Wednesday, January 22, 2025

ಪವರ್ TVಯಲ್ಲಿ ಯಶ್ ಮುಂದಿನ 4 ಪ್ರಾಜೆಕ್ಸ್ಟ್ ಡಿಟೇಲ್ಸ್

ಧುಮ್ಮಿಕ್ಕಿ ಬರೋ ಅಲೆಯನ್ನು ತಡೆಯೋಕೆ ಯಾರಿಂದಲು ಸಾದ್ಯವಿಲ್ಲ.  ಕನ್ನಡ ಚಿತ್ರರಂಗದ ತಾಕತ್ತನ್ನು ವಿಶ್ವ ಮಟ್ಟದಲ್ಲಿ ತಲೆಎತ್ತಿ ನಿಲ್ಲಿಸಬೇಕು ಎಂದು ಕನಸು ಕಂಡಿದ್ದ ಗಂಡೆದೆ ಧೀರ ರಾಕಿಭಾಯ್​​​. ಇದೀಗ ಸಂಭಾವನೆಯ ಲೆಕ್ಕಾಚಾರದಲ್ಲಿ ಶತಕ ದಾಟಿರುವ ಶೂರ ಈ ಸುಲ್ತಾನ. ಯೆಸ್​​.. ಎಂಟೆದೆಯ ಬಂಟ ರಾಕಿಭಾಯ್​​ ಮುಂದೆ ಒಟ್ಟು ನಾಲ್ಕು ಬಿಗ್​​ ಪ್ರಾಜೆಕ್ಟ್​​ಗಳಿವೆ. ಈ ಸಿನಿಮಾಗಳಿಗೆ ಜಗಮೆಚ್ಚಿದ ನಿರ್ದೇಶಕರು ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಶಾಕ್​ ಆಗ್ಬೇಡಿ..! ನೀವೇ ಓದಿ.

  • ಧರೆಯೇ ಉರಿದು ನಿಂತರು  ನಿಲ್ಲದ ಯಶ್​​ ನಾಗಾಲೋಟ

ನರಾಚಿಯಲ್ಲಿ ಹೆದರಿ ನಿಂತ ಕಂಗಳ ನೀರ ಒರೆಸೋಕೆ ತೊಡೆ ತಟ್ಟಿ ಬಂದವನೇ ರಾಕಿಭಾಯ್​​​. ಕೆಜಿಎಫ್​​ ಯಶಸ್ಸಿನ ನಂತ್ರ ರಾಕಿಂಗ್​ ಸ್ಟಾರ್​ ಬೇಡಿಕೆ  ನೆಕ್ಸ್ಟ್​​ ಲೆವೆಲ್​ ತಲುಪಿದೆ. ಸಣ್ಣ ಪುಟ್ಟ ಪ್ರಾಜೆಕ್ಟ್​ಗಳಂತು  ಯಶ್​​​ ಕೈಲಿಲ್ಲ. ವಿಶ್ವಮಟ್ಟದಲ್ಲಿ ತನ್ನ ಬ್ರಾಂಡ್​ ಇಮೇಜ್​​ನ್ನು ದೊಡ್ಡ ಮಟ್ಟದಲ್ಲಿ ಕ್ರಿಯೇಟ್​ ಮಾಡಿರುವ ರಾಕಿಭಾಯ್​​ ಕಾಲ್​​ಶೀಟ್​ ಸಿಗೋದು 100 % ಅನುಮಾನ​​. ಇತ್ತ ಕೆಜಿಎಫ್​​​-3 ಸಿನಿಮಾ ಕೂಡ ಬರೋ ಮುನ್ಸೂಚನೆ ಚಿತ್ರರಸಿಕರ ಎದೆಯಲ್ಲಿ ಕುತೂಹಲದ ಜ್ವಾಲಾಮುಖಿ ಉಕ್ಕಿಸಿದೆ.

ರಾಕಿಂಗ್​ ಸ್ಟಾರ್​ ಯಶ್​​ ನೆಕ್ಸ್ಟ್​​ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ  ಕ್ಯೂರಿಯಾಸಿಟಿ ಕೋಟ್ಯಂತರ ಅಭಿಮಾನಿಗಳಲ್ಲಿ ಇದೆ. ಇತ್ತ ನೂರರ ಗಡಿ ದಾಟಿರುವ ಯಶ್​ ಸಂಭಾವನೆಗೆ ಸಣ್ಣ ಪುಟ್ಟ ನಿರ್ಮಾಪಕರು ಕೂಡ ಯಶ್​ ಮನೆ ಬಾಗಿಲು ತಟ್ಟುವಂತಿಲ್ಲ. ಸಾವಿರ ಕೋಟಿಯ ಲೆಕ್ಕಾಚಾರದಲ್ಲಿರೋ ಯಶ್​​ ಬತ್ತಳಿಕೆಯಲ್ಲಿ ಸದ್ಯ ನಾಲ್ಕು ಪ್ರಖ್ಯಾತ ನಿರ್ದೇಶಕರ ಹೆಸರುಗಳು ಓಡಾಡ್ತಿವೆ. ಅಂದುಕೊಂಡಂತೆ ಈ ಸ್ಟಾರ್​ ನಿರ್ದೇಶಕರ ಜೊತೆ ಯಶ್​​ ಸಿನಿಮಾ ಮಾಡಿದ್ರೆ, ಅಭಿಮಾನಿಗಳಿಗಂತೂ ಮನರಂಜನೆಯ ಮಾರಿಹಬ್ಬ.

  • ರೋಬೋ ಪಳಗಿಸಿದ್ದ ಶಂಕರ್​ ಕಣ್ಣಲ್ಲಿ ರಾಕಿಭಾಯ್​​..!
  • ನೂರು ಕೋಟಿಗೂ  ಸೈ.. ದಿಲ್​ರಾಜು -ಯಶ್​ ಕಾಂಬೋ

ಕನ್ನಡ ಸಿನಿಮಾಗಳಂದ್ರೆ ಅಸಡ್ಡೆಯಿಂದ ನೋಡ್ತಾ ಇದ್ದ ಸ್ಟಾರ್​  ನಿರ್ದೇಶಕರು ಯಶ್​​​ ಕಾಲ್​ಶೀಟ್​ಗೆ ವೇಯ್ಟ್​ ಮಾಡ್ತಿದ್ದಾರೆ. ಭಯದ ಬೆವರ ಇಳಿಸಿ ಕನ್ನಡದ ಧ್ವಜವನ್ನು ಗಗನದೆತ್ತರಕ್ಕೆ ಹಾರಿಸಿದ ನಟ ರಾಖಿಭಾಯ್​​. ಇದೀಗ ತಮಿಳಿನ ಸ್ಟಾರ್​ ಡೈರೆಕ್ಟರ್​ ಶಂಕರ್​ ಕೂಡ ಯಶ್​​ಗೆ ಆ್ಯಕ್ಷನ್​ ಕಟ್​​ ಹೇಳಲಿದ್ದಾರಂತೆ. ಶಂಕರ್​ ನಿರ್ದೇಶನದ ಐ, ರೋಬೋ, 2.0 ಸಿನಿಮಾಗಳ ದರ್ಬಾರ್​ ಎಲ್ರಿಗೂ ಗೊತ್ತು. ಇನ್ನು ರಾಕಿಭಾಯ್​ಗೆ ಶಂಕರ್​ ಆ್ಯಕ್ಷನ್​​ ಕಟ್​ಹೇಳಿದ್ರೆ ಹಾಲಿವುಡ್​​ ರೇಂಜ್​ಗೆ ಹಾವಳಿ ಮಾಡೋದು ಖಂಡಿತ.

