Tuesday, May 14, 2024

ಸೋನಿಯಾ, ರಾಹುಲ್ ವಿರುದ್ಧವೇ ಸಿಡಿದೆದ್ರಾ ಸಿದ್ದರಾಮಯ್ಯ..?

ಬೆಂಗಳೂರು : ಸಿದ್ದರಾಮೋತ್ಸವ ಕಾರ್ಯಕ್ರಮದ ಪ್ಲ್ಯಾನೇ ಬೇರೆ.. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ್ಮೇಲೆ ಸಿದ್ದರಾಮಯ್ಯ ಹೋಲ್ಡ್ ಕಡಿಮೆ ಆಗ್ತಿರೋದು ಬೆಂಬಲಿಗರ ಆತಂಕಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ತಮ್ಮದೇ ಪಡೆ ಕಟ್ಟಿಕೊಳ್ತಿರೋ ಡಿ.ಕೆ.ಶಿವಕುಮಾರ್, ವ್ಯಕ್ತಿ ಪೂಜೆಗಿಂತ ಪಕ್ಷ ನಿಷ್ಠೆ ಮುಖ್ಯ ಅಂತ ಸಿದ್ದರಾಮಯ್ಯ ಟೀಂಗೆ ಆಗಾಗ ಕೌಂಟರ್ ಕೊಡೋ ಕೆಲಸ ಮಾಡ್ತಾನೇ ಇದ್ದಾರೆ. ಇದು ಸಿದ್ದರಾಮಯ್ಯ ಮತ್ತು ಅವರ ಫಾಲೋವರ್ಸ್‌ಗೆ ಒಂದಲ್ಲ ಒಂದು ರೀತಿಯಲ್ಲಿ ಟ್ರಬಲ್ ಆಗ್ತಾನೇ ಇದೆ. ಈ ಹಿಂದೆಯೇ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಡಲು ಅಹಿಂದ ಸಮಾವೇಶ ನಡೆಸಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ರು. ಆದ್ರೆ, ಅದಕ್ಕೆ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿದ್ರು.. ಈ ವಿಚಾರವಾಗಿ ಹೈಕಮಾಂಡ್ ಮೇಲೆ ಸಿದ್ದರಾಮಯ್ಯ ಮುನಿಸಿಕೊಂಡಿದ್ರು. ಈಗ ಸಿದ್ದರಾಮೋತ್ಸವ ಮೂಲಕ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ 75 ವರ್ಷಕ್ಕೆ ಕಾಲಿಡ್ತಿರೋ ಹಿನ್ನೆಲೆಯಲ್ಲಿ, ಅಮೃತ ಮಹೋತ್ಸವ ನಡೆಸಲು ಭರ್ಜರಿ ಸಿದ್ದತೆ ನಡೀತಾ ಇದೆ. ಮುಂದಿನ ತಿಂಗಳು ಆಗಸ್ಟ್ ಮೂರರಂದು ಬೃಹತ್ ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಿಕೊಂಡಿದ್ದಾರೆ.

