Wednesday, January 22, 2025

ರಾಮನಗರದಲ್ಲಿ ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಪತ್ತೆ

ರಾಮನಗರ : ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿ ನಡೀತಿತ್ತು, ಈ ವೇಳೆ ಪುರಾತನ ಕಾಲದ ನೆಲಮಾಳಿಗೆಯೊಂದು ಪತ್ತೆಯಾಗಿದ್ದು, ಅದು ಟಿಪ್ಪು ಸುಲ್ತಾನ್ ಕಾಲದ ಮಾದರಿಯನ್ನೇ ಹೋಲುವ ರೀತಿ ಕಾಣುತ್ತಿದೆ ಎನ್ನಲಾಗಿದೆ.

ಹಳೆ ಕಟ್ಟಡವನ್ನು ತೆರವು ಮಾಡುವ ವೇಳೆ ರಾಮನಗರ ಟೌನ್​ನ ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಪಕ್ಕದಲ್ಲಿ ನಿಗೂಢ ರೀತಿಯಲ್ಲಿ ನೆಲಮಾಳಿಗೆ ಪತ್ತೆಯಾಗಿದೆ. ಇದು ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ, ಟಿಪ್ಪು ಯುದ್ದ ಮಾಡುವ ಸಂಧರ್ಭದಲ್ಲಿ ಈ ರೀತಿ ನೆಲಮಾಳಿಗೆ ಬಳಸುತ್ತಿದ್ದರು, ಇದೇ ರೀತಿ ಹೋಲುವ ನೆಲಮಾಳಿಗೆಗಳು ಶ್ರೀರಂಗಪಟ್ಟಣ ಸೇರಿ ಹಲವು ಕಡೆ ಇದ್ದು, ಈ ಹಿಂದೆ ಶಸ್ತ್ರಾಸ್ತ್ರಗಳನ್ನು ಇಡಲು ಹಾಗೂ ಜೈಲಿನ ರೀತಿ ಈ ನೆಲಮಾಳಿಗೆಗಳನ್ನು ಬಳಸಲಾಗಿತ್ತು ಎನ್ನಲಾಗ್ತಿದೆ.

ಅಂದ ಹಾಗೆ, ಈ ರೀತಿ ಒಂದು ನೆಲಮಾಳಿಗೆ ಪತ್ತೆಯಾಗಿರುವುದರ ಬಗ್ಗೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯರು ಕೂಡ ಇದು ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಅಂತಾ ಹೇಳ್ತಾ ಇದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕೂಡ ಕ್ರಮ ವಹಿಸುತ್ತದೆ. ಪುರಾತತ್ವ ಇಲಾಖೆಗೆ ನಾವು ಪತ್ರ ಬರೆಯುತ್ತೇವೆ. ಪುರಾತತ್ವ ಇಲಾಖೆ ಪರಿಶೀಲನೆ ಮಾಡಿದ ನಂತರ ಅದು ಟಿಪ್ಪು ಸುಲ್ತಾನ್ ಕಾಲದ ನೆಲಮಾಳಿಗೆ ಎಂದು ಖಚಿತವಾದ ಮೇಲೆ ಅದನ್ನು ಸಂರಕ್ಷಿಸಲಾಗುವುದು ಎಂದು ರಾಮನಗರ ಜಿಲ್ಲಾಧಿಕಾರಿ ಹೇಳಿದ್ರು.

ಒಟ್ಟಾರೆ ಈ ನೆಲಮಾಳಿಗೆ ಪತ್ತೆಯಾದ ನಂತರ ಸಾಕಷ್ಟು ಅನುಮಾನಗಳು ಹುಟ್ಟಿದ್ದು ಪುರಾತತ್ವ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದ ನಂತರವಷ್ಟೇ ಸತ್ಯಾಸತ್ಯತೆ ಹೊರಬೀಳಲಿದೆ.

ಪ್ರವೀಣ್ ಎಂ.ಹೆಚ್.ಪವರ್ ಟಿವಿ ರಾಮನಗರ

RELATED ARTICLES

Related Articles

TRENDING ARTICLES