Monday, December 23, 2024

ಹಣಕಾಸಿನ ವಿಚಾರವಾಗಿ ಯುವ ರೈತನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು : ಕೋಡಿಹಳ್ಳಿ ಬೆಂಬಲಿಗರು ಹಣಕಾಸಿನ ವಿಚಾರವಾಗಿ ಯುವ ರೈತನ ಮೇಲೆ ಮಾರಣಾಂತಿಕ ಹಲ್ಲೆಮಾಡಿದ್ದಾರೆ.

ಕ್ರಶರ್ ಮಾಲೀಕರ ಬಳಿ ವಸೂಲಿಗಿಳಿದ ‘ಕೋಚಂ’ ಬೆಂಬಲಿಗರು, ಹನುಮಂತು ಎಂಬ ಯುವ ರೈತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆಪರೇಷನ್ ಬ್ಲೇಡ್‌ನಿಂದ ತಲೆ ಕೊಯ್ದ ಹಲ್ಲೆ ಮಾಡಿದ್ದಾರೆ. ಕೃಷ್ಣಪ್ಪ, ವಿನಯ್ ಎಂಬುವರು ನಡೆಸ್ತಿರೋ ಕ್ರಶರ್, ಆನಂದ್ ಪಟೇಲ್ ಹಾಗೂ 10 ಮಂದಿ‌ ಮೇಲೆ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಆನಂದ್ ಪಟೇಲ್ ಹುಲಿಕಟ್ಟೆ ಗೂಂಡಾಗಿರಿ ವಿರುದ್ಧ ಸ್ಥಳೀಯರಿಂದಲೇ ಆಕ್ರೋಶ ವ್ಯಕ್ತವಾಗಿದ್ದು, ರೈತ ಸಂಘದ ಜಿಲ್ಲಾಧ್ಯಕ್ಷನಾಗಿರೋ ಆನಂದ್ ಪಟೇಲ್ ಹುಲಿಕಟ್ಟೆ, ಕ್ರಶರ್ ಮಾಲೀಕನಿಂದ 50 ಲಕ್ಷ ಡಿಮ್ಯಾಂಡ್ ಮಾಡಿದ ಕೊನೆಗೆ 25 ಲಕ್ಷ ಆದ್ರೂ ಕೊಡಿ ಅಂತಾ ಕೇಳಿದ್ದನಂತೆ ಆನಂದ್ ಪಟೇಲ್. ನಯಾ ಪೈಸೆ ಕೊಡದೇ ಇದ್ದಾಗ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿದ್ದಾರೆ ಎಂದು ಯುವ ರೈತ ಹನುಮಂತು ಪವರ್ ಟಿವಿ ಬಳಿ ಅಳಲು ತೋಡಿಕೊಂಡಿದ್ದಾನೆ.

RELATED ARTICLES

Related Articles

TRENDING ARTICLES