Saturday, December 28, 2024

ಶಿಂಷಾ ಮಾರಮ್ಮನಿಗೆ ಭಕ್ತರ ಪತ್ರ

ಚಾಮರಾಜನಗರ : ಶಿಂಷಾ ಮಾರಮ್ಮನಿಗೆ ಭಕ್ತರು ಬಗೆಬಗೆ ಬೇಡಿಕೆ ಪತ್ರ ಬರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಶಿಂಷಾ ಮಾರಮ್ಮ ದೇವಸ್ಥಾನದಲ್ಲಿ ನಡೆದಿದೆ.

ಸಮೂಹ ದೇವಾಲಯಗಳಲ್ಲಿ ಹುಂಡಿ ಎಣಿಕೆ ಕಾರ್ಯ ವೇಳೆ ಬೆಳಕಿಗೆ ಬಂದಿದ್ದು, ಹುಂಡಿ ಎಣಿಕೆ ವೇಳೆ ಮಹಿಳೆಯರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಕೆಲವು ಪತ್ರಗಳು ಓದಲು ಅರ್ಥವಾದರೆ ಕೆಲವು ಪತ್ರಗಳು ಅಸ್ಪಷ್ಟವಾಗಿತ್ತು. ಕೆಲವು ಪತ್ರಗಳಲ್ಲಿ ಉದ್ದದ ಪಟ್ಟಿಯನ್ನೇ ದೇವಿಗೆ ಭಕ್ತರು ಅರ್ಪಿಸಿದ್ದಾರೆ.

ಭಕ್ತೆಯೊಬ್ಬರು ತಮ್ಮ ಪತ್ರದಲ್ಲಿ ” ತಾಯಿ ನನ್ನವ್ವ ನನ್ನಿಂದ ಹಣ ಪಡೆದವರಿಂದ ಹಣ ಕೊಡಿಸು. ಸಾಲಗಾರರ ಹೆಸರು ಬರೆದು ತಿಂಗಳಲ್ಲಿ ಅವರು ನನಗೆ ಹಣ ಹಿಂತಿರುಗಿಸುವಂತೆ ಬುದ್ಧಿ ಕೊಡು ಎಂದು ಹರಕೆ ಮಾಡಿದ್ದಾರೆ. ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು ಎಂದು ಹರಕೆ ಕಟ್ಟಿಕೊಂಡಿದ್ದಾರೆ.

ಇನ್ನು, ಮತ್ತೋರ್ವ ಮಹಿಳೆ ತನ್ನ ಗಂಡ ತನ್ನೊಟ್ಟಿಗೆ ಇರುವಂತೆ ಮಾಡು, ಆಶಾ ಜೊತೆ ಸಂಬಂಧ ಇಲ್ಲದಂತೆ ಮಾಡು ಎಂದು ಹರಕೆ ಮಾಡಿಕೊಂಡಿದ್ದು, ನಾನು ನನ್ನ ಗಂಡ, ಮಕ್ಕಳು ಚೆನ್ನಾಗಿರಬೇಕು, ನಿನಗೆ ಮರಿಯೊಂದನ್ನು ಬಲಿ ಕೊಡುತ್ತೇನೆ ಎಂದು ಬರೆದಿದ್ದಾರೆ. ಇನ್ನೊಬ್ಬ ಭಕ್ತರು ತನಗೆ ಇನ್ನೂ 20 ವರ್ಷ ಹೆಚ್ಚಿನ ಆಯಸ್ಸು ಕೊಡು, ಅಂಗನವಾಡಿ ಕೆಲಸ ಖಾಯಂ ಮಾಡು ಎಂದು ಬರೆದಿದ್ದಾರೆ. ಶಿಂಷಾ ಮಾರಮ್ಮ ಈ ಭಾಗದ ಬಲಿಷ್ಠ ‌ಶಕ್ತಿ ದೇವತೆ ಎಂಬ ಎಲ್ಲರ ನಂಬಿಕೆ.

RELATED ARTICLES

Related Articles

TRENDING ARTICLES