Friday, January 24, 2025

ಹಿರಿಯ ನಟಿ ಶ್ರೀಮತಿ ವಿದ್ಯಾ ಮೂರ್ತಿಯ ಜೀವನದ ಯಶೋಗಾಥೆ ಅನಾವರಣ

ಏನನ್ನಾದರೂ ಸಾಧಿಸಬೇಕೆಂದರೆ ಕಷ್ಟ ಪಡಬೇಕಂತೆ. ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕಷ್ಟಪಡದೆ ದೊರೆತ ಯಶಸ್ಸಿಗೆ ಅಷ್ಟು ಬೆಲೆಯೂ ಇರುವುದಿಲ್ಲ. ಮೊದಲಿಗೆ ಸಾಧನೆ ಎಂದರೆ ಏನು ಅನ್ನೋದೆ ನನಗೆ ತಿಳಿದಿರಲಿಲ್ಲ. ಓದಿನಲ್ಲಾಗಲಿ, ಕ್ರೀಡೆಯಲ್ಲಾಗಲಿ ಯಾವುದರಲ್ಲೂ ಅತೀ ಯಶಸ್ಸುಗಳಿಸಬೇಕೇಂದು ನನಗೆ ಅನಿಸಿರಲೇ ಇಲ್ಲ, ಇಂಥ ನಿರ್ಲಿಪ್ತ ಚಿತ್ತೆಗೆ, ಕಿಂಚಿತ್ತಾದರೂ ಪ್ರತಿಭೆ ಇದೆ ಎಂಬುದನ್ನ ಗುರುತಿಸಿದವರು ನನ್ನ ಮಿಡ್ಲ್ ಸ್ಕೂಲ್ ಟೀಚರ್ ರತ್ನಮ್ಮ ಎನ್ನುತ್ತಾರೆ.

ನಮ್ಮ ಈ ವಾರದ ಯಜಮಾನಿ ಹಿರಿಯ ನಟಿ, ಖ್ಯಾತ ರಂಗಭೂಮಿ ಕಲಾವಿದೆ ಶ್ರೀ ಮತಿ ವಿದ್ಯಾ ಮೂರ್ತಿ. ಹೌದು. ವಿದ್ಯಾ ಮೂರ್ತಿ, ಕೊಡಗು ಜಿಲ್ಲೆಯ ಪರ್ವತ ಧಾಮ,ಮಡಕೇರಿಯಲ್ಲಿ ಜನಿಸಿದರು. ಅವರ ತಂದೆ ಮಡಕೇರಿಯಲ್ಲಿ ನೌಕರಿಯಲ್ಲಿದ್ದರು. ತಂದೆಯವರು ಹಾಸನ ಜಿಲ್ಲೆಯ ಮಾವಿನಕೆರೆ ಗ್ರಾಮದವರು. ವಿದ್ಯಾರವರು, ಹೆರಗು ನರಸಿಂಹ ಮೂರ್ತಿಯವರನ್ನು ಮದುವೆಯಾದರು. ವಿದ್ಯಾರವರ ಸೋದರ, ಜಿ.ಕೆ.ಜಗದೀಶ್ ವಿದ್ಯಾರವರಿಗೆ ಆದರ್ಶಪ್ರಾಯರು. ಜಗದೀಶ್ ಭರತನಾಟ್ಯ ಪ್ರವೀಣರಲ್ಲದೆ ನಟನಾ ಸಾಮರ್ಥ್ಯವನ್ನೂ ಹೊಂದಿದ್ದರು.