ಇನ್ನು ಸಿದ್ದರಾಮೋತ್ಸವ ಅಹಿಂದ ಸಮಾವೇಶ ಆಗೋದ್ರಲ್ಲಿ ಡೌಟೇ ಇಲ್ಲ.. ಯಾಕಂದ್ರೆ ಕಾರ್ಯಕ್ರಮ ಸಕ್ಸಸ್ ಮಾಡೋದಕ್ಕೆ ಏಳೆಂಟು ಸಮಿತಿಗಳನ್ನ ರಚನೆ ಮಾಡಲಾಗಿದ್ದು, ಎಲ್ಲಾ ಜವಾಬ್ದಾರಿ ಸಿದ್ದರಾಮಯ್ಯ ಬೆಂಬಲಿಗರಿಗೆ ನೀಡಲಾಗಿದೆ. ಸಿದ್ದರಾಮಯ್ಯನವ್ರ ಅಹಿಂದ ಸಮಾವೇಶಗಳಲ್ಲಿ ಗುರುತಿಸಿಕೊಂಡ ನಾಯಕರಿಗಷ್ಟೇ ಸ್ಥಾನಮಾನ ನೀಡಲಾಗಿದೆ. ಸಿದ್ದರಾಮೋತ್ಸವ ಅಲ್ಲ ಅಹಿಂದ ಸಮಾವೇಶ ಅನ್ನೋದಕ್ಕೂ ಒಂದು ಕಾರಣ ಇದೆ. ಕಾರ್ಯಕ್ರಮದಲ್ಲಿ ಎಲ್ಲಾ ವರ್ಗದ ಮುಖಂಡರಿಗೆ ಆದ್ಯತೆ ನೀಡಲಾಗಿದೆ. ಸಿದ್ದರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಹಿರಿಯ ನಾಯಕ ಆರ್.ವಿ.ದೇಶಪಾಂಡೆಯವ್ರನ್ನು ನೇಮಕ ಮಾಡಲಾಗಿದೆ. ಅಧ್ಯಕ್ಷರಾಗಿ ಕೆ.ಎನ್ ರಾಜಣ್ಣ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹೆಚ್.ಸಿ ಮಹದೇವಪ್ಪ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ರಾಯರೆಡ್ಡಿ, ಖಜಾಂಚಿಯಾಗಿ ಭೈರತಿ ಸುರೇಶ್‌ಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ಜಮೀರ್ ಅಹ್ಮದ್, ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ಬಿ.ಎಲ್ ಶಂಕರ್, ಹೆಚ್. ಎಂ ರೇವಣ್ಣ, ಜಯಮಾಲಾ, ಗೋವಿಂದರಾಜ್, ನಜೀರ್ ಅಹ್ಮದ್ ಸೇರಿದಂತೆ ಹಲವರಿಗೆ ಪದಾಧಿಕಾರಿ ಪಟ್ಟ ಹಾಗೂ ಇತರೆ ಜವಾಬ್ದಾರಿ ವಹಿಸಲಾಗಿದೆ.

ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಸಿದ್ದರಾಮೋತ್ಸವದಲ್ಲಿ ಭಾಗಿಯಾಗುವುದು ನಮಗೆಲ್ಲರಿಗೂ ಸಂತೋಷದ ವಿಚಾರ. ಪಕ್ಷಾತೀತವಾಗಿ ನಾಯಕರು ಭಾಗವಹಿಸುತ್ತಾರೆ. ಡಿ.ಕೆ ಸುರೇಶ್ ಅವರಿಗೂ ಕೂಡ ಸಿದ್ದರಾಮೋತ್ಸವದ ಸಮಿತಿಯಲ್ಲಿ ಜವಾಬ್ದಾರಿ ನೀಡಲಾಗಿದೆ. ಎಲ್ಲಾ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲ, ಭಿನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಹೇಳಿದ್ದಾರೆ.

ಇಷ್ಟೇ ಅಲ್ಲ.. ಸಿದ್ದರಾಮೋತ್ಸವದಿಂದ ಡಿ.ಕೆ ಶಿವಕುಮಾರ್, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್ ಮುನಿಯಪ್ಪ ದೂರ ಸರಿದಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ವಿಚಾರಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಗುಂಪುಗಾರಿಕೆಯೂ ಹೆಚ್ಚಾಗ್ತಿದೆ. ಖುದ್ದು ರಾಹುಲ್ ಗಾಂಧಿ ಎಂಟ್ರಿ ಕೊಟ್ರೂ ಕಾಂಗ್ರೆಸ್ ಪಕ್ಷದಲ್ಲಿ ಕುರುಬ ವರ್ಸಸ್ ಒಕ್ಕಲಿಗ ಪಾಲಿಟಿಕ್ಸ್ ನಿಂತಿಲ್ಲ.. ಈ ಮಧ್ಯೆ ಸಿದ್ದರಾಮಯ್ಯ ಹುಟ್ಟು ಹಬ್ಬದ ಪ್ರಯುಕ್ತ ನಡಿತಿರೋ ಬೃಹತ್ ಸಮಾವೇಶ, ಮತ್ತಷ್ಟು ಭಿನ್ನಮತಕ್ಕೆ ಕಾರಣವಾದ್ರೂ ಅಚ್ಚರಿಯಿಲ್ಲ.

ಆನಂದ್ ನಂದಗುಡಿ, ಸ್ಪೆಷಲ್ ಕರೆಸ್ಪಾಂಡೆಂಟ್, ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES