ಭರ್ತಿಯಾಗಲಿದೆ.
ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಇಂದಿನ ಮಟ್ಟ 2,279 ಅಡಿಗಳಾಗಿದೆ‌. ಜಲಾಶಯಕ್ಕೆ 18,543 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 2,875 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 2,284 ಅಡಿ
ಇಂದಿನ ಮಟ್ಟ 2,279 ಅಡಿ
ಒಳ ಹರಿವು 17,353 ಕ್ಯೂಸೆಕ್ಸ್
ಹೊರ ಹರಿವು 2,875 ಕ್ಯೂಸೆಕ್ಸ್

RELATED ARTICLES

Related Articles

TRENDING ARTICLES