Sunday, May 19, 2024

ಕಾಳಿ ಕೈಗೆ ಸಿಗರೇಟು ಕೊಟ್ಟು ಮತ್ತೆ ಸಮರ್ಥನೆಗಿಳಿದ ಡೈರೆಕ್ಟರ್‌

ದೇಶಾದ್ಯಂತ ಕಾಳಿ ವಾರ್‌ ಶುರುವಾಗಿದೆ.. ತಮಿಳು ನಿರ್ದೇಶಕಿ ಮಾಡಿರುವ ಯಡವಟ್ಟಿಗೆ ಪರ-ವಿರೋಧ ಚರ್ಚೆಯಾಗ್ತಿದ್ದು, ಲೀನಾ ಬಂಧನಕ್ಕೆ ಒತ್ತಾಯ ಕೇಳಿ ಬರ್ತಿದೆ.. ಈ ಮಧ್ಯೆ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಆ ನಟಿ ಕಂ ನಿರ್ದೇಶಕಿ

ಕಾಳಿ ಮಾತೆ ಕೈಗೆ ಸಿಗರೇಟು ಕೊಟ್ಟು ಹೊಗೆ ಬಿಡಿಸಿದ್ದ ಡೈರೆಕ್ಟರ್‌ ಕಂ ನಟಿ ಲೀನಾ ಮಣಿಮೇಕಲೈ ಮತ್ತೆ ಸಮರ್ಥನೆಗಿಳಿದ್ದಾರೆ.. ಮಾಡಿರುವ ಯಡವಟ್ಟಿನ ವಿವಾದ ಕಿಚ್ಚು ನಂದಿಲ್ಲ.. ಅದಾಗ್ಲೇ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.. ಹೌದು, ಕಾಳಿ ವಿವಾದದ ಬೆನ್ನಲ್ಲೇ ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುವ ಫೋಟೊ ಹಂಚಿಕೊಂಡು ಟೀಕೆಗಳಿಗೆ ಒಳಗಾಗಿದ್ದಾರೆ.. ಶಿವ, ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೂಡ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ಹೊಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಲೀನಾ ಪೋಸ್ಟ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರವು ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಒತ್ತಾಯಿಸಿತ್ತು. ಇದಾದ ನಂತರ ಟ್ವಿಟರ್ ಬುಧವಾರ ಅವರ ಈ ಪೋಸ್ಟರ್ ಅನ್ನು ಅವರ ಖಾತೆಯಿಂದ ತೆಗೆದುಹಾಕಿದೆ. ಆದರೆ, ಇಂದು ಲೀನಾ ಮತ್ತೊಂದು ವಿವಾದಾತ್ಮಕ ಫೋಟೋವನ್ನು ಪೋಸ್ಟ್ ಮಾಡಿರುವುದರಿಂದ ಮತ್ತೆ ವಿವಾದ ಭುಗಿಲೆದ್ದಿದೆ, ಅದರಲ್ಲಿ ಶಿವ ಮತ್ತು ಪಾರ್ವತಿಯ ಸಾಂಪ್ರದಾಯಿಕ ಕಲಾವಿದರು ಧೂಮಪಾನ ಮಾಡುತ್ತಿದ್ದಾರೆ. ಹೀಗಿರುವಾಗ ಈ ಟ್ವೀಟ್ನಲ್ಲಿಯೂ ಸಹ, ಬಳಕೆದಾರರು ಅವರನ್ನು ಸಾಕಷ್ಟು ಟೀಕಿಸುತ್ತಿದ್ದಾರೆ.

ಮತ್ತೊಂದೆಡೆ, ಲೀನಾ ಮಣಿಮೇಕಲೈ ಅವರ ಹಳೆಯ ಟ್ವೀಟ್ನ ಸ್ಕ್ರೀನ್ ಶಾಟ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಟ್ವೀಟ್ ಮೂಲಕ ಲೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿದ್ದಾರೆ. ಈ ಟ್ವೀಟ್ 13 ಸೆಪ್ಟೆಂಬರ್ 2013ರಂದು ಮಾಡಲಾಗುತ್ತು ಎಂದು ಹೇಳಲಾಗಿದೆ. ಈ ಟ್ವೀಟ್ನಲ್ಲಿ ಲೀನಾ ಅವರು ಮೋದಿ ದೇಶದ ಪ್ರಧಾನಿಯಾದರೆ, ನಾನು ನನ್ನ ಪಾಸ್ಪೋರ್ಟ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ನನ್ನ ಪೌರತ್ವವನ್ನು ಶಾಶ್ವತವಾಗಿ ತ್ಯಜಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ, ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಿಂದ ಲೀನಾ ಅವರ ಈ ಟ್ವೀಟ್ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಮೇಡಂ ಲೀನಾ ಮಣಿಮೇಕಲೈ, ನೀವು ಇನ್ನೂ ನಿಮ್ಮ ಭರವಸೆ ಮತ್ತು ನಿರ್ಣಯವನ್ನು ಪೂರೈಸಿಲ್ಲ ಎಂದು ಬರೆದಿದ್ದಾರೆ.

ಇಷ್ಟಕ್ಕೆ ನಿಂತಿಲ್ಲ ಈ ಕಾಳಿ ವಾರ್‌.. ಲೀನಾ ಬೆಂಬಲಿಸಿ ಹೇಳಿಕೆ ಕೊಟ್ಟಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಪಟ್ಟು ಹಿಡಿದಿದೆ.. ಈಗಾಗಲ್ಲೇ ಹಲವೆಡೆ ಮಹುವಾ ವಿರುದ್ಧ ಎಫ್ಐಆರ್ ದಾಖಲಾಗಿದೆ.ಮಧ್ಯಪ್ರದೇಶದ ಭೋಪಾಲ್ನಲ್ಲೂ ಒಂದು ಎಫ್ಐಆರ್ ದಾಖಲಾಗಿದೆ

ನೂಪುರ್ ಶರ್ಮಾ ವಿರುದ್ಧ ತೆಗೆದುಕೊಂಡಂತಹ ಕ್ರಮವನ್ನೇ, ಮಹುವಾ ವಿರುದ್ಧವೂ ತೆಗೆದುಕೊಳ್ಳಬೇಕು. ಇನ್ನು ಹತ್ತು ದಿನಗಳಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಮತ್ತು ನಾಯಕ ಸುವೇಂಧು ಅಧಿಕಾರಿ ಆಗ್ರಹಿಸಿದ್ದಾರೆ. ಆದ್ರೆ, ಮತ್ತೆ ಬಿಜೆಪಿ ವಿರುದ್ಧವೇ ಕಿಡಿಕಾರಿದ್ದಾರೆ ಟಿಎಂಸಿ ಸಂಸದೆ..

ತಮಿಳು ಡೈರೆಕ್ಟರ್‌ ಸೃಷ್ಠಿಸಿರುವ ವಿವಾದ ಇದೀಗ ದೇಶಾದ್ಯಂತ ಕಿಚ್ಚು ಹೊತ್ತಿಸಿದೆ.. ಹಿಂದೂ ದೇವರುಗಳ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿರುವವರ ವಿರುದ್ಧ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ.

ಬ್ಯೂರೋ ರಿಪೋರ್ಟ್‌ ಪವರ್ ಟಿವಿ

RELATED ARTICLES

Related Articles

TRENDING ARTICLES