ವಿದ್ಯಾ, ಕನ್ನಡ ಸಾಹಿತ್ಯದಲ್ಲಿ ಆಸಕ್ತರು. ಎಕೊನೊಮಿಕ್ಸ್, ಮತ್ತು ಮನಶ್ಯಾಸ್ತ್ರದ ವಿದ್ಯಾರ್ಥಿನಿ. ಲೇಖಕಿಯರ ಬಳಗದಲ್ಲಿ ಸಕ್ರಿಯರಾಗಿ ಕೆಲಸಮಾಡುತ್ತಿದ್ದರು. ಮಾಯಾ ಮೃಗ, ಬದುಕು, ಮುಕ್ತ ಮುಕ್ತ, ಕೃಷ್ಣ ತುಳಸಿ, ಮಗಳು ಜಾನಕಿ, ಮೌನರಾಗ, ಹಿಟ್ಲರ್ ಕಲ್ಯಾಣ ಸೇರಿದಂತೆ ಅನೇಕ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ರಂಗಭೂಮಿ ಕಲಾವಿದೆಯೂ ಹೌದು. ಇವರು ಅಭಿನಯಿಸಿರುವ ನಾದಜ್ಯೋತಿ ಮುತ್ತು ಸ್ವಾಮಿ ದೀಕ್ಷಿತರು, ದಾಸ ಪುರಂದರ, ಹೋಂರೂಲ್, ಹುತ್ತದ ಸುತ್ತ, ಯಶೋಧರೆ, ಅಮ್ಮಾ ರಿಡೈರ್ ಆಗ್ತಾಳೆ, ತನುವು ನಿನ್ನದೆ ಮನವು ನಿನ್ನದೆ, ಸ್ಮಶಾನ ಕುರುಕ್ಷೇತ್ರ ಸೇರಿದಂತೆ ಹಲವು ನಾಟಕಗಳು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು ಅನೇಕ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ತಮ್ಮ ಶಾಲಾ ಕಾಲೇಜಿನ ದಿನಗಳಿಂದಲೇ ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾ ವಿದ್ಯಾರವರು ಎನ್.ಎಂ.ಕೆ.ಆರ್.ವಿ.ಕಾಲೇಜಿನ ಪ್ರಥಮ ಬ್ಯಾಚಿನ ವಿದ್ಯಾರ್ಥಿನಿಯಾಗಿದ್ದರು. ಆಗಿನ ಪ್ರಾಂಶುಪಾಲೆ ಸಿ.ಏನ್.ಮಂಗಳರವರು ವಿದ್ಯಾರವರನ್ನು ತಮ್ಮ ಕಾಲೇಜಿಗೆ ಆರಿಸಿಕೊಂಡರು. ಡಾ.ಮಂಗಳಾರವರು ವಿದ್ಯಾರವರ ಅಭಿನಯ ಕಲೆಯ ಪ್ರತಿಭೆಯ ಬಗ್ಗೆ ಕೇಳಿ ಪ್ರಭಾವಿತರಾಗಿದ್ದರು. ಆದರೆ ವಿದ್ಯಾ ಪೋಷಕರು ಅಭಿನಯ ಕಲೆಯ ಆಯ್ಕೆ ಬಗ್ಗೆ ಸಮ್ಮತಿ ನೀಡಿರಲಿಲ್ಲ. ಇಂದಿನ ಯಜಮಾನಿ ಕಾರ್ಯಕ್ರಮದಲ್ಲಿ ತಮ್ಮ ಅಂತರಾಳದ ಮಾತುಗಳನ್ನ ಹಂಚಿಕೊಂಡಿರುವ ವಿದ್ಯಾಮೂರ್ತಿ ತಮ್ಮ ವಯಕ್ತಿಕ ಬದುಕಿನ ಕಷ್ಟದ ದಿನಗಳು.. ಕಿರುತೆರೆಗೆ ಕಾಲಿಟ್ಟ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಸರಳ, ಸಜ್ಜನಿಕೆಯ, ಸದಾ ಎಲ್ಲರನ್ನೂ ತಮ್ಮವರಂತೆ ಕಾಣುವ ವಿದ್ಯಾಮೂರ್ತಿಯವರ ಸಹಜ ಅಭಿನಯಕ್ಕೆ ಮನಸೋಲದವರಿಲ್ಲ.

RELATED ARTICLES

Related Articles

TRENDING ARTICLES