ಮಫ್ತಿ ಚಿತ್ರದ ಮೂಲಕ ಮೂಲಕ ಬ್ಲಾಕ್​​ ಬಸ್ಟರ್​ ಹಿಟ್​ ಸಿನಿಮಾ ಕೊಟ್ಟ ನರ್ತನ್​ ಯಶ್​ಗಾಗಿಯೇ ವಿಭಿನ್ನ ಕಥೆ ರೆಡಿ ಮಾಡಿಕೊಂಡಿದ್ದಾರೆ. ಹಿಂದೆಂದೂ ಕೇಳಿರದ ಮಾಸ್​ ಕಥೆಯೊಂದನ್ನು ಸಿದ್ದಪಡಿಸಿಕೊಂಡಿರೋ ನರ್ತನ್​​​ ಯಶ್​​​ ಕಾಲ್​ಶೀಟ್​ಗಾಗಿ ಕಾಯ್ತಿದ್ದಾರೆ. ಡೇಟ್​​ ಫಿಕ್ಸ್​​ ಆದ್ರೇ ಶೂಟಿಂಗ್​ ಶುರುವಾಗೋದು ಪಕ್ಕಾ ಆಗಲಿದೆ.

ಇನ್ನೂ ಅಚ್ಚರಿಯ ವಿಷ್ಯ ಅಂದ್ರೆ, ತೆಲುಗಿನ ಅದ್ದೂರಿ ಸಿನಿಮಾಗಳನ್ನ ನಿರ್ಮಾಣ  ಮಾಡಿದ ದಿಲ್​ರಾಜು ಯಶ್​ಗೆ ನೂರು ಕೋಟೊ ಸಂಭಾವನೆ ಕೊಟ್ಟು ಮುಂದಿನ ಸಿನಿಮಾಗೆ ಬುಕ್​ ಮಾಡಿದ್ದಾರೆ ಎನ್ನಲಾಗ್ತಿದೆ. ಸಂಭಾವನೆಯೇ ನೂರು ಕೋಟಿ ಅಂದ್ರೆ ಪ್ಯಾನ್​ ಇಂಡಿಯಾ ಸಿನಿಮಾದ ಮೇಕಿಂಗ್​ ಯಾವ ರೀತಿ ಇರಲಿದೆ ಜಸ್ಟ್​ ಇಮ್ಯಾಜಿನ್​ ಮಾಡ್ಕೋಳಿ.

ರಾಕಿಭಾಯ್​ ಬರೋವರೆಗು ಮಾತ್ರ ಬೇರೆಯವರ ಹವಾ ಇತ್ತು. ರಾಕಿ ಬಂದ್ಮೇಲೆ ಪೂರ ಇವದ್ದೇ ಹವಾ ಶುರುವಾಗಿದೆ. ಯೆಸ್​​.. ಕೆಜಿಎಫ್​​ ಚಾಪ್ಟರ್​ 2 ಸಿನಿಮಾ 1500 ಕೋಟಿ ಕಲೆಕ್ಷನ್​ ಮಾಡಿತು. ಇನ್ನು ನೀಲ್​ ಮೇಕಿಂಗ್​ ಸ್ಟೈಲ್​ ಮೆಚ್ಚಿಕೊಂಡಿರೋ ಫ್ಯಾನ್ಸ್​​ ಕೆಜಿಎಫ್​ 3 ಸಿನಿಮಾಗಾಗಿ ಕಾಯ್ತಾ ಇದ್ದಾರೆ. ಸಲಾರ್​ ಪ್ರಾಜೆಕ್ಟ್​ ಮುಗಿದ ಮೇಲೆ ನೀಲ್​ ನೇರವಾಗಿ ಕೆಜಿಎಫ್​ 3 ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಅನ್ನೋ ಟಾಕ್​ ಶುರುವಾಗಿದೆ. ಎನಿವೇ ರಾಕಿಭಾಯ್​ ಒಟ್ಟು ನಾಲ್ಕು ಭರ್ಜರಿ ಸಿನಿಮಾಗಳ ಸರದಾರನಾಗಿ ಮೆರೆಯಲಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES