Wednesday, January 22, 2025

7 ವರ್ಷದ ನಂತ್ರ ಬಾಲಿವುಡ್​​ಗೆ ರಂಗಿತರಂಗ ರಿಮೇಕ್..?

ಅಬ್ಬಬ್ಬಾ.. ಕನ್ನಡಿಗರ ಗತ್ತು ಅಂದ್ರೆ ಇದಲ್ಲವೇ..? ಇತ್ತೀಚೆಗೆ ನಮ್ಮ ಕನ್ನಡದ ಸಿನಿಮಾಗಳು ಎಲ್ಲೆಲ್ಲೂ ಹಂಗಾಮ ಮಾಡ್ತಿವೆ. ಅದ್ರಲ್ಲೂ ನಮ್ಮ ಟೆಕ್ನಿಷಿಯನ್ಸ್​ಗೆ ಪರಭಾಷಿಗರು ರೆಡ್ ಕಾರ್ಪೆಟ್ ಹಾಕಿ, ವೆಲ್ಕಮ್ ಹೇಳ್ತಿದ್ದಾರೆ. ಮತ್ತೊಬ್ಬ ಕನ್ನಡದ ಡೈರೆಕ್ಟರ್ ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ.

ಅಕ್ಷಯ್ ಕುಮಾರ್​ಗೆ ರೋಣ ಡೈರೆಕ್ಟರ್ ಆ್ಯಕ್ಷನ್ ಕಟ್..?

7 ವರ್ಷದ ನಂತ್ರ ಬಾಲಿವುಡ್​​ಗೆ ರಂಗಿತರಂಗ ರಿಮೇಕ್..?

ಭಾರತೀಯ ಚಿತ್ರರಂಗದಲ್ಲೆಲ್ಲಾ ಚಾಲ್ತಿಯಲ್ಲಿರೋ ಏಕೈಕ ಹೆಸ್ರು ವಿಕ್ರಾಂತ್ ರೋಣ. ಯೆಸ್.. ರಕ್ಕಮ್ಮನ್ನ ಕಿಕ್ಕಿನ ಜೊತೆ ರೋಣನ ಜಬರ್ದಸ್ತ್ ಎಂಟ್ರಿಗೆ ಎಲ್ರೂ ಸಖತ್ ಕಾತರರಾಗಿದ್ದಾರೆ. ಈ ರೋಣನ ಹಿಂದಿರೋ ಮಾಸ್ಟರ್​ಮೈಂಡ್ ಅನೂಪ್ ಭಂಡಾರಿ ಕೂಡ ಮೇಕಿಂಗ್​ನಿಂದ ಸದ್ದು ಗದ್ದಲ ಮಾಡ್ತಿದ್ದಾರೆ. ಅದ್ರಲ್ಲೂ ಬಾಲಿವುಡ್​ನಲ್ಲಿ ರೋಣ ಕ್ಯಾಪ್ಟನ್ ಹವಾ ಸಿಕ್ಕಾಪಟ್ಟೆ ಜೋರಿದೆ.

ಅಫ್ ಕೋರ್ಸ್​ ರೋಣ ಪ್ಯಾನ್ ಇಂಡಿಯಾ ಮೂವಿ. ಅಲ್ಲದೆ ಇಂಗ್ಲೀಷ್​ನಲ್ಲೂ ಬರ್ತಿದೆ. ಈಗ ಅನೂಪ್ ಭಂಡಾರಿ ಸದ್ದು ಮಾಡೋದು ಸರ್ವೇ ಸಾಮಾನ್ಯ ಅಂತ ನೀವು ಅಂದ್ಕೊಂಡ್ರೆ ತಪ್ಪಾಗುತ್ತೆ. ಸದ್ಯ ಅನೂಪ್​ಗೆ ಬಾಲಿವುಡ್​ನಲ್ಲಿ ಡಿಮ್ಯಾಂಡ್ ಕ್ರಿಯೇಟ್ ಆಗಿರೋದು ಏಳು ವರ್ಷದ ಹಿಂದಿನ ರಂಗಿತರಂಗದಿಂದ ಅನ್ನೋದು ವೆರಿ ವೆರಿ ಇಂಟರೆಸ್ಟಿಂಗ್ ಹಾಗೂ ಸರ್​ಪ್ರೈಸಿಂಗ್ ಅನಿಸಿದೆ.

ಕನ್ನಡ ಚಿತ್ರರಂಗದಲ್ಲಿ ಭಿನ್ನ ಅಲೆಯ ಸಿನಿಮಾ ಅನಿಸಿಕೊಂಡ ರಂಗಿತರಂಗ, ದೇಶ ವಿದೇಶಗಳಲ್ಲೆಲ್ಲಾ ಸದ್ದು ಮಾಡಿತು. ಬಾಹುಬಲಿ ಅಂತಹ ಬೃಹತ್ ಅಲೆಯ ಎದುರು ದೃಢವಾಗಿ ನೆಲೆ ನಿಂತು, ತನ್ನ ಗಮ್ಮತ್ತು ತೋರಿಸಿತು. ಇದೀಗ ಈ ಸಿನಿಮಾ ಬಾಲಿವುಡ್​ಗೆ ರಿಮೇಕ್ ಆಗಲಿದ್ದು, ಅನೂಪ್ ಅವ್ರೇ ಆ್ಯಕ್ಷನ್ ಕಟ್ ಕೂಡ ಹೇಳಲಿದ್ದಾರೆ. ವಿಶೇಷ ಅಂದ್ರೆ ಅದ್ರಲ್ಲಿ ಅಕ್ಷಯ್ ಕುಮಾರ್ ಅಥ್ವಾ ಶಾಹಿದ್ ಕಪೂರ್ ನಾಯಕನಟನಾಗಿ ಕಾಣಸಿಗಲಿದ್ದಾರೆ ಅನ್ನೋದು ಇಂಡಸ್ಟ್ರಿ ಟಾಕ್.

ಇದಿನ್ನೂ ಮಾತುಕತೆ ಹಂತದಲ್ಲಿರೋದ್ರಿಂದ ಈಗಲೇ ಏನನ್ನೂ ಹೇಳಲಾಗಲ್ಲ. ವಿಕ್ರಾಂತ್ ರೋಣದಿಂದ ಆಫರ್ ಬಂದಿಲ್ಲ. ರಂಗಿತರಂಗ ರಿಲೀಸ್ ಆದಾಗಿನಿಂದಲೂ ಡಿಮ್ಯಾಂಡ್ ಇತ್ತು. ಸೂಕ್ತ ಸಮಯಕ್ಕಾಗಿ ಕಾಯ್ತಿದ್ದೆ ಎಂದಿರೀ ಅನೂಪ್, ಇದೀಗ ಬಾಲಿವುಡ್ ಎಂಟ್ರಿಗೆ ಸನ್ನದ್ಧರಾಗ್ತಿರೋದು ಖಾತರಿ ಆಗಿದೆ. ಕನ್ನಡಿಗರು ಈ ರೀತಿ ಬೇಡಿಕೆ ಹೆಚ್ಚಿಸಿಕೊಳ್ತಿರೋದು ನಿಜಕ್ಕೂ ಹೆಮ್ಮೆಯ ವಿಷ್ಯ. ಬೆಸ್ಟ್ ವಿಶಸ್ ಟು ಯು ಅನೂಪ್ ಭಂಡಾರಿ ಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES