Thursday, January 9, 2025

ನನ್ನ ಹಾಗೂ ಮಕ್ಕಳ ಭವಿಷ್ಯವನ್ನು ಹಾಳು ಮಾಡ್ದ: ವನಜಾಕ್ಷಿ

ಹುಬ್ಬಳ್ಳಿ : ಸರಳ ವಾಸ್ತು ಚಂದ್ರಶೇಖರ್​​ ಗುರೂಜಿಯವರು ದೇವರಂತವರು. ಅವರನ್ನು ಕೊಲೆ ಮಾಡಿ ನನ್ನ ಗಂಡ ತಪ್ಪು ಮಾಡಿದ್ದಾನೆ ಎಂದು ಹಂತಕ ಮಹಾಂತೇಶ ಶಿರೂರು ಪತ್ನಿ ವನಜಾಕ್ಷಿ ಹೇಳಿಕೆ ನೀಡಿದ್ದಾರೆ.

ಗುರೂಜಿ ಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಗಂಡ ನನ್ನ ಹಾಗೂ ನನ್ನ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾನೆ. ಅವನಿಗೆ ಏನು ಶಿಕ್ಷೆ ಆಗತ್ತೋ ಅದನ್ನು ಅನುಭವಿಸಲಿ ಎಂದರು.

ಇನ್ನು ಗುರೂಜಿ ಅವರು ನನ್ನ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎಂಬ ಸುಳ್ಳು ಮಾಹಿತಿ ಮಾಧ್ಯಮದಲ್ಲಿ ಬರ್ತಿದೆ. ಅಪಾರ್ಟಮೆಂಟಿನ ಎಲ್ಲ 49 ಮನೆಗಳು ಗುರೂಜಿ ಹೆಸರಲ್ಲಿವೆ. ನಾನು ಇದೇ ಅಪಾರ್ಟಮೆಂಟಿನಲ್ಲಿ 1 ಬಿ ಎಚ್ ಕೆ ಮನೆ ಖರೀದಿ ಮಾಡಿದ್ದೇವೆ. 15 ಲಕ್ಷ ಇನ್ನು ಸಾಲವಿದೆ. ನನಗೆ ಇಬ್ಬರು ಮಕ್ಕಳು ಇದ್ದಾರೆ. ನನ್ನ ಜೊತೆ ಗುರೂಜಿ ಒಮ್ಮೆಯೂ ಜಗಳ ಮಾಡಿಲ್ಲ ಎಂದು ತಿಳಿಸಿದರು.

ಅಲ್ಲದೇ 2005 ರಿಂದ 2019 ರವರೆಗೆ ಅವರ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಬಳಿಕ ನನಗೆ ಮುಂಬೈಗೆ ವರ್ಗಾವಣೆ ಮಾಡಿದ್ದರಿಂದ ಸಂಸ್ಥೆಗೆ ರಾಜೀನಾಮೆ ನೀಡಿದ್ದೆ. ನನ್ನ ಗಂಡ 2016 ರಲ್ಲಿಯೇ ಸಂಸ್ಥೆಗೆ ರಾಜೀನಾಮೆ ಕೊಟ್ಟು ಬೇರೆ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳಿಂದ ಅವರು ಮನೆಗೆ ಬಂದಿಲ್ಲ. ಮಾಧ್ಯಮದಲ್ಲಿ ನೋಡಿದ ಮೇಲೆ ನನಗೂ ವಿಷಯ ಗೊತ್ತಾಗಿದೆ. ಗುರೂಜಿಗೆ ಹೀಗೆ ಮಾಡಬಾರದಾಗಿತ್ತು. ಗುರೂಜಿ ತುಂಬಾ ಒಳ್ಳೆಯವರಿದ್ದರು ಎಂದು ಆರೋಪಿ ಪತ್ನಿ ವನಜಾಕ್ಷಿ ಅವರು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES