Wednesday, January 22, 2025

ನವೆಂಬರ್​​ನಲ್ಲಿ ಗಂಧದಗುಡಿಯಿಂದ ರಾಜರತ್ನ ಆಗಮನ

ಯುಗ ಯುಗಗಳೇ ಕಳೆದರೂ ಅಪ್ಪು ನೆನಪು ಮಾತ್ರ ಶಾಶ್ವತ. ಕೋಟ್ಯಂತರ ಅಭಿಮಾನಿಗಳ ಉಸಿರಲ್ಲಿ ಹಚ್ಚ ಹಸಿರಾಗಿ ಬೆರತಿರುವ ದೇವತಾ ಮನುಷ್ಯ ಪುನೀತ್​ ರಾಜ್​ಕುಮಾರ್​​. ಇವ್ರ ಕೊನೆಯ ಸಿನಿಮಾ ಜೇಮ್ಸ್​​​ ನೋಡಿ ಅತ್ತು ಅತ್ತು ಕಣ್ಣೀರಾಕಿದ್ದ ಅಭಿಮಾನಿಗಳು, ಸಿಲ್ವರ್​ ಸ್ಕ್ರೀನ್​ ಮೇಲೆ ಕೊನೆಯ ಬಾರಿ ದೇವರನ್ನ ಕಣ್ತುಂಬಿಕೊಂಡಿದ್ರು. ಇದೀಗ ಅಪ್ಪು ಅಭಿನಯದ ಮತ್ತೊಂದು ಸಿನಿಮಾ ಗಂಧದಗುಡಿ ರಿಲೀಸ್​ಗೆ ಸಜ್ಜಾಗಿದೆ.

ನವೆಂಬರ್​​ನಲ್ಲಿ ಗಂಧದಗುಡಿಯಿಂದ ರಾಜರತ್ನ ಆಗಮನ

ಅಪ್ಪು ಡ್ರೀಮ್ ಪ್ರಾಜೆಕ್ಟ್​ನಲ್ಲಿ ವನಸಿರಿ ಮತ್ತು ಪ್ರಾಣಿ ಸಂಕುಲ

ಕೋಟಿ ಕೋಟಿ ಹೃದಯಗಳನ್ನು ಕಲಕಿದ ಅಧಮ್ಯ ಚೇತನ ಅಪ್ಪು. ಅಭಿಮಾನಿಗಳ ಪಾಲಿಗೆ ಸಾಕ್ಷಾತ್​​ ದೇವರಾಗಿರುವ ಪುನೀತ್​ರನ್ನ​ ಕಂಡ್ರೆ, ಪುಟಾಣಿ ಮಕ್ಕಳಿಗೂ ಜೀವ. ಕೇವಲ ಸಿನಿಮಾ ಮಾತ್ರವಲ್ಲ, ತಮ್ಮ ಸಾಮಾಜಿಕ ಸೇವೆಯ ಮೂಲಕವೂ ಧ್ರುವತಾರೆಯಾಗಿ ಹೊಳೆದ ಅಪ್ರತಿಮ ಕಲಾವಿದ. ಅಪ್ಪು ಇನ್ನಿಲ್ಲ ಅನ್ನೋ ಪದವೇ ಕಣ್ಣಂಚಲ್ಲಿ ನೀರು ತರಿಸಿಬಿಡುತ್ತೆ. ಅವರೆಂದೂ ಜೀವಂತ. ಇದೀಗ ಅಪ್ಪು ಕನಸಿನ ಪ್ರಾಜೆಕ್ಟ್​ ಗಂಧದಗುಡಿ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ.

ಪುನೀತ್​ ಅಭಿನಯದ ಜೇಮ್ಸ್​ ಅವ್ರ ಕೊನೆಯ ಸಿನಿಮಾ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಪುನೀತ್​​ ಭಾವನಾತ್ಮಕವಾಗಿ ಬೆರೆತು ಹೋಗಿದ್ದ, ಇಷ್ಟ ಪಟ್ಟು ಮಾಡಿದ್ದ ಡಾಕ್ಯುಮೆಂಟರಿ ಗಂಧದಗುಡಿ. ಕಾಡು, ಮೇಡು, ಪರಿಸರ, ಪ್ರಾಣಿಗಳೊಂದಿಗೆ ಬೆರೆತಿದ್ದ ಅಪ್ಪು ಅವ್ರು, ಈ ಪ್ರಾಜೆಕ್ಟ್​​ನ ತುಂಬಾ ಇಷ್ಟ ಪಟ್ಟು ಮಾಡಿದ್ರು.  ಮೇಕಪ್​ ಬೇಡ ಎಂದಿದ್ದ ಅಪ್ಪು ನಗುನಗುತ್ತಾ, ಪ್ರಕೃತಿಯನ್ನು ಆಸ್ವಾದಿಸುತ್ತಾ, ಬೆಟ್ಟ ಗುಡ್ಡ ಹತ್ತಿ ಇಳಿದಿದ್ರು. ಇದೀಗ ಈ ಡಾಕ್ಯುಮೆಂಟರಿ ಸಿನಿಮಾ ಆಗಿ ತೆರೆಗೆ ಬರ್ತಿದೆ.

ಪವರ್​​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಗಂಧದಗುಡಿ ಸಿನಿಮಾನ ಪಿಆರ್​ಕೆ  ಸ್ಟುಡಿಯೋಸ್​ ನಿರ್ಮಾಣ ಮಾಡ್ತಿದೆ. ಈಗಾಗ್ಲೇ ಗಂಧದಗುಡಿ ಟೀಸರ್​​​​ ಮಿಲಿಯನ್​ಗಟ್ಟ್ಟಲೆ ವೀವ್ಸ್ ದಾಖಲಿಸಿದೆ. ಸಾಮಾನ್ಯವಾಗಿ ಡಾಕ್ಯುಮೆಂಟ್​ ಚಿತ್ರಗಳು ಥಿಯೇಟರ್​​ನಲ್ಲಿ ರಿಲೀಸ್​ ಮಾಡೋದು ಕಡಿಮೆ. ಆದ್ರೆ ಈ ಚಿತ್ರವನ್ನು ಸಿನಿಮಾಗೆ ಒಂದಷ್ಟು ಸಿನಿಮ್ಯಾಟಿಕ್ ಟಚ್ ನೀಡಲಾಗಿದ್ದು, ನೇರವಾಗಿ ಥಿಯೇಟರ್​​ನಲ್ಲಿ ರಿಲೀಸ್ ಮಾಡಲಾಗ್ತಿದೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಗಂಧದಗುಡಿ ಸಿನಿಮಾ ನವೆಂಬರ್​ಗೆ ರಿಲೀಸ್​ ಆಗೋ ಪೋಸ್ಟರ್​​ ಸಖತ್​ ವೈರಲ್​ ಆಗಿದೆ.

ಅಮೋಘವರ್ಷ ಅವರ ನಿರ್ದೇಶನದಲ್ಲಿ, ಅಶ್ವಿನಿ ಪುನೀತ್​ರಾಜ್​ಕುಮಾರ್​ ನಿರ್ಮಾಣದಲ್ಲಿ ತೆರೆಗೆ ಬರಲಿದೆ. ಪ್ರತೀಕ್​ ಶೆಟ್ಟಿ ಕ್ಯಾಮೆರಾ ಕೈಚಳಕ ಹೊಸ ದೃಶ್ಯವೈಭವ ತೋರಲಿದೆ. ಎನಿವೇ ಈ ಸಿನಿಮಾ ಮೂಲಕ ಮತ್ತೊಮ್ಮೆ ಅಪ್ಪುಅವರನ್ನು ನಾವೆಲ್ಲಾ ಬರಮಾಡಿಕೊಳ್ಳಬಹುದು. ಶಿಳ್ಳೆ, ಚಪ್ಪಾಳೆಯಿಂದ ಅವ್ರಿಗೆ ಬಹುಪರಾಕ್ ಹೇಳಬಹುದು.